ಇಂಡಿ: ಬ್ಯಾಂಕುಗಳು ಜನಸ್ನೇಹಿ, ರೈತ ಸ್ನೇಹಿ ಉದ್ದೇಶಗಳಿಂದ ಕೃಷಿ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುತ್ತಿವೆ. ನಮ್ಮ ದೇಶದ ಕೃಷಿ ಅಭಿವೃದ್ಧಿಗೆ ಎಸ್‌ಬಿಐ ಬ್ಯಾಂಕ್ ಅನೇಕ ರೈತಪರ ಯೋಜನೆ ಗಳನ್ನು ಹಮ್ಮಿಕೊಂಡು ಜನರ ವಿಶ್ವಾಸ ಗಳಿಸಿದೆ ಎಂದು ವಿಜಯಪುರ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೃಷ್ಣಯ್ಯ ಹೇಳಿದರು.
ಅವರು ಗುರುವಾರ ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ವಿಜಯಪೂರ ಹಾಗೂ ಇಂಡಿ ಶಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತರ ಸಂಧ್ಯಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೃಷಿ ಡೈರಿ, ಕುರಿ ಸಾಕಾಣಿಕೆ, ಟ್ರಾಕ್ಟರ್ ಸಾಲ, ಬೆಳೆ ಸಾಲ ಮತ್ತು ದೈನಂದಿನ ವ್ಯವಹಾರಗಳ ಮೆಲೆ ಸಾಲ ಸೌಲಭ್ಯ ನೀಡುತ್ತಿದ್ದೇವೆ ಎಂದು ರೈತರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Indi (Vijayapura) News: ವಿಕಲಚೇತನರಿಗೆ, ವಯೋವೃದ್ದರಿಗೆ ಕಾಳಜಿ ವಹಿಸಿ: ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ
ಪ್ರತಿಯೊಬ್ಬ ರೈತರು ಸ್ಟೇಟ್ ಬ್ಯಾಂಕಿನ ಮೂಲಕ ಸಾಲ ಪಡೆದುಕೊಂಡು ತಮ್ಮ ಆಧಾಯವನ್ನು ದ್ವೀಗುಣ ಮಾಡಿಕೊಂಡು ನಿಮಗೆ ಲಾಭ ಬಂದಾಗ ಸ್ಟೇಟ್‌ಬ್ಯಾಂಕಿನಲ್ಲಿಯೇ ಠೇವಣಿ ಇಡುವಂತಾ ಗಬೇಕು ಎಂದರು.
ವಿಜಯಪೂರ ಎಸ್‌ಬಿಐ ಶಾಖೆಯ ಉಪ ಪ್ರಬಂಧಕ ಸವಿತಾ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಹಾಗೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ನಾಲ್ಕು ಲಕ್ಷದಿಂದ ಇಪ್ಪತ್ತು ಲಕ್ಷದವರೆಗೆ ನಮ್ಮಲ್ಲಿ ಸಾಲ ಸೌಲಭ್ಯ ಇದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ರೈತರು ಬ್ಯಾಂಕ್ ನಿಂದ ಸಾಲ ಪಡೆದು ಸಕಾಲದಲ್ಲಿ ತುಂಬಿ ಮತ್ತೆ ಸಾಲ ಪಡೆಯಬಹುದು ಇದರಿಂದ ರೈತರು ತಮ್ಮ ಆದಾಯವನ್ನು ದ್ವಿಗುಣ ಮಾಡಿಕೊಂಡು ಸ್ವಾವಲಂಬಿ ಜೀವನ ಮಾಡಬಹುದು. ಸ್ಟಾಂಪ್ ಇಂಡಿಯಾ ಯೋಜನೆ 10 ಲಕ್ಷದಿಂದ ಒಂದು ಕೋಟಿಯವರೆಗೆ ಎಸ್‌ಸಿ,ಎಸ್ಟಿ, ಮತ್ತು ಮಹಿಳೆಯರು ಉಧ್ಯಮಿಗಳಾಗಬಹುದು ಎಂದು ತಿಳಿಸಿದರು.
ಭರತೇಶ ಉಪಾಧ್ಯೆ ಅವರು ಮಾತನಾಡಿ, ಪ್ರಧಾನ ಮಂತ್ರಿಗಳ ಸಾಮಾಜಿಕ ಭದ್ರತಾ ಯೋಜನೆ ಯಡಿಯಲ್ಲಿ ಖಾತೆ ಪ್ರಾರಂಭಿಸಿ ಅದರ ಸದುಪಯೋಗ ಪಡೆದುಕೊಂಡ ಮತ್ತು (ಪಿಎಂಜೆಜೆಬಿವೈ/ಎಸ್ ಬಿ ವೈ) ಅಪಘಾತದಲ್ಲಿ ಮರಣ ಹೊಂದಿದ್ದ ಖಾತೆಯ ವಾರಸುದಾರರಿಗೆ ನಾಲ್ಕು ಲಕ್ಷ ರುಪಾಯಿ ವಿಮಾ ಸೌಲಭ್ಯವನ್ನು ಅವರಿಗೆ ದೊರಕಿಸಲಾಯಿತು.
ಸಾಮಾಜಿಕ ಭದ್ರತಾ ಯೋಜನೆಗಳಾದ Pಒಎಎಃಙ,PಒSBಙ ಅಟಲ್ ಪೆನ್ಷನ್ ಯೋಜನೆ ಹಾಗೂ ಅಫಘಾತ ಮತ್ತು ಸಾಮಾನ್ಯ ಮರಣ ಹೊಂದಿದಲ್ಲಿ ಕಡಿಮೆ ವಿಮೆಯಲ್ಲಿ ಹೆಚ್ಚಿನ ಭದ್ರತೆ ಯೊಂದಿರುವ ಭಾರತೀಯ ಸ್ಟೇಟ ಬ್ಯಾಂಕ್ ನೀಡುತ್ತಿರುವ ಸೋಸಿಯಲ್ ಸೆಕ್ಯೂರಿಟಿ ಸ್ಕೀಮ್ ಗಳ ಬಗ್ಗೆ ಪ್ರದಾನ ಮಂತ್ರಿ ಜೀವನ ಜ್ಯೋತಿ, ಪ್ರಧಾನ ಮಂತ್ರಿ ಜೀವನ ಸುರಕ್ಷ ಹಾಗೂ ಅಟಲ್ ಪೆನ್ಷನ್ ಯೋಜನೆಗಳ ಬಗ್ಗೆ ಮನ ಮುಟ್ಟುವಂತೆ ರೈತಬಾಂಧವರಿಗೆ ಹಾಗೂ ಗ್ರಾಮದ ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಇಂಡಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ ಮುಖ್ಯ ವ್ಯವಸ್ಥಾಪಕ ಸುನೀಲ ಪರಿಮಳ, ವಿಜಯಪೂರ ಶಾಖೆ ವ್ಯವಸ್ಥಾಪಕ ಪಿ.ಎಸ್. ಲಮಾಣಿ, ಇಂಡಿ ಶಾಖೆಯ ಕಿರಿಯ ವ್ಯವ ಸ್ಥಾಪಕ ಪ್ರಕಾಶ್ ಗುಜ್ಜಲಕರ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ವಾಲಿಕಾರ, ರೈತ ಮುಖಂಡರಾದ ಭೀಮರಾಯ ಹಿರಾಪೂರೆ, ಸಿದ್ದು ಸಾಹುಕಾರ ಮೇತ್ರಿ, ಗಂಗಪ್ಪ ಅಹಿರಸಂಗ, ಹಾಗೂ ರೈತರು ಮತ್ತು ಬ್ಯಾಂಕ್ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಉಪಸ್ಥಿತ ರಿದ್ದರು.