Karunadu Studio

ಕರ್ನಾಟಕ

Chikkaballapur News: ಗ್ರಾಮೀಣ ಮತ್ತು ಬಡಜನತೆಗೆ ಆರೋಗ್ಯ ಸೇವೆ ನೀಡುವುದೇ ನಮ್ಮ ಉದ್ದೇಶ: ಸಿರಿ ಆಸ್ಪತ್ರೆ ಡಾ.ತರುಣ್ – Kannada News | Our aim is to provide healthcare services to the rural and poor: Siri Hospital Dr. Tarun


ಬಾಗೇಪಲ್ಲಿ: ಗ್ರಾಮೀಣ ಮತ್ತು ಬಡಜನತೆಗೆ ರಿಯಾಯಿತಿ ಧರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವುದೇ ನಮ್ಮ ಉದ್ದೇಶ ಸಿರಿ ಆಸ್ಪತ್ರೆಯ ಉದ್ದೇಶವಾಗಿದೆ ಎಂದು ಡಾ.ತರುಣ್ ತಿಳಿಸಿದರು.

ಚೇಳೂರು ತಾಲೂಕು ವ್ಯಾಪ್ತಿಯ ಚಾಕುವೇಲು ಗ್ರಾಮದ ಮುಖ್ಯ ರಸ್ತೆಯಲ್ಲಿರುವ ನೂತನ  ಸಿರಿ ಆಸ್ಪತ್ರೆಯನ್ನು ಶನಿವಾರ ಡಾ.ಸತ್ಯನಾರಾಯಣ ರೆಡ್ಡಿ,ಪುರಸಭೆ ಸದಸ್ಯ ಎ.ನಂಜುಂಡಪ್ಪ ಹಾಗೂ ಇತರೆ ಗಣ್ಯರು ಉದ್ಘಾಟನೆ ಮಾಡಿ ಮಾತನಾಡಿದರು.

ತಾಲೂಕಿನ ಗಡಿ ಭಾಗದ ಬಡಜನತೆಗೆ ಕಡಿಮೆ ದರದಲ್ಲಿ ಸುಸಜ್ಜಿತ, ಸ್ವಚ್ಛತೆ ಹಾಗೂ ಆರೋಗ್ಯ ಸೇವೆ ಒದಗಿಸಲು ಮುಂದಾಗಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ಔಷಧಾಲಯ, ಪ್ರಯೋಗಾಲಯ, ಇಸಿಜಿ, ತುರ್ತು ಪ್ರಥಮ ಚಿಕಿತ್ಸೆ, ಲಸಿಕೆ, ಡಿಜಿಟಲ್ ಎಕ್ಸರೆ, ಒಳರೋಗಿಗಳ ಆರೈಕೆ, ಮೈನರ್ ಆಪರೇಷನ್ ಥಿಯೇಟರ್, ಆಂಬ್ಯುಲೆನ್ಸ್ ಮತ್ತಿತರೇ ಸೇವೆಗಳು ನಮ್ಮಲ್ಲಿ ಲಭ್ಯವಿದೆ.

ಇದನ್ನೂ ಓದಿ: Child Labour: ಆರ್ಥಿಕವಾಗಿ ಬಡತನವಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕರಾಗುತ್ತಿರುವುದು ವಿಷಾಧನೀಯ: ನ್ಯಾಯಾಧೀಶ ಮಂಜುನಾಥಾಚಾರಿ

ಗಡಿಭಾಗದಲ್ಲಿ ಬಹಳಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಗ್ರಾಮೀಣ ಭಾಗದ ಜನತೆಗೆ ಇಂತಹ ಸೇವಾ ಅವಶ್ಯಕತೆ ಇತ್ತು. ಇದನ್ನು ಮನಗಂಡು ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದಲ್ಲಿ ಆಸ್ಪತ್ರೆಯನ್ನು ಆರಂಭಿಸಿ ಯಶಸ್ವಿಯಾಗಿ ಆರೋಗ್ಯ ಸೌಲಭ್ಯ ಒದಗಿಸುತ್ತಿದೇವೆ. ಕಡಿಮೆ ದರದಲ್ಲಿ ತುರ್ತು ಆರೋಗ್ಯ ಸೇವೆಗಳು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ನಾಗರೀಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ, ಪುರಸಭೆ ಸದಸ್ಯ ಹಾಗೂ ಹಿರಿಯ ವಕೀಲ ನಂಜುಂಡಪ್ಪ ಮಾತನಾಡಿ, ಇಂತಹ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದಿಂದ ತಾಲ್ಲೂಕು ಕೇಂದ್ರಕ್ಕೆ ತಲುಪಲು ಬಹಳಷ್ಟು ದೂರ ಹಾಗೂ ಅಡಚಣೆಗಳು ಇರುವುದರಿಂದ ತ್ರಾಸದಾಯಕವಾಗಿದೆ. ಹಾಗಾಗಿ ಹತ್ತಿರ ದಲ್ಲೆ ಆರೋಗ್ಯ ಸೇವೆ ಒದಗಿಸಿ,ಸೇವೆ ಮಾಡಲು ಮುಂದಾಗಿರುವುದು ಮೆಚ್ಚುವ ಕೆಲಸವಾಗಿದೆ ಎಂದರು.

ಈ ಸಂದರ್ಭದಲ್ಲಿ ಚೇಳೂರು ಡಿ.ಸಿ.ಸಿ. ಬ್ಯಾಂಕ್ ಡೈರೆಕ್ಟರ್ ಕೆ.ವಿ.ಭಾಸ್ಕರರೆಡ್ಡಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ಕೆ.ಆರ್. ಸುಧಾಕರ್ ರೆಡ್ಡಿ, ಗ್ರಾಮ ಪಂಚಾಯ್ತಿ ಮಾಜಿ ಅದ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಪಿ.ಎಸ್.ವೆಂಕಟರೆಡ್ಡಿ, ಸಿರಿ ಚಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷರಾದ ವಿ. ರಾಮಚಂದ್ರಪ್ಪ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಪ್ರಭಾವತಿ ಬಾಲಕೃಷ್ಣ, ಜಿ.ಎಸ್.ಸೋಮ ಶೇಖರರೆಡ್ಡಿ, ಶ್ರೀರಾಮರೆಡ್ಡಿ, ಸಿರಿ ಚಾರಿಟೇಬಲ್ ಟ್ರಸ್ಟಿನ ಸದಸ್ಯರಾದ ಶಂಕರಪ್ಪ, ಮಹೇಶ್, ಶಮಂತ್ ಎಂ, ವೆಂಕಟೇಶ್, ಚಂದ್ರಶೇಖರ, ಸಂದೀಪ್, ಶ್ರೀನಿವಾಸ್, ರಾಜಕುಮಾರ್,ವಿ.ಕೃಷ್ಣಪ್ಪ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »