Karunadu Studio

ಕರ್ನಾಟಕ

Bus Staff Humanity: ಬಸ್ ನಲ್ಲಿ ಮರೆತಿದ್ದ ಲ್ಯಾಪ್ ಟಾಪ್ ಮತ್ತು ನಗದನ್ನು ಪ್ರಯಾಣಿಕನಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಬಸ್ ಸಿಬ್ಬಂದಿ – Kannada News | Bus staff showed humanity by returning laptop and cash to passenger who forgot it on the bus


ಬಾಗೇಪಲ್ಲಿ: ಡಿಪೋ ಘಟಕಕ್ಕೆ ಸೇರಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಿಕ್ಕಬಳ್ಳಾಪುರ ದಿಂದ ಬಾಗೇಪಲ್ಲಿಗೆ ಕೆಎಸ್ಆರ್ಟಿಸಿ ಬಸ್ ನಲ್ಲಿ ಸೋಮವಾರ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕ ನರಸಿಂಹಯ್ಯ ಎಂಬುವರು ತಮ್ಮ ಲ್ಯಾಪ್ಟಾಪ್ ಮತ್ತು 27 ಸಾವಿರ ನಗದನ್ನು ಬಸ್ಸಿನಲ್ಲಿಯೇ ಮರೆತು ಹೋಗಿರುತ್ತಾರೆ. ಇದನ್ನ ಮನಗಂಡ ನಿರ್ವಾಹಕ ಬಹುದೂರ್ ಸಾಬ್ ಮತ್ತು ಚಾಲಕ ಲಕ್ಷ್ಮೀನರಸಿಂಹಯ್ಯರವರು ಪಟ್ಟಣದ ಹೊರವಲಯದ ಬಸ್ ಘಟಕದ ಭದ್ರತಾ ಸಿಬ್ಬಂದಿಗೆ ನೀಡಿ, ವಾರಸುದಾರರನ್ನು ಪತ್ತೆ ಮಾಡಿ ಹಿಂತಿರುಗಿಸಲು ತಿಳಿಸಿರುತ್ತಾರೆ. ಅದರಂತೆ ಆ ಸಾಮಗ್ರಿಗಳ ವಾರಸುದಾರ ನರಸಿಂಹಯ್ಯರನ್ನು ಪತ್ತೆ ಮಾಡಿ, ಘಟಕಕ್ಕೆ ಕರೆಯಿಸಿ ಲ್ಯಾಪ್ ಟಾಪ್ ಮತ್ತು 27 ಸಾವಿರ ನಗದನ್ನು ಡಿಪೋ ಮ್ಯಾನೇಜರ್ ಶ್ರೀನಿವಾಸ ಮೂರ್ತಿ ಹಿಂತಿರುಗಿಸಿದರು.

ಇದನ್ನೂ ಓದಿ: Child Labour: ಬಾಲ ಕಾರ್ಮಿಕ ಪದ್ದತಿ ಸಮಾಜಕ್ಕೆ ಮಾರಕ: ನ್ಯಾ ಗಣೇಶ್

ಘಟಕದ ಮ್ಯಾನೇಜರ್ ಶ್ರೀನಿವಾಸ ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ, ಕೆ.ಎಸ್.ಆರ್. ಟಿ.ಸಿ. ಬಸ್ ಸಂಖ್ಯೆ ಕೆ.ಎ 40,ಎಫ್-1403 ಬಸ್ ನ ಚಾಲಕ ಲಕ್ಷ್ಮೀನರಸಿಂಹಯ್ಯ ಮತ್ತು ನಿರ್ವಾಹಕ ಬಹದ್ದೂರ್ ಸಾಬ್ ರವರು ಬಸ್ ನಲ್ಲಿ ಬಿಟ್ಟು ಹೋಗಿದ್ದ ಲ್ಯಾಪ್ ಮತ್ತು ನಗದನ್ನು ಹಿಂತಿರುಗಿಸಿ ಮಾನವೀಯತೆಯ ಜೊತೆಗೆ ಪ್ರಾಮಾಣಿಕತೆ ಮೆರೆದಿದ್ದಾರೆ ಎಂದರು.

ಪ್ರಯಾಣಿಕ ನರಸಿಂಹಯ್ಯ ಮಾತನಾಡಿ,ಇಂಥ ಸ್ವಾರ್ಥ ಜಗತ್ತಿನ ನಡುವೆ ಪ್ರಾಮಾಣಿಕ ಮತ್ತು ನಿಸ್ವಾರ್ಥ ಮನೋಭಾವದ ನಿರ್ವಾಹಕ ಹಾಗೂ ಚಾಲಕರು ಇದ್ದಾರೆ ಎಂದರೆ ನಿಜಕ್ಕೂ ಸಂತಸ ತಂದಿದೆ. ಬಸ್ ನಿರ್ವಾಹಕ ಮತ್ತು ಚಾಲಕರಿಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಕೋರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಲೆಕ್ಕ ಸಹಾಯಕ ಮಹಮ್ಮದ್ ಖಾಲಿದ್, ವೇಣುಗೋಪಾಲ‌, ರವಿ, ಗೂಳೂರು ಶ್ರೀನಿವಾಸ್ ಇತರರು ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »