Karunadu Studio

ಕರ್ನಾಟಕ

ಬಿತ್ತನೆಗೆ ಮುಂಚೆ ಬೀಜೋಪಚಾರ ಮಾಡುವುದು ಮರೆಯದಿರಿ: ಸಹಾಯಕ ಕೃಷಿ ನಿರ್ದೇಶಕ ಮುನಿರಾಜ.ಸಿ – Kannada News | Don’t forget to treat seeds before sowing: Assistant Director of Agriculture Muniraj.C


ಚಿಕ್ಕಬಳ್ಲಾಪುರ: ಬಿತ್ತನೆಗೆ ಮುಂಚಿತವಾಗಿ ಬೀಜೋಪಚಾರ ಮಾಡಿ ಬಿತ್ತುವುದರಿಂದ ಮಣ್ಣಿನಿಂದ ಹಾಗೂ ಬೀಜದಿಂದ ಹರಡುವ ರೋಗಗಳನ್ನು ಪ್ರಾರಂಭಿಕ ಹಂತದಲ್ಲೇ ಹತೋಟಿ ಮಾಡಬಹು ದಾಗಿದೆ ಎಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಮುನಿರಾಜ.ಸಿ ರೈತರಲ್ಲಿ ಮನವಿ ಮಾಡಿದ್ದಾರೆ.

ನಗರದಲ್ಲಿ ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿರುವ ಅವರು ತಾಲ್ಲೂಕಿ ನಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ರಾಗಿ, ಮುಸುಕಿನ ಜೋಳ, ನೆಲಗಡಲೆ ಹಾಗೂ ತೊಗರಿ ಬೆಳೆಗಳನ್ನು ಬೆಳೆಯಲಾಗುತ್ತದೆ.  ಮುಸುಕಿನ ಜೋಳ, ನೆಲಗಡಲೆ ಹಾಗೂ ತೊಗರಿ ಬೆಳೆಗಳಲ್ಲಿ ಬೆಳವಣಿಗೆ ಹಂತದಲ್ಲಿ ಕೆಲವು ರೋಗಗಳು ಕಾಣಿಸಿಕೊಳ್ಳುತ್ತಿದೆ. ಈ ಹಂತದಲ್ಲಿ ಅವುಗಳ ಹತೋಟಿ ಕಷ್ಟಕರವಾಗಿದ್ದು, ರೈತರಿಗೆ ಬೆಳೆಗಳ ಇಳುವರಿಯಲ್ಲಿ ನಷ್ಟವಾಗಿ ಆರ್ಥಿಕ ನಷ್ಟವನ್ನು ಅನುಭವಿಸಬಾರದು ಎಂದಿದ್ದರೆ ತಪ್ಪದೆ ಬಿತ್ತನೆಗೆ ಮುಂಚಿತವಾಗಿ ಬೀಜೋಪಚಾರ ಮಾಡಿ ಬಿತ್ತುವು ದರಿಂದ ಮಣ್ಣಿನಿಂದ  ಹಾಗೂ ಬೀಜದಿಂದ ಹರಡುವ ರೋಗಗಳನ್ನು ಪ್ರಾರಂಭಿಕ ಹಂತದಲ್ಲೇ ಹತೋಟಿ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Chikkabalapur News: ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ: ಕರವೇ ಜಿಲ್ಲಾದ್ಯಕ್ಷ ಎಂ.ಆರ್.ಲೋಕೇಶ್

ಕೃಷಿಯಲ್ಲಿ ಎಲ್ಲದಕ್ಕೂ ಬಿತ್ತನೆ ಬೀಜವೇ ಪ್ರಮುಖವಾದದ್ದು ಸಾಮಾನ್ಯವಾಗಿ ಸಹಾಯಧನದಲ್ಲಿ ವಿತರಿಸುವ ಬಿತ್ತನೆ ಬೀಜಗಳು ಬಹುತೇಕ ಬೀಜೋಪಚಾರ ಆಗಿಯೇ ಇರುತ್ತದೆ. ಆದರೂ ಕೆಲವು ಬಾರಿ ಮನೆಯಲ್ಲಿ ಸಂಗ್ರಹಿಸಿಟ್ಟ ಬಿತ್ತನೆ ಬೀಜ ಬಳಸುವಾಗ, ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳ ಹತೋಟಿಗೆ ಹಾಗೂ ಬೀಜದ ಮೊಳಕೆ ಪ್ರಮಾಣ ಹೆಚ್ಚಿಸಲು, ಜೈವಿಕ ಗೊಬ್ಬರಗಳ ಮೂಲಕ ವಾತಾವರಣದಲ್ಲಿರುವ ಪೋಷಕಾಂಶಗಳನ್ನು ಸ್ವೀಕರಿಸಿ ಬೆಳೆಗಳಿಗೆ ಒದಗಿಸುವಂತೆ ಮಾಡಲು ಬೀಜೋಪಚಾರ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದದರಿಂದ ಎಲ್ಲಾ ರೈತ ಬಾಂಧವರು ಬಿತ್ತನೆಗೆ ಮುಂಚಿತವಾಗಿ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕಾಗಿ ವಿನಂತಿಸಿ ದ್ದಾರೆ.

ಬೀಜೋಪಾಕರಕ್ಕೆ ಬಳಸುವ ಜೈವಿಕ ಗೊಬ್ಬರಗಳು: (ಪ್ರತಿ ಎಕರೆಗೆ 200 ರಿಂದ 400ಗ್ರಾಂ) ಮುಸುಕಿನ ಜೋಳ, ರಾಗಿ- ಅಜೋಸ್ಪೈರುಲಮ್, ರಂಜಕ ಕರಗಿಸುವ ಗೊಬ್ಬರ, ನೆಲಗಡಲೆ, ತೋಗರಿ-ರೈಜೋಬಿಯಮ್, ರಂಜಕ ಕರಗಿಸುವ ಗೊಬ್ಬರ, ರೋಗಳ ನಿರ್ವಹಣೆಗೆ-ಟ್ರೈಕೋಡರ್ಮ (೪ ಗ್ರಾಂ/ಕೆ.ಜಿ ಬೀಜಕ್ಕೆ), ಶಿಲೀಂದ್ರನಾಶಕ- ೨ ರಿಂದ ೨.೫ಗ್ರಾಂ/ಕೆ.ಜಿ ಬೀಜಕ್ಕೆ)

ಬೆಲ್ಲ/ಸಕ್ಕರೆ ಪಾಕ ಮಾಡುವ ವಿಧಾನ: ೫೦-೧೦೦ಗ್ರಾಂ ಬೆಲ್ಲ ಅಥವಾ ಸಕ್ಕರೆಯನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಬೇಕು, ತಣ್ಣಗಾದ ನಂತರ ಬಿತ್ತನೆಗೆ ಸಂಗ್ರಹಿಸಿರುವ ಬೀಜಗಳ ಮೇಲೆ ಅಂಟು ದ್ರಾವಣವನ್ನು ಚೆನ್ನಾಗಿ ಸಿಂಪಡಿಸಬೇಕು. ಮೊದಲನೆಯದಾಗಿ ಶಿಲೀಂದ್ರ ನಾಶಕಗಳಿಂದ ಬೀಜೋಪಚಾರ ಮಾಡಿ ನೆರಳಿನಲ್ಲಿ ಒಣಗಿಸಿ ನಂತರ ಜೈವಿಕ ಗೊಬ್ಬರಗಳಿಂದ ಉಪಚರಿಸಿ ಬಿತ್ತನೆ ಮಾಡಬೇಕು.

ಉಪಯೋಗಗಳು: ಬೀಜಗಳ ಮೊಳಕೆಯ ಪ್ರಮಾಣ ಹೆಚ್ಚಿಸಿ ಸಸಿಗಳ ಸಂಖ್ಯೆ ಕಾಪಾಡಬಹುದು. ಮಣ್ಣು ಮತ್ತು ಬೀಜಗಳ ಮೂಲಕ ಹರಡುವ ರೋಗ ಹಾಗೂ ಕೀಟಗಳನ್ನು ನಿಯಂತ್ರಿಸಬಹುದು. ಜೈವಿಕ ಗೊಬ್ಬರಗಳಿಂದ ಉಪಚರಿಸುವುದರಿಂದ ವಾತಾವರಣದಲ್ಲಿರುವ ಸಾರಜನಕ/ರಂಜಕವನ್ನು ಸ್ಥಿರೀಕರಿಸಿ ಬೆಳೆಗಳಿಗೆ ನೀಡುತ್ತದೆ. ಬೇಸಾಯದ ಖರ್ಚು ಕಡಿಮೆಯಾಗುತ್ತದೆ. ಶೇ.20-25% ರಸಗೊಬ್ಬರ ಬಳಕೆ ಪ್ರಮಾಣವನ್ನು ಕಡಿಮೆ ಮಾಡಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »