Karunadu Studio

ಕರ್ನಾಟಕ

Chikkaballapur News: ಜುವಾರಿ ಫಾರ್ಮಾ ಹಬ್ ಕಂಪನಿಯ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ – Kannada News | Zuari Pharma Hub Company distributes bags to school children


ಬಾಗೇಪಲ್ಲಿ: ಜುವಾರಿ ಸಂಸ್ಥೆಯು ಸಿಎಸ್‌ಆರ್ ನಿಧಿಯ ಮೂಲಕ ಸರಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ತನ್ನ ಜುವಾರಿ ಫಾರ್ಮಾ ಹಬ್ ಕಂಪನಿಯ ಹೆಚ್.ಕೆ.ಮನೋಹರ್ ತಿಳಿಸಿದರು.

ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುವಾರಿ ಫಾರ್ಮಾ ಹಬ್ ಕಂಪನಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಮಾನಸಿಕ ಅಸ್ವಸ್ಥತೆ ಕಾಯಿಲೆ ಅಲ್ಲ ಅದೊಂದು ಸಮಸ್ಯೆ: ಎನ್.ನಾಗರಾಜ್

ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಲಾಭದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಹೊರ ಬೇಕಾಗಿದೆ. ಈ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕಾಗಿದೆ. ನಮ್ಮ ಸಂಸ್ಥೆ ಇದನ್ನು ಮನಗಂಡು ಮಿಟ್ಟೇಮರಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಬ್ಯಾಗ್‌ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಅದೇ ರೀತಿಯಲ್ಲಿ ಈ ಹಿಂದೆಯೂ ಜುವಾರಿ ಪಾರ್ಮಾ ಹಬ್ ಸಂಸ್ಥೆ ವತಿಯಿಂದ ಡೆಸ್ಕ್ಗಳನ್ನು ನೀಡಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಮಕ್ಕಳು ಬಳಸಿಕೊಂಡು ಸ್ಪರ್ಧಾತ್ಮಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.

ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿತ್ಯವೂ ಯೋಗ ಮಾಡುವ ಹವ್ಯಾಸಗಳನ್ನು ಜೀವನದಲ್ಲಿ ರೂಢಿಸಿಕೊಂಡರೆ ಆರೋಗ್ಯದ ಜತೆಗೆ ಬುದ್ಧಿ ಯೂ ಚುರುಕಾಗಲಿದೆ ಎಂದು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕ ಹೆಚ್.ಮುಸ್ತಫಾ ಮಾತನಾಡಿ, ಕಾರ್ಪೋರೇಟ್ ಕಂಪನಿಗಳು ನಮ್ಮ ಮಿಟ್ಟೇ ಮರಿ ಸರ್ಕಾರಿ ಶಾಲೆಯನ್ನು ಗುರುತಿಸಿ ಮಕ್ಕಳಿಗೆ, ಶಾಲೆಗೆ ಹಲವು ಕೊಡುಗೆಗಳನ್ನು ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ನಮ್ಮ ಶಾಲೆಗೆ ಶಕ್ತಿ ತುಂಬಿದಂತೆ ಆಗಿದೆ. ಕಂಪನಿಗಳ ಸೇವೆಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಿಟ್ಟೇಮರಿ ಸರ್ಕಾರಿ ಶಾಲಾ ಶಿಕ್ಷಕರಾದ ವಿ.ಭಾಗ್ಯಮ್ಮ, ಜಿ.ಆರ್.ಮುರಳಿಧರ, ವಿ.ಕೋಮಲ, ಎಂ.ಸಿ.ಚಂದ್ರಕಳ,  ಜುವಾರಿ ಪಾರ್ಮ್ ಹಬ್ ಕಂಪನಿಯ ಸತೀಶ್, ಗಜೇಂದ್ರ, ಸುರೇಶ್, ಅನಿಲ್ ಕುಮಾರ್, ಮಂಜುನಾಥ್, ಸೋಮಶೇಖರ್ ಮತ್ತಿತರರು ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »