Karunadu Studio

ಕರ್ನಾಟಕ

Ahmedabad Plane Crash: ಮಗ ಬೇರೆ ವಿಮಾನದಲ್ಲಿದ್ದ.. ಆದ್ರೂ ಬರ ಸಿಡಿಲು ಬಡಿದಂತಾಯಿತು! ಅಹ್ಮದಾಬಾದ್‌ ವಿಮಾನ ದುರಂತದ ಬಗ್ಗೆ ಈ ತಾಯಿ ಹೇಳೋ ಮಾತನ್ನೊಮ್ಮೆ ಕೇಳಿ – Kannada News | Ahmedabad Plane Crash: Even though my son was on a different plane, hearing the news of the Ahmedabad accident was like a thunderbolt.. says a mother


ನವದೆಹಲಿ: ವಿಮಾನ ಟೇಕ್ ಆಫ್ ಆಗುವ ಮೊದಲು ಮಗ ಕರೆ ಮಾಡಿ ನಮಗೆ ವಿದಾಯ ಹೇಳಿದ. ಅದಾಗಿ ಕೆಲವೇ ಕ್ಷಣಗಳ ಬಳಿಕ ವಿಮಾನ ಅಪಘಾತಕ್ಕೀಡಾದ (Ahmedabad Plane Crash) ವಿಷಯ ಟಿವಿಯಲ್ಲಿ ನೋಡಿದೆ. ಅದು ಭಯಾನಕ ಕ್ಷಣವಾಗಿತ್ತು ಎಂದು ತಾಯಿಯೊಬ್ಬರು ಅಹಮದಾಬಾದ್ (Ahmedabad Airport) ವಿಮಾನ ಅಪಘಾತದ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾದ (Air India) ಬೋಯಿಂಗ್ 787- 8 ಡ್ರೀಮ್‌ಲೈನರ್ ವಿಮಾನ ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಅಪಘಾತಕ್ಕೀಡಾಯಿತು. ಇದರಲ್ಲಿ 241 ಮಂದಿ ಸಾವನ್ನಪ್ಪಿದ್ದು, ಒಬ್ಬೊಬ್ಬರದ್ದು ಒಂದೊಂದು ಕಥೆ ಇದೆ.

ದೇಶಕ್ಕೆ ಗುರುವಾರ ಅತ್ಯಂತ ಕರಾಳ ದಿನ. ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಯಿತು. ಇದರಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ 242 ಪ್ರಯಾಣಿಕರಿದ್ದರು. ಅದರಲ್ಲಿ ಒಬ್ಬ ಮಾತ್ರ ಪವಾಡ ಸದೃಶವಾಗಿ ಬದುಕಿ ಉಳಿದಿದ್ದಾರೆ. ಈ ವಿಮಾನ ಅಪಘಾತವು ದೇಶ, ವಿದೇಶಗಳಾದ್ಯಂತ ಆತಂಕವನ್ನು ಉಂಟು ಮಾಡಿತ್ತು.

ನವ ವಿವಾಹಿತೆಯೊಬ್ಬರು ಪತಿಯನ್ನು ಕಾಣಲು ಹೊರಟಿದ್ದರೆ, ಇನ್ನೊಂದು ಕುಟುಂಬ ಲಂಡನ್ ನಲ್ಲೇ ಶಾಶ್ವತವಾಗಿ ನೆಲೆಸಲು ಹೊರಟಿತ್ತು… ಹೀಗೆ ಒಬ್ಬೊಬ್ಬರದ್ದು ಒಂದೊಂದು ಕಥೆ ಇದೆ. ಈ ನಡುವೆ ಮಹಿಳೆಯೊಬ್ಬರು ತಮ್ಮ ಮಗ ಲಂಡನ್ ಗೆ ಹೊರಟ ಅಂತಿಮ ವಿದಾಯದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ದೆಹಲಿಯ ನಂದಿನಿ ಬಹ್ರಾ ಅವರು ಎಕ್ಸ್ ನಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ನನ್ನ ಮಗ ದೆಹಲಿಯಿಂದ ಲಂಡನ್ ಗೆ ತೆರಳುತ್ತಿದ್ದ. ದೆಹಲಿಯಿಂದ ವಿಮಾನ ಟೇಕ್ ಆಫ್ ಆಗುವ ಮೊದಲು ತಾವು ಮಗನೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ. ಅದಾಗಿ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತದ ಸುದ್ದಿಯನ್ನು ತಾವು ಟಿವಿಯಲ್ಲಿ ವೀಕ್ಷಿಸಿರುವುದಾಗಿ ಅವರು ಹೇಳಿದ್ದಾರೆ.

ದೆಹಲಿಯಿಂದ ಲಂಡನ್‌ಗೆ ಹೋಗುವ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಸಿದ್ಧವಾಗುತ್ತಿದ್ದಂತೆ ಮಗ ನನಗೆ ಕರೆ ಮಾಡಿ ಅಂತಿಮ ವಿದಾಯ ಹೇಳಿದ. ಅವನು ವಿಮಾನದಿಂದ ಇಳಿದ ತಕ್ಷಣ ನನಗೆ ಸಂದೇಶ ಕಳುಹಿಸಲು ಹೇಳಿದೆ. ಅದು ಎಷ್ಟೇ ತಡವಾದರೂ ಪರವಾಗಿಲ್ಲ. ಕೆಲವು ಕ್ಷಣಗಳ ಅನಂತರ ನಾನು ಟಿವಿ ಆನ್ ಮಾಡಿದಾಗ ವಿನಾಶಕಾರಿ ಸುದ್ದಿ ಸಿಕ್ಕಿತು. ಲಂಡನ್‌ಗೆ ಹೋಗುವ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿದ ತಕ್ಷಣ ಒಂದು ಕ್ಷಣ ದೇಹವೇ ಕಂಪಿಸಿತ್ತು. ಆದರೆ ಅದು ತಮ್ಮ ಮಗ ಪ್ರಯಾಣಿಸುತ್ತಿದ್ದ ವಿಮಾನವಲ್ಲ ಎಂದು ತಿಳಿದು ಕೊಂಚ ನಿರಾಳವಾಯಿತು. ಆದರೆ ಆ ವಿಮಾನದಲ್ಲಿ ಮಡಿದವರು ಮತ್ತು ಅವರ ಕುಟುಂಬಸ್ಥರ ನೋವು ಎಷ್ಟಿರಬಹುದು ಎನ್ನುವ ಕಲ್ಪನೆ ನನಗಿದೆ.

ಊಹಿಸಲಾಗದ ಈ ಘಟನೆಯಿಂದ ಕುಟುಂಬಗಳು ಅನುಭವಿಸಿದ ನೋವಿಗೆ ದುಃಖವನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗುಡ್ ಬೈ ಇಂಡಿಯಾ ಎಂದವನು ಬದುಕಿಗೇ ಗುಡ್‌ಬೈ ಹೇಳಿದ; ಅಹಮದಾಬಾದ್ ವಿಮಾನ ಪತನಕ್ಕೂ ಮುನ್ನ ಬ್ರಿಟಿಷ್ ಪ್ರಯಾಣಿಕ‌ ಮಾಡಿದ್ದ ವಿಡಿಯೊ ವೈರಲ್

ಅನೇಕರಿಂದ ಸಂತಾಪ

ಮಹಿಳೆ ಎಕ್ಸ್ ನಲ್ಲಿ ತಮ್ಮ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಅನೇಕರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಸಂತಾಪ ಸೂಚಿಸಿದ್ದಾರೆ. ಕೂಡಲೇ ಇದಕ್ಕೆ ಮಹಿಳೆ ಸ್ಪಷ್ಟನೆಯನ್ನು ನೀಡಿದ್ದು, ಈ ವಿಮಾನದಲ್ಲಿ ನನ್ನ ಮಗ ಇರಲಿಲ್ಲ. ಅವನು ಬೇರೊಂದು ವಿಮಾನದಲ್ಲಿದ್ದ. ತಮ್ಮ ಪೋಸ್ಟ್ ಅನ್ನು ಸರಿಯಾಗಿ ಎಚ್ಚರಿಕೆಯಿಂದ ಓದಿ ಎಂದು ಹೇಳಿದ್ದಾರೆ.

ನಂದಿನಿ ಅವರ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಒಬ್ಬರು ನನ್ನ ಪತಿ ಕೆಲಸದ ಮೇಲೆ ಆಗಾಗ್ಗೆ ಪ್ರಯಾಣಿಸುತ್ತಿರುತ್ತಾರೆ. ಈ ಪರಿಸ್ಥಿತಿ ಬಗ್ಗೆ ನನಗೆ ಅರ್ಥವಾಗುತ್ತದೆ. ಅವರೂ ವಿಮಾನ ಹತ್ತಿದ್ದರು. ವಿಮಾನ ಅಪಘಾತದ ಸುದ್ದಿ ಕೇಳಿ ನಾನು ಬಹುತೇಕ ಮೂರ್ಛೆ ಹೋದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಂದಿನಿ ಅವರ ಕಥೆ ಅನೇಕರ ಹೃದಯ ಸ್ಪರ್ಶಿಸಿದೆ. ದುರಂತಕ್ಕೆ ಎಲ್ಲರ ಮನ ಮಿಡಿಯುತ್ತಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »