Karunadu Studio

ಕರ್ನಾಟಕ

Viral Video: ಪುರಿ ಜಗನ್ನಾಥ ದೇವಾಲಯದಲ್ಲಿ ನಡೆದ ಈ ಘಟನೆಗೂ ಏರ್ ಇಂಡಿಯಾ ವಿಮಾನ ಪತನಕ್ಕೂ ಏನು ಸಂಬಂಧ? ನೆಟ್ಟಿಗರ ವಾದವೇನು? – Kannada News | What is the connection between the incident that took place at the Puri Jagannath temple and the Air India plane crash; what did netizens say?


ಭುವನೇಶ್ವರ: ಈ ಹಿಂದೆ ಪುರಿ ಜಗನ್ನಾಥ ದೇವಾಲಯದ ಮೇಲೆ ಹದ್ದೊಂದು ಕೇಸರಿ ಬಣ್ಣದ ಬಟ್ಟೆಯೊಂದನ್ನು ಹಿಡಿದುಕೊಂಡು ಹಾರಾಡಿತ್ತು. ಈ ಕುತೂಹಲಕಾರಿ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಇದನ್ನು ಕಂಡು ಶಾಕ್ ಆಗಿದ್ದರು. ಇದು ಅಪಶಕುನದ ಸೂಚನೆ ಎಂದೆಲ್ಲ ಕೆಲವರು ಹೇಳಿದ್ದರು. ಈ ಘಟನೆಯ ನಂತರ ಭಾರತದಲ್ಲಿ ಪಹಲ್ಗಾಮ್ ದಾಳಿ, ಪಾಕಿಸ್ತಾನದೊಂದಿಗಿನ ಯುದ್ಧ, ಬೆಂಗಳೂರಿನಲ್ಲಿ ಮತ್ತು ಮಹಾ ಕುಂಭಮೇಳದಲ್ಲಿ ಕಾಲ್ತುಳಿತ, ಮುಂಬೈ ರೈಲು ಅಪಘಾತ ಹೀಗೆ ಹಲವು ಸರಣಿ ದುರ್ಘಟನೆಗಳು ನಡೆದಿವೆ. ಹಾಗೇ ಇದೀಗ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೂ ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆದ ಘಟನೆಗೆ ಜನರು ಲಿಂಕ್ ಮಾಡಿದ್ದಾರೆ. ಪುರಿಯ ಶ್ರೀ ಜಗನ್ನಾಥ ದೇವಸ್ಥಾನದಿಂದ ಹದ್ದೊಂದು ಧ್ವಜವನ್ನು ತೆಗೆದುಕೊಂಡು ಹೋಗಿದ್ದು ಅಪಶಕುನದ ಸಂಕೇತವೆಂದು ಹೇಳಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ (Viral Video) ಆಗಿದೆ.

2025ರ ಏಪ್ರಿಲ್‌ನಲ್ಲಿ ಪುರಿಯ ಶ್ರೀ ಜಗನ್ನಾಥ ದೇವಾಲಯದ ಮೇಲೆ ಹದ್ದೊಂದು ಕೇಸರಿ ಬಣ್ಣದ ಬಟ್ಟೆಯೊಂದನ್ನು ಹಿಡಿದುಕೊಂಡು ಹಾರಾಡಿತ್ತು. ಕೆಲವರು ಇದನ್ನು ಶುಭ ಶಕುನವೆಂದು ಹೇಳಿದರೆ, ಇತರರು ಇದನ್ನು ಮುಂಬರುವ ವಿಪತ್ತಿನ ಮುನ್ಸೂಚನೆ ಎಂಬುದಾಗಿ ಕರೆದಿದ್ದರು.

ವಿಡಿಯೊ ಇಲ್ಲಿದೆ ನೋಡಿ…



ಇದೀಗ ಅಹಮದಾಬಾದ್‍ನಲ್ಲಿ ನಡೆದ ಏರ್‌ಇಂಡಿಯಾ ವಿಮಾನ ದುರಂತವನ್ನು ಸಹ ಕೆಲವರು ಪುರಿ ಜಗನ್ನಾಥನ ದೇವಾಲಯದಲ್ಲಿ ನಡೆದ ಘಟನೆಗೆ ಹೋಲಿಸಿದ್ದಾರೆ. ಯಾಕೆಂದರೆ ಏರ್ ಇಂಡಿಯಾ ವಿಮಾನವು ಅಹಮದಾಬಾದ್‌ನಲ್ಲಿರುವ ವೈದ್ಯ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ಅಪ್ಪಳಿಸಿತ್ತು. ಆ ಘಟನೆಗೆ ಸಂಬಂಧಪಟ್ಟ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದವು. ಆದರೆ ಆ ಫೋಟೊದಲ್ಲಿದ್ದ ಸುಟ್ಟು ಹೋದ ಅವಶೇಷಗಳಲ್ಲಿ ವಿಚಿತ್ರ ಆಕಾರವೊಂದು ಕಂಡುಬಂದಿದೆ. ಅನೇಕರು ಈ ಆಕಾರವನ್ನು ಭಗವಾನ್ ಜಗನ್ನಾಥನ ಕಣ್ಣುಗಳನ್ನು ಹೋಲುತ್ತದೆ ಎಂದು ಹೇಳಿದ್ದಾರೆ. ಈ ಎರಡು ಘಟನೆಗಳ ಹೋಲಿಕೆಯು ಸೋಶಿಯಲ್ ಮೀಡಿಯಾದಲ್ಲಿ ಆಧ್ಯಾತ್ಮಿಕ ಮತ್ತು ಮೂಢನಂಬಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.

ಈ ಸುದ್ದಿಯನ್ನೂ ಓದಿ:Viral Video: ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡ ನವವಧುವಿನ ಕೊನೆಯ ವಿಡಿಯೊ ಇಲ್ಲಿದೆ ನೋಡಿ!

ಅಲ್ಲದೇ ಈ ಹಿಂದೆ ಪುರಿಯಲ್ಲಿರುವ ತಮ್ಮ ಮನೆಯ ಹೊರಗೆ ಶವವಾಗಿ ಪತ್ತೆಯಾಗಿದ್ದ ಜಗನ್ನಾಥ ದೇವಾಲಯದ ಉಸ್ತುವಾರಿ 83 ವರ್ಷದ ಜಗನ್ನಾಥ ದೀಕ್ಷಿತ್ ಅವರ ಸಾವನ್ನು ಸಹ ಜನರು ಈ ಘಟನೆಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »