ಚಿಕ್ಕಬಳ್ಳಾಪುರ: 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತವಾಗಿ ಶುಕ್ರವಾರ ನಂದಿ ಸರ್ಕಾರಿ ವೈದ್ಯಕೀಯ ಮತ್ತು ಸಂಶೋಧನ ಕಾಲೇಜು, ಅರೂರು ಇಲ್ಲಿ ಯೋಗ ತರಬೇತಿ ಯನ್ನು ನಡೆಸಲಾಯಿತು. ಅಲ್ಲಿನ ಅಧಿಕಾರಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Yoga Training: 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ತರಬೇತಿ
ನಂದಿ ವೈದ್ಯಕೀಯ ಕಾಲೇಜಿನ ಹೆಚ್.ಓ.ಡಿ ಡಾ.ಸುರೇಶ್ ನಾಯಕ್, ಸಹಾಯಕ ಪ್ರಾಧ್ಯಾಪಕರಾದ ಡಾ.ಮನೋಜ್ ಹಾಗೂ ತಜ್ಞ ವೈದ್ಯರಾದ ಡಾ. ಅನಿಲ್ ಕುಮಾರ್, ತರಬೇತುದಾರರಾದ ಮುನಿರಾಜುರವರು ಕಾರ್ಯಕ್ರಮ ನಡೆಸಿಕೊಟ್ಟರು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಂದರ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದರು.