Karunadu Studio

ಕರ್ನಾಟಕ

Israel-Iran Conflict: ಇರಾನ್‌ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್‌ ಕ್ಷಿಪಣಿಗಳ ದಾಳಿ; ಭಾರೀ ಸ್ಫೋಟ, ಹಲವಡೆ ಕಂಪಿಸಿದ ಭೂಮಿ – Kannada News | Explosions Rock Iran’s Fordow Nuclear Site Amid Israeli Strikes, Trigger Earthquake


ಟೆಹ್ರಾನ್‌: ಇಸ್ರೇಲ್ ಮತ್ತು ಇರಾನ್ ನಡುವೆ ಸತತ ನಾಲ್ಕನೇ ರಾತ್ರಿಯೂ (Israel-Iran Conflict) ಕ್ಷಿಪಣಿಗಳ ದಾಳಿ ನಡೆದಿದೆ. ಸೋಮವಾರ ಬೆಳಿಗ್ಗೆ ವರದಿಗಳ ಪ್ರಕಾರ, ಇರಾನ್‌ನ ಫೋರ್ಡೋ ಪರಮಾಣು ಸ್ಥಾವರದ ಬಳಿ ಹಲವಾರು ಜೋರಾದ ಸ್ಫೋಟಗಳು ಕೇಳಿಬಂದವು. ಪರಿಣಾಮ ಆ ಪ್ರದೇಶದಲ್ಲಿ ಕಂಪನ ಅನುಭವವಾಗಿದೆ. ಪರಮಾಣು ಸ್ಥಾವರದ ಬಳಿ ಸಂಭವಿಸಿದ ಭೂಕಂಪನವು ರಿಕ್ಟರ್ ಮಾಪಕದಲ್ಲಿ 2.5 ರಷ್ಟು ದಾಖಲಾಗಿದೆ. ಇರಾನ್ ಇಂಟರ್ನ್ಯಾಷನಲ್ ಇಂಗ್ಲಿಷ್ ಪೋಸ್ಟ್ ಮಾಡಿದ ವೀಡಿಯೊಗಳು ಕೋಮ್ ನಗರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ಬೃಹತ್ ಸ್ಫೋಟಗಳನ್ನು ತೋರಿಸಿವೆ.

ಇರಾನ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಜೂನ್ 13 ರಂದು ಸಂಘರ್ಷ ಪ್ರಾರಂಭವಾದಾಗಿನಿಂದ ಇಸ್ರೇಲ್‌ ದಾಳಿಗಳಲ್ಲಿ 224 ಜನರು ಸಾವನ್ನಪ್ಪಿದ್ದಾರೆ. ದಾಳಿಗಳಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ 3 ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಮಿಲಿಟರಿ ಸಂಘರ್ಷದ ಮೊದಲ ದಿನವಾದ ಶುಕ್ರವಾರ ಫೋರ್ಡೋ ಪುಷ್ಟೀಕರಣ ಸ್ಥಾವರದ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎಂದು ಇರಾನ್ ತಿಳಿಸಿದೆ. ಇರಾನ್‌ನ ಪರಮಾಣು ಮೂಲಸೌಕರ್ಯ ಮತ್ತು ಮಿಲಿಟರಿ ನಾಯಕತ್ವವನ್ನು ಗುರಿಯಾಗಿಸಿಕೊಂಡು ಇಸ್ರೇಲ್, ಶುಕ್ರವಾರದಿಂದ ಟೆಹ್ರಾನ್ 270 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿದೆ.



ಅತ್ತ ಇಸ್ರೇಲ್‌ ಕೂಡ ಹಲವು ನಷ್ಟವನ್ನು ಅನುಭವಿಸಿದೆ. ಭಾನುವಾರ ತಡರಾತ್ರಿ ಜೆರುಸಲೆಮ್‌ನಾದ್ಯಂತ ವಾಯುದಾಳಿಯ ಸೈರನ್‌ಗಳು ಮೊಳಗಿದವು, ಇಸ್ರೇಲ್ ರಕ್ಷಣಾ ಪಡೆಗಳು (IDF) “ಇರಾನಿನ ಕ್ಷಿಪಣಿಗಳು ಬರುತ್ತಿವೆ” ಎಂದು ದೃಢಪಡಿಸಿವೆ. ಇಸ್ರೇಲ್ ಇರಾನಿನ ಸ್ಥಾನಗಳ ಮೇಲೆ ಗುರಿಯಾಗಿಸಿಕೊಂಡ ವೈಮಾನಿಕ ದಾಳಿಗಳೊಂದಿಗೆ ಪ್ರತಿದಾಳಿ ನಡೆಸಿದೆ ಎಂದು ವರದಿಯಾಗಿದೆ. ಇರಾನಿನ ವಾಯುಪ್ರದೇಶದಲ್ಲಿ ಬಹುತೇಕ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದುಕೊಂಡಿರುವುದಾಗಿ ಇಸ್ರೇಲ್ ಹೇಳಿಕೊಂಡಿದ್ದು, ಭಾನುವಾರದ ದಾಳಿಗಳು ಇರಾನ್‌ನ ರಕ್ಷಣಾ ಸಚಿವಾಲಯ, ಕ್ಷಿಪಣಿ ಉಡಾವಣಾ ತಾಣಗಳು ಮತ್ತು ವಾಯು ರಕ್ಷಣಾ ಘಟಕಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: Israel-Iran Conflict: ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಉಡೀಸ್‌; ಇರಾನ್‌-ಇಸ್ರೇಲ್‌ ಡೆಡ್ಲಿ ಅಟ್ಯಾಕ್‌ ವಿಡಿಯೊ ವೈರಲ್‌

ಇತ್ತೀಚಿನ ಗುರಿಗಳಲ್ಲಿ ವಿದೇಶಾಂಗ ಸಚಿವಾಲಯ ಮತ್ತು ಟೆಹ್ರಾನ್‌ನ ಉತ್ತರದಲ್ಲಿರುವ ಶಹ್ರಾನ್ ತೈಲ ಡಿಪೋ ಮತ್ತು ದಕ್ಷಿಣದಲ್ಲಿರುವ ಇಂಧನ ಟ್ಯಾಂಕ್ ಸೇರಿದಂತೆ ಹಲವಾರು ಇಂಧನ ಸೌಲಭ್ಯಗಳು ಸೇರಿವೆ, ಇವೆರಡೂ ಭಾನುವಾರ ಬೆಂಕಿಗೆ ಆಹುತಿಯಾದವು.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »