Karunadu Studio

ಕರ್ನಾಟಕ

SIRA (Tumkur) News; ಜೂ.17ರಂದು ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಅಧ್ಯಕ್ಷ ಚಿದಾನಂದ್ ಗೌಡ ಪದಗ್ರಹಣ ಸಮಾರಂಭ; ಗಿರಿಧರ್ – Kannada News | Chidanand Gowda, the new president of BJP Madhugiri organizational district, will take oath on June 17; Giridhar


ಶಿರಾ: ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರ ಪದಗ್ರಹಣ ಕಾರ್ಯಕ್ರಮವನ್ನು ಜೂ. ೧೭ರ ಮಂಳವಾರ ಏರ್ಪಡಿಸಲಾಗಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಗಿರಿಧರ್ ಹೇಳಿದರು.

ಅವರು ನಗರದ ಸೇವಾ ಸದನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ರಾದ ವಿಜಯೇಂದ್ರ ಅವರು ಯುವಕರು, ಜನಾನುರಾಗಿಗಳಾದ ಚಿದಾನಂದ್ ಎಂ.ಗೌಡ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಬಿಜೆಪಿಗೆ ಶಕ್ತಿ ತುಂಬಿದೆ. ಜೂ. ೧೭ರಂದು ಪಕ್ಷದ ಕಾರ್ಯಕರ್ತರು ಎಲ್ಲರೂ ಒಟ್ಟುಗೂಡಿ ಚಿದಾನಂದ್ ಗೌಡ ಅವರ ಪದಗ್ರಹಣ ಕಾರ್ಯ ಕ್ರಮ ಹಮ್ಮಿಕೊಂಡಿದ್ದೇವೆ.

ಜೂ.17ಮಂಗಳವಾರ ಮಧ್ಯಾಹ್ನ ೧೨-೩೦ಕ್ಕೆ ನಗರದ ದರ್ಗಾ ಸರ್ಕಲ್ ನಿಂದ ಮೆರವಣಿಗೆ ಮೂಲಕ ಆಗಮಿಸಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಸಿರಿಗಂಧ ಪ್ಯಾಲೇಸ್ ನಲ್ಲಿ ಮಧ್ಯಾಹ್ನ ೨-೩೦ಕ್ಕೆ ಪದಗ್ರಹಣ ಕಾರ್ಯಕ್ರಮ ಇರುತ್ತದೆ. ಕಾರ್ಯಕ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿಗಳು ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಸುರೇಶ ಗೌಡ, ಜ್ಯೋತಿ ಗಣೇಶ್, ನಿಕಟಪೂರ್ವ ಬಿಜೆಪಿ ಅಧ್ಯಕ್ಷ ಹನುಮಂತೆ ಗೌಡ, ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿಕೆ ಮಂಜುನಾಥ್, ಕಾಡುಗೋಲ್ಲ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಪದಾಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸಲಿದ್ದಾರೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದರು.

ಇದನ್ನೂ ಓದಿ: Chikkanayakanahalli (Tumkur) News: ಬಸ್ ಸೌಲಭ್ಯಕ್ಕೆ ಒತ್ತಾಯ

ಮಾಜಿ ತಾ.ಪಂ. ಸದಸ್ಯರು ಹಾಗೂ ಮಾಜಿ ಬಿಜೆಪಿ ಅಧ್ಯಕ್ಷರಾದ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಮಾತನಾಡಿ ಶಿರಾ ತಾಲೂಕಿಗೆ ಎರಡನೇ ಭಾರಿ ಬಿಜೆಪಿ ಪಕ್ಷ ಜಿಲ್ಲಾ ಅಧ್ಯಕ್ಷರ ಸ್ಥಾನ ನೀಡಿದೆ. ಚಿದಾನಂದ್ ಗೌಡ ಅವರು ಯುವಕರಾಗಿದ್ದು ಸಂಘಟನಾ ಚತುರರಾಗಿದ್ದಾರೆ. ಜೂ.17ರಂದು ಪದಗ್ರಹಣ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಗಿರಿಧರ್, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ನಿಕಟಪೂರ್ವ ಅಧ್ಯಕ್ಷರಾದ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಕೊಟ್ಟ ರಂಗನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಶಿವಲಿಂಗಯ್ಯ ಮತ್ತು ಬೊಪ್ಪರಾಯಪ್ಪ, ಮಹಿಳಾ ಮೋರ್ಚ ಜಿಲ್ಲಾ ಉಪಾಧ್ಯಕ್ಷರಾದ ಪದ್ಮಮಂಜುನಾಥ್ , ತಾಲೂಕು ಉಪಾಧ್ಯಕ್ಷರಾದ ನಾಗರತ್ನಮ್ಮ, ಕವಿತಾ, ಹಿರಿಯ ಮುಖಂಡರಾದ ಗೋಪಿಕುಂಟೆ ಕುಮಾರ್ ಮಾಷ್ಟ್ರು, ಜಿ.ಜೆ ನರಸಿಂಹಮೂರ್ತಿ, ಮುಖಂಡರಾದ ನಾಗರಾಜ್ ಗೌಡ, ಮೂಗನಹಳ್ಳಿ ರಾಮು, ಗಂಜಲಗುAಟೆ ಮುನಿರಾಜು, ನಿಕಟಪೂರ್ವ ವಕ್ತಾರರಾದ ಸೈಯದ್ ಬಾಬಾ, ಹಂದಿಕುಂಟೆ ಪಾಂಡುರಂಗಪ್ಪ, ಕಳ್ಳಂಬೆಳ್ಳ ವಾಸು, ಜಗದೀಶ್, ಕೃಷ್ಣಪ್ಪ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »