Karunadu Studio

ಕರ್ನಾಟಕ

Protein: ಮೊಟ್ಟೆಗಿಂತ ಹೆಚ್ಚು ಪ್ರಮಾಣದ ಪ್ರೋಟೀನ್​ ಸಿಗುವ ಆಹಾರಗಳಿವು – Kannada News | Best Protein Sources for Vegetarians


ನವದೆಹಲಿ: ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಸಾಕಷ್ಟು ಪ್ರಮಾಣದ ಪ್ರೋಟೀನ್ (Protein) ಅವಶ್ಯಕ. ದೇಹದ ಮಾಂಸ ಖಂಡಗಳ ಬೆಳವಣಿಗೆಯಲ್ಲಿ, ಮೂಳೆಗಳ ಬಲ ವರ್ಧನೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರೋಟೀನ್ ಅಂಶದ ಪಾತ್ರ ಇದ್ದೇ ಇರುತ್ತದೆ. ಅದರಲ್ಲೂ ಪ್ರೋಟಿನ್ ಅಂದಾಗ ಮೊದಲು ನೆನಪುಗುವ ಆಹಾರವೇ ಮೊಟ್ಟೆ.‌ ಮೊಟ್ಟೆಯಲ್ಲಿ ವಿಟಮಿನ್, ಖನಿಜಗಳು, ಅಮೈನೋ ಆಮ್ಲಗಳು ಇತರ ಆಹಾರಗಳಿಗಿಂತ ಹೆಚ್ಚಾಗಿರುತ್ತವೆ. ಮೊಟ್ಟೆಯನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಆದರೆ, ಮೊಟ್ಟೆಗಳಿಗಿಂತ ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುವ ಹಲವಾರು ಇತರ ಆಹಾರಗಳಿವೆ.

ಹಾಲು, ಮೊಸರು, ಡೈರಿ ಉತ್ಪನ್ನಗಳು

ಹಾಲು, ಚೀಸ್, ಮೊಸರು ಮುಂತಾದ ಡೈರಿ ಉತ್ಪನ್ನಗಳು ಬಹಳಷ್ಟು ಪ್ರೋಟೀನ್‌ ನಿಂದ ಸಮೃದ್ಧವಾಗಿವೆ. ಆದ್ದರಿಂದ ಪ್ರೋಟೀನ್ ಕೊರತೆಯನ್ನು ನೀಗಿಸಲು ಹಾಲು ಮತ್ತು ಮೊಸರು ಸೇವನೆ ಬಹಳ ಅಗತ್ಯ. ಇದಲ್ಲದೆ ಮಜ್ಜಿಗೆ ಅಥವಾ ಲಸ್ಸಿ ಕುಡಿಯುವುದರಿಂದಲೂ ನಿಮ್ಮ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಸಿಗುತ್ತದೆ.

ತೋಫು:

ಪ್ರಮುಖವಾದ ಸಸ್ಯಾಹಾರಿ ಆಹಾರಗಳಲ್ಲಿ ತೋಫು ಕೂಡ ಒಂದಾಗಿದ್ದು ಇದನ್ನು ಸೋಯಾಬೀನ್‌ನಿಂದ ತಯಾರಿಸ ಲಾಗುತ್ತದೆ. ನೋಡಲು ಪನ್ನೀರ್‌ನಂತೆ ಕಾಣುವ ತೋಫು 100-ಗ್ರಾಂ ಗೆ ಸುಮಾರು 8 ಗ್ರಾಂ ಪ್ರೋಟೀನ್ ಅನ್ನು ನೀಡುತ್ತದೆ. ಇದನ್ನು ಸ್ಮೂಥಿಗಳಿಗೆ ವಿವಿಧ ಭಕ್ಷ್ಯಗಳಿಗೆ ಉಪಯೋಗಿಸಲಾಗುತ್ತದೆ.

ಕುಂಬಳಕಾಯಿ ಬೀಜಗಳು:

ಕುಂಬಳಕಾಯಿ ಬೀಜಗಳು ಕಬ್ಬಿಣ, ಮೆಗ್ನೇಸಿಯಂ ಮತ್ತು ಸತುಗಳಂತಹ ಪ್ರಮುಖ ಪೋಷಕಾಂಶಗಳ ಮೂಲವಾಗಿದೆ. ಇದರಲ್ಲಿ ಪ್ರೋಟೀನ್ ಸಮೃದ್ದ ವಾಗಿದ್ದು 30 ಗ್ರಾಂ ಕುಂಬಳಕಾಯಿ ಬೀಜಗಳಲ್ಲಿ ಸುಮಾರು 9 ಗ್ರಾಂ ಪ್ರೋಟೀನ್ ಇರುತ್ತದೆ.

ಓಟ್ಸ್ :

ಓಟ್ಸ್ ಎಲ್ಲಾ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಇದರ ಸೇವನೆ ಬಹಳ ಉತ್ತಮ‌. ಹಾಲು, ಜೇನು ತುಪ್ಪ ಹಾಗೂ ಬಾದಾಮಿ ಹಾಲಿನೊಂದಿಗೆ ಬೆರೆಸಿದ ಓಟ್ಸ್ ಸೇವಿಸುವುದರಿಂದ ದೇಹಕ್ಕೆ ಉತ್ತಮ ಪ್ರೋಟಿನ್ ಅಂಶಗಳು ದೊರೆಯುತ್ತವೆ.

ದ್ವಿದಳ ಧಾನ್ಯಗಳು:

ಸಸ್ಯಾಹಾರಿಗಳು ಪ್ರೋಟೀನ್ ಪಡೆಯಲು ಮೊಟ್ಟೆಗಳ ಬದಲಿಗೆ ದ್ವಿದಳ ಧಾನ್ಯಗಳನ್ನು ಸೇವಿಸಬಹುದು. ವಿಶೇಷವಾಗಿ ಬಟಾಣಿಯಲ್ಲಿ ಹೇರಳವಾದ ಪ್ರೋಟೀನ್ ಇರುತ್ತದೆ. ನೀವು ದ್ವಿದಳ ಧಾನ್ಯಗಳನ್ನು ನೆನೆಸಿ ಸಲಾಡ್ ರೀತಿಯಲ್ಲಿ ಸೇವನೆ ಮಾಡಬಹುದು.

ಇದನ್ನು ಓದಿ: Health Tips: ರಾತ್ರಿ ಕಾಡುವ ಕಾಲುನೋವಿಗೇನು ಮದ್ದು?

ಆವಕಾಡೊ: 

ಪ್ರೋಟೀನ್ ಪಡೆಯಲು ಮೊಟ್ಟೆಯ ಬದಲಿಗೆ ಆವಕಾಡೊವನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್ ಗಳು ಹೇರಳವಾಗಿದ್ದು ಸಲಾಡ್‌ನಲ್ಲಿ ಅಥವಾ ಸ್ಯಾಂಡ್‌ ವಿಚ್‌ನೊಂದಿಗೆ ಸೇವಿಸಬಹುದು.

ಕಡಲೆಬೀಜ:

ಕಡಲೆಬೀಜದಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಅಂಶವಿದೆ. ಕಡಲೆ ಬೀಜದಲ್ಲಿ ಉತ್ತಮ ಗುಣಮಟ್ಟದ ಕೊಬ್ಬು ಇದ್ದು, ಇದು ನಿಮ್ಮ ಹೃದಯದ ಆರೋಗ್ಯ, ಉಸಿರಾಟ ಕ್ರಿಯೆಗಳಿಗೆ ಬಹಳ ಉತ್ತಮ. ಅರ್ಧ ಕಪ್ ನಷ್ಟು ಕಡಲೆ ಬೀಜದಲ್ಲಿ 20.5 ಗ್ರಾಂ ಪ್ರೋಟೀನ್ ಇದೆ. ಹಾಗಾಗಿ ಪ್ರತಿದಿನ ಕಡಲೆಬೀಜ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »