ಚಿಂತಾಮಣಿ: ನಗರದ ಹೊರವಲಯದಲ್ಲಿರುವ ಶಿಡ್ಲಘಟ್ಟ ರಸ್ತೆಯ ತಿಮ್ಮಸಂದ್ರದ ಬಿವಿಎಂ ಕನ್ವೆಷನ್ ಹಾಲ್ ಬಳಿ ಬೆಳಗಿನ ಜಾವ ಸುಮಾರು 6 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗು ತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: UP Crime: ಅಶ್ಲೀಲ ಕೃತ್ಯವನ್ನು ಪ್ರಶ್ನಿಸಿದ್ದೇ ತಪ್ಪಾಯಿತು: ದಂಪತಿಯ ಹತ್ಯೆಗೈದ ʼಮೆಂಟಲ್ʼ
ಇನ್ನೂ ಸಾವನಪ್ಪಿರುವ ವ್ಯಕ್ತಿ ತಿಮ್ಮಸಂದ್ರದ ಆನಂದ್ 26 ವರ್ಷ ಗಾರೆ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣವೇ ೧೧೨ ಪೊಲೀಸರು ಮತ್ತು ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಗೇಂದ್ರ ಪ್ರಸಾದ್ ಮತ್ತು ಸಿಬ್ಬಂದಿ ಭೇಟಿ ನೀಡಿ ಶವವನ್ನು ಆಂಬುಲೆನ್ಸ್ ಮುಖಾಂತರ ಸಾರ್ವ ಜನಿಕ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.