Karunadu Studio

ಕರ್ನಾಟಕ

IND vs ENG: ವಾಷಿಂಗ್ಟನ್‌ ಸುಂದರ್‌ ನನಗೆ ಸ್ಪೂರ್ತಿ ಎಂದ ಸಾಯಿ ಸುದರ್ಶನ್‌! – Kannada News | IND vs ENG: Washington Sundar has been my inspiration since I was young: Sai Sudharsan


ಬೆಕೆನ್‌ಹ್ಯಾಮ್: ವಾಷಿಂಗ್ಟನ್ ಸುಂದರ್ (Washington Sundar) ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ನನಗೆ ಸ್ಪೂರ್ತಿ ನೀಡಿದೆ ಎಂದು ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ ಸಾಯಿ ಸುದರ್ಶನ್‌ (Sai Sudharsan) ತಿಳಿಸಿದ್ದಾರೆ. ಸುದರ್ಶನ್ ಜೂನ್ 20 ರಂದು ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ವಾಷಿಂಗ್ಟನ್ 2016ರಲ್ಲಿ ನಡೆದಿದ್ದ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದರು ಮತ್ತು ಒಂದೂವರೆ ವರ್ಷದೊಳಗೆ ಅವರು 18 ವರ್ಷ ವಯಸ್ಸಿನವರಾಗಿದ್ದಾಗ ಭಾರತ ಪರ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ್ದರು. ಅವರು 2021 ರಲ್ಲಿ 20ರ ವಯಸ್ಸಿನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತದ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

“ನಾನು ಅವರೊಂದಿಗೆ (ಜೂನಿಯರ್ ಮಟ್ಟದಲ್ಲಿ) ಕೆಲವು ಪಂದ್ಯಗಳನ್ನು ಆಡಿದ್ದೇನೆ. ಆದ್ದರಿಂದ, ಇದು ಯಾವಾಗಲೂ ವಿಶೇಷವಾಗಿದೆ. ನಾವು ಅವರಿಂದ ಸಾಕಷ್ಟು ಸ್ಫೂರ್ತಿ ಪಡೆಯುತ್ತೇವೆ ಮತ್ತು ಅವರು ಬಹಳ ಕಡಿಮೆ ಸಮಯದಲ್ಲಿ ಭಾರತ ತಂಡಕ್ಕೆ ಆಡಿದ್ದಾರೆ. ಇದು ನನ್ನ ಮನಸ್ಸಿನಲ್ಲಿದ್ದು, ನಾನು ಕೂಡ ಈ ಸಾಧನೆ ಮಾಡಬೇಕೆಂಬ ಗುರಿಯನ್ನು ಹುಟ್ಟು ಹಾಕಿತ್ತು,” ಎಂದು ಸಾಯಿ ಸುದರ್ಶನ್ ಬಿಸಿಸಿಐ ಟಿವಿಗೆ ಹೇಳಿದ್ದಾರೆ.

IND vs ENG: ಎಂಎಸ್ ಧೋನಿ ಅಲ್ಲ! ನಾಯಕನಾಗಿ ವಿರಾಟ್‌ ಕೊಹ್ಲಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕಿಂಗ್‌!

ವಾಷಿಂಗ್ಟನ್ ಸುಂದರ್‌ ಅವರನ್ನು ಹೊಗಳುತ್ತಾ ಎಡಗೈ ಬ್ಯಾಟ್ಸ್‌ಮನ್, “ಅವರು (ವಾಷಿಂಗ್ಟನ್) ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿದರು. ನಂತರ ಅವರು ದೇಶಕ್ಕಾಗಿ ಆಡಿದರು. ಆದ್ದರಿಂದ ಚೆನ್ನೈನ ಆಟಗಾರನೊಬ್ಬ ಭಾರತಕ್ಕಾಗಿ ಆಡುತ್ತಿರುವುದು ನನಗೆ ದೊಡ್ಡ ಸ್ಫೂರ್ತಿಯಾಗಿದೆ. ಅವರನ್ನು ತಿಳಿದುಕೊಂಡು ಅವರೊಂದಿಗೆ ಆಡುವುದರಿಂದ ನಾನು ಕೂಡ ಅದೇ ರೀತಿ ಆಡಲು ಬಯಸುತ್ತೇನೆ ಎಂದು ನನಗೆ ಅನಿಸಿತು. ಅವರು ಸ್ಫೂರ್ತಿಯಾಗಿದ್ದಾರೆ,” ಎಂದು ಎಡಗೈ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.

ಸುದರ್ಶನ್‌ ಬಗ್ಗೆ ಸುಂದರ್‌ ಮೆಚ್ಚುಗೆ

ಭಾರತ ತಂಡದ ಪರ ಒಂಬತ್ತು ಟೆಸ್ಟ್, 23 ಏಕದಿನ ಮತ್ತು 54 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಾಷಿಂಗ್ಟನ್ ಸುಂದರ್‌, ಸಾಯಿ ಸುದರ್ಶನ್ ಚೆನ್ನೈನಿಂದ ಪ್ರತಿಭಾನ್ವಿತ ಕ್ರಿಕೆಟಿಗನಾಗಿ ಹೊರಹೊಮ್ಮುತ್ತಿದ್ದ ಸಮಯದ ಬಗ್ಗೆ ಮಾತನಾಡಿದರು. “ನನ್ನ ಅನೇಕ ತರಬೇತುದಾರರು ಮತ್ತು ಸ್ನೇಹಿತರು ನಿರಂತರವಾಗಿ ಅವರ (ಸಾಯಿ ಸುದರ್ಶನ್) ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಮಾತನಾಡುತ್ತಿದ್ದರು. ಅವರು ತಮ್ಮ ಆಟವನ್ನು ಸುಧಾರಿಸುತ್ತಲೇ ಇದ್ದರು ಮತ್ತು ಮುಂದುವರಿಯುತ್ತಿದ್ದರು,” ಎಂದು ಹೇಳಿದ್ದಾರೆ.

IND vs ENG: ಸೆಹ್ವಾಗ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ಯಶಸ್ವಿ ಜೈಸ್ವಾಲ್!

“ನಾನು ಅವರನ್ನು (ಸುದರ್ಶನ್) ಟಿವಿಯಲ್ಲಿ ನೋಡಿದಾಗಲೆಲ್ಲಾ, ಅವರ ಕೌಶಲ ಮತ್ತು ಕೆಲಸದ ನೀತಿಯಿಂದ ಕಲಿಯಲು ಬಹಳಷ್ಟು ಇತ್ತು, ಇದು ಖಂಡಿತವಾಗಿಯೂ ಬಹಳಷ್ಟು ಯುವ ಆಟಗಾರರಿಗೆ ಸ್ಫೂರ್ತಿ ನೀಡಿದೆ,” ಎಂದು ವಾಷಿಂಗ್ಟನ್‌ ಸುಂದರ್‌ ಶ್ಲಾಘಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆಯ ಸನಿಹದಲ್ಲಿ ಸುದರ್ಶನ್‌

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಜೂನ್‌ 20 ರಂದು ಆರಂಭವಾಗುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿವೆ. ಮೊದಲನೇ ಟೆಸ್ಟ್‌ ಪಂದ್ಯ ಲೀಡ್ಸ್‌ನಲ್ಲಿ ನಡೆಯಲಿದ್ದು, ಈ ಪಂದ್ಯದ ಮೂಲಕ ಸಾಯಿ ಸುದರ್ಶನ್‌ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »