ಗಾಂಧಿನಗರ: ಅಹಮದಾಬಾದ್ (Ahmedabad Plane Crash)ನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ವಿಮಾನ AI171 ಅಪಘಾತಕ್ಕೀಡಾಗಿದ್ದು, ಇದರಲ್ಲಿ 242 ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿದ್ದ ವಿದೇಶಿ ವ್ಯಕ್ತಿಯೊಬ್ಬ ವಿಮಾನ ಹತ್ತುವ ಮುನ್ನ ತೆಗೆದ ಕೊನೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಏರ್ ಇಂಡಿಯಾ ವಿಮಾನ AI171 ಅನ್ನು ಹತ್ತುವ ಕೆಲವೇ ಕ್ಷಣಗಳ ಮೊದಲು ಬ್ರಿಟಿಷ್ ಪ್ರಯಾಣಿಕ ಜೇಮೀ ರೇ ಮೀಕ್ ವಿಡಿಯೊವೊಂದನ್ನು ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದು, ಇದೀಗ ಎಲ್ಲೆಡೆ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಜೇಮೀ ರೇ ಮೀಕ್ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಗುತ್ತಾ ಭಾರತಕ್ಕೆ ಗುಡ್ ಬೈ ಹೇಳುತ್ತಿರುವುದು ಸೆರೆಯಾಗಿದೆ. “ನಾವು ವಿಮಾನ ನಿಲ್ದಾಣಕ್ಕೆ ಬಂದಿದ್ದೇವೆ. ಗುಡ್ ಬೈ ಇಂಡಿಯಾ, 10 ಗಂಟೆಗಳ ವಿಮಾನ ಪ್ರಯಾಣದಲ್ಲಿ ಲಂಡನ್‍ಗೆ ಹಿಂತಿರುಗುತ್ತಿದ್ದೇವೆ” ಎಂದು ಮೀಕ್ ಖುಷಿಯಿಂದ ಹೇಳಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ…
🚨 Jamie Ray Meek, a British citizen listed as a passenger on Air India Flight 171, reportedly shared a final Instagram Story shortly before takeoff.
He appears on the official manifest under GBR 149261531. A video believed to be his last post.#India #Crash #Ahmedabad #Boeing… pic.twitter.com/KmSpz9iOi9
— the Pulse (@thePulseGlobal) June 12, 2025
ಗುರುವಾರ (ಜೂನ್ 12) ಮಧ್ಯಾಹ್ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಫ್ಲೈಟ್ AI171ನಲ್ಲಿದ್ದ 53 ಬ್ರಿಟಿಷ್ ಪ್ರಜೆಗಳಲ್ಲಿ ಜೇಮೀ ರೇ ಮೀಕ್ ಒಬ್ಬನು. ಗುರುವಾರ ಮಧ್ಯಾಹ್ನ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಈ ವಿಮಾನ ಅಪಘಾತಕ್ಕೀಡಾಯಿತು.
ಈ ಸುದ್ದಿಯನ್ನೂ ಓದಿ:Viral Video: ಸೇಫ್ಟಿ ಇಲ್ಲ… ಶುಚಿತ್ವ ಅಂತು ಇಲ್ಲವೇ ಇಲ್ಲ! ಸಿಸೇರಿಯನ್ ಮಾಡಿದ ಆಯುರ್ವೇದಿಕ್ ಡಾಕ್ಟರ್
ಈ ಘಟನೆಯ ಬಗ್ಗೆ ಪ್ರಧಾನಿ ಮೋದಿ “ಇದು ಪದಗಳಲ್ಲಿ ಹೇಳಲಾಗದ ಹೃದಯ ವಿದ್ರಾವಕ ಘಟನೆ” ಎಂದು ಕರೆದಿದ್ದಾರೆ. ಅಪಘಾತಕ್ಕೀಡಾದವರ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಹಾಗೇ ಇಂಗ್ಲೆಂಡ್, ಯುರೋಪಿಯನ್ ಒಕ್ಕೂಟ, ಇಸ್ರೇಲ್, ಮಾಲ್ಡೀವ್ಸ್ ಮತ್ತು ಇತರ ರಾಷ್ಟ್ರಗಳ ನಾಯಕರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತನಾಡಿ ರಾಜ್ಯಕ್ಕೆ ಎಲ್ಲ ರೀತಿಯ ಸಹಾಯದ ಭರವಸೆ ನೀಡಿದ್ದಾರೆ.