Karunadu Studio

ಕರ್ನಾಟಕ

ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಸಿಕ್ಕ ನಗದು ಬಹುಮಾನವೆಷ್ಟು? – Kannada News | AUS vs SA: How much Prize money to South Africa for winning WTC Final against Australia


ಲಂಡನ್‌: ದಕ್ಷಿಣ ಆಫ್ರಿಕಾ (SA) ತಂಡ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ಆಸ್ಟ್ರೇಲಿಯಾವನ್ನು (AUS) 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC 2023-25) ಅನ್ನು ಮುಡಿಗೇರಿಸಿಕೊಂಡಿತು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ 1998ರ ನಂತರ ಇದೇ ಮೊದಲ ಬಾರಿ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ. 282 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಏಡೆನ್ ಮಾರ್ಕ್ರಮ್ ಅವರ ಅದ್ಭುತ ಶತಕ ಮತ್ತು ನಾಯಕ ತೆಂಬಾ ಬವೂಮ ಅವರ ಅರ್ಧಶತಕದ ನೆರವಿನಿಂದ ಗೆಲುವು ಪಡೆಯಿತು.

ಪಂದ್ಯದ ನಾಲ್ಕನೇ ದಿನದಾಟದ ಪ್ರಾರಂಭವಾದಾಗ ಹರಿಣ ಪಡೆಗೆ ಗೆಲ್ಲಲು ಇನ್ನೂ 69 ರನ್‌ಗಳು ಬೇಕಾಗಿದ್ದವು. ತೆಂಬಾ ಬವೂಮ ಬೇಗ ಔಟಾದರೂ, ಏಡೆನ್‌ ಮಾರ್ಕ್ರಮ್ ಜವಾಬ್ದಾರಿಯನ್ನು ತೆಗೆದುಕೊಂಡು ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ತಂಡಕ್ಕೆ ಗೆಲ್ಲಲು 6 ರನ್‌ಗಳು ಬೇಕಾಗಿದ್ದಾಗ, ಏಡೆನ್‌ ಮಾರ್ಕ್ರಮ್ ಔಟಾದರು. ಭೋಜನ ವಿರಾಮಕ್ಕೆ ಸ್ವಲ್ಪ ಮುನ್ನ ಕೈಲ್‌ ವರ್ನೆ, ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್‌ನಲ್ಲಿ ಬೌಂಡರಿ ಹೊಡೆದು ದಕ್ಷಿಣ ಆಫ್ರಿಕಾ ತಂಡವನ್ನು ಗೆಲುವಿನ ದಡ ಸೇರಿಸಿದರು.

WTC Final: ಭಾರತ ತಂಡದ 14 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದ ದಕ್ಷಿಣ ಆಫ್ರಿಕಾ!

ಚಾಂಪಿಯನ್‌ ದಕ್ಷಿಣ ಆಫ್ರಿಕಾ ತಂಡಕ್ಕೆ ಸಿಕ್ಕ ನಗದು ಬಹುಮಾನ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟ್ರೋಫಿಯ ಜೊತೆಗೆ ಚಾಂಪಿಯನ್‌ ದಕ್ಷಿಣ ಆಫ್ರಿಕಾ ತಂಡ ಸುಮಾರು 31.05 ಕೋಟಿ ರು. ನಗದು ಬಹುಮಾನವನ್ನು ಪಡೆದುಕೊಂಡಿದೆ. ರನ್ನರ್ ಅಪ್ ಆಸ್ಟ್ರೇಲಿಯಾ ತಂಡ ಸುಮಾರು 18.63 ಕೋಟಿ ರು. ಗಳನ್ನು ಸ್ವೀಕರಿಸಿದೆ. ಮೂರನೇ ಸ್ಥಾನದಲ್ಲಿರುವ ಭಾರತ ತಂಡ 12.42 ಕೋಟಿ ರು. ನಗದು ಬಹುಮಾನವನ್ನು ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಪಾಕಿಸ್ತಾನ ತಂಡ ಕೇವಲ ರೂ.4.14 ಕೋಟಿ ಗಳಿಸಿತು. ಇದು ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್‌ಗಿಂತ ಇನ್ನೂ ಕಡಿಮೆ.

WTC Final 2025: ಚೋಕರ್ಸ್‌ ಹಣೆಪಟ್ಟಿ ಕಳಚಿದ ದಕ್ಷಿಣ ಆಫ್ರಿಕಾ; ಚೊಚ್ಚಲ ವಿಶ್ವಕಪ್‌ ಟ್ರೋಫಿ ಗೆದ್ದ ಹರಿಣ ಪಡೆ

ಟೆಸ್ಟ್‌ ಚಾಂಪಿಯನ್‌ಷಿಪ್‌ನ ನಗದು ಬಹುಮಾನದ ವಿವರ

ಚಾಂಪಿಯನ್‌ ದಕ್ಷಿಣ ಆಫ್ರಿಕಾ: 31.05 ಕೋಟಿ ರು

ರನ್ನರ್ ಅಪ್ ಆಸ್ಟ್ರೇಲಿಯಾ: 18.63 ಕೋಟಿ ರು

ಭಾರತ (ಮೂರನೇ ಸ್ಥಾನ): 12.42 ಕೋಟಿ ರು

ನ್ಯೂಜಿಲೆಂಡ್ (ನಾಲ್ಕನೇ ಸ್ಥಾನ): 10.35 ಕೋಟಿ ರು

ಇಂಗ್ಲೆಂಡ್ (ಐದನೇ ಸ್ಥಾನ) 8.28 ಕೋಟಿ ರು

ಶ್ರೀಲಂಕಾ (ಆರನೇ ಸ್ಥಾನ): 7.24 ಕೋಟಿ ರು

ಬಾಂಗ್ಲಾದೇಶ (ಏಳನೇ ಸ್ಥಾನ): 6.21 ಕೋಟಿ ರು

ವೆಸ್ಟ್ ಇಂಡೀಸ್ (ಎಂಟನೇ ಸ್ಥಾನ): 5.17 ಕೋಟಿ ರು

ಪಾಕಿಸ್ತಾನ (ಒಂಬತ್ತನೇ ಸ್ಥಾನ): 4.14 ಕೋಟಿ ರು

WTC Final: ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದು ವಿಂಡೀಸ್‌ ದಾಖಲೆ ಮುರಿದ ದಕ್ಷಿಣ ಆಫ್ರಿಕಾ!

ಜೂನ್ 17 ರಂದು ನಾಲ್ಕನೇ ಆವೃತ್ತಿ ಆರಂಭ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಋತು ಜೂನ್ 17 ರಂದು ಪ್ರಾರಂಭವಾಗಲಿದೆ. ಮೊದಲ ಪಂದ್ಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿದೆ. ಭಾರತ ತಂಡ, ಜೂನ್ 20 ರಂದು ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆರಂಭಿಸಲಿದೆ. ಜೂನ್ 25 ರಂದು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ. ಚಾಂಪಿಯನ್ ದಕ್ಷಿಣ ಆಫ್ರಿಕಾ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಮೊದಲ ಸರಣಿಯನ್ನು ಆಡಲಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »