Karunadu Studio

ಕರ್ನಾಟಕ

ಬಾಲಾಜಿ ಕುಮಾರಣ್ಣ ಹುಟ್ಟುಹಬ್ಬ ಪ್ರಯುಕ್ತ ರೋಗಿಗಳಿಗೆ ಹಾಲು ಹಣ್ಣು ವಿತರಣೆ: ಯುವಶಕ್ತಿ ಜನಪರ ವೇದಿಕೆಯಿಂದ ಸಾಮಾಜಿಕ ಕಳಕಳಿ – Kannada News | Distribution of milk and fruits to patients on the occasion of Balaji Kumaranna’s birthday: Social concern from Yuvashakti Janapara Vedike


ಗುಬ್ಬಿ: ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಗುರುತರ ಕೆಲಸ ಮಾಡಿದ ಬಾಲಾಜಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಬಾಲಾಜಿ ಕುಮಾರ್ ಅವರ 50 ನೇ ಹುಟ್ಟುಹಬ್ಬದ ಪ್ರಯುಕ್ತ ಯುವ ಶಕ್ತಿ ಜನಪರ ವೇದಿಕೆ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ ಮಾಡುವ ಮೂಲಕ ಸರಳ ಹಾಗೂ ಸಾಮಾಜಿಕ ಬದ್ಧತೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಿಸಿದ ಕಾಂಗ್ರೆಸ್ ಮುಖಂಡ, ಜನಪರ ಯುವಶಕ್ತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜಿ.ಸಿ.ಶಿವಕುಮಾರ್ ಮಾತನಾಡಿ ಬಾಲಾಜಿ ಕುಮಾರ್ ಕಳೆದ 20 ವರ್ಷದಿಂದ ಗುಬ್ಬಿ ತಾಲ್ಲೂಕಿನಲ್ಲಿ ಸಮಾಜ ಸೇವಕ ಎಂದು ಗುರುತಿಸಿಕೊಂಡಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ವೈಶಿಷ್ಟ್ಯ ಹೊಂದಿ ತಾಲ್ಲೂಕಿನ ಹಲವು ದೇವಾಲಯಗಳ ಜೀರ್ಣೋದ್ಧಾರಕ್ಕೆ ಕೋಟಿ ಲೆಕ್ಕದಲ್ಲಿ ಹಣ ನೀಡಿದ್ದಾರೆ ಎಂದರು. ಧಾರ್ಮಿಕ ಕ್ಷೇತ್ರ ಜೊತೆಗೆ ಸಾಮಾಜಿಕ ಸೇವೆಯಲ್ಲಿ ಸಹ ಸೈ ಎನಿಸಿಕೊಂಡು ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಘಟಕ, ಸಮವಸ್ತ್ರ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ, ಆರೋಗ್ಯ ಶಿಬಿರಗಳು, ಬಡ ರೋಗಿಗಳ ಚಿಕಿತ್ಸಾ ವೆಚ್ಚ ಹೀಗೆ ಅನೇಕ ಸಹಾಯ ಮಾಡಿ ದಾನಿಗಳು ಎಂದು ಗುರುತಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬ ಅದ್ದೂರಿ ಮಾಡದೆ ಸಾಮಾಜಿಕ ಸೇವೆಯಲ್ಲೇ ಸರಳ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: Gubbi (Tumkur) News: ಹೇಮಾವತಿ ಹೋರಾಟವನ್ನು ಪ್ರತಿಷ್ಠೆಯಾಗಿ ಪರಿಗಣಿಸಬೇಡಿ : ಡಿಸಿಎಂ ಅವರಿಗೆ ಎಚ್ಚರಿಕೆ ನೀಡಿದ ಬಿ.ವೈ.ವಿಜಯೇಂದ್ರ.*

ಬಾಲಾಜಿ ಕುಮಾರಣ್ಣ ಅವರಿಗೆ ಹೆಚ್ಚಿನ ಸೇವೆ ಮಾಡುವ ಶಕ್ತಿ ಸಿಗಲಿ ಎಂದು ಹಾರೈಸಿದರು. ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಜಿ.ಎಲ್.ರಂಗನಾಥ್ ಮಾತನಾಡಿ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡ ಬಾಲಾಜಿ ಕುಮಾರಣ್ಣ ತಾಲ್ಲೂಕಿನ ಜನರಿಗೆ ತಿರುಪತಿ ತಿರುಮಲ ದೇವಸ್ಥಾನ ದಿಂದ ದೇವರು ಕರೆತಂದು ಅದ್ದೂರಿ ಕಲ್ಯಾಣೋತ್ಸವ ಕಾರ್ಯಕ್ರಮ ಮಾಡಿ ಲಕ್ಷಾಂತರ ಭಕ್ತರಿಗೆ ಉಚಿತ ತಿಮ್ಮಪ್ಪನ ದರ್ಶನ ಮಾಡಿಸುವ ಮೂಲಕ ಜನರಿಗೆ ಪರಿಚಿತರಾಗಿ ತದನಂತರ ಬಡವರ ಪಾಲಿಗೆ ದೈವ ಸ್ವರೂಪಿಗಳಾದರು. ಮನೆ ಕಟ್ಟುವ ಬಡವರಿಗೆ ಸಿಮೆಂಟ್, ಶೀಟ್, ಬಾಗಿಲು ಕಿಟಿಕಿ, ಇಟ್ಟಿಗೆ ಹೀಗೆ ಅನೇಕ ಸಲಕರಣೆ ದಾನ ನೀಡಿದ್ದಾರೆ. ಉನ್ನತ ವ್ಯಾಸಂಗ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕ, ಆರೋಗ್ಯ ಸಮಸ್ಯೆ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಪಾವತಿಸಿದ್ದಾರೆ.

ಹೀಗೆ ಅನೇಕ ಸತ್ಕಾರ್ಯ ಮಾಡಿದ ಕುಮಾರಣ್ಣ ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಆಯಸ್ಸು ಸಿಗಲಿ ಎಂದು ಹಾರೈಸಿದರು. ರೇಣುಕಪ್ಪ, ನಾರಾಯಣಸ್ವಾಮಿ, ಮಂಜುನಾಥ, ಉಮೇಶ್, ರಾಕೇಶ್, ವಸಂತಮ್ಮ, ಗಿರಿಜಮ್ಮ, ಮಂಜುಳಾ, ಸುಮಾರಾಣಿ, ಲಕ್ಕಣ್ಣ ರಂಗಸ್ವಾಮಿ, ಕೃಷ್ಣಮೂರ್ತಿ, ಜನಪರ ಯುವಶಕ್ತಿ ವೇದಿಕೆಯ ಹಲವು ಸದಸ್ಯರು, ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »