Karunadu Studio

ಕರ್ನಾಟಕ

Viral Video: ಊಟದ ವಿಷಯಕ್ಕೆ ಕಿರಿಕ್; ರೊಚ್ಚಿಗೆದ್ದ ಪ್ರಯಾಣಿಕರಿಂದ ಅನಾಗರಿಕ ವರ್ತನೆ – Kannada News | what the passengers did to the flight attendants; video goes viral


ಮುಂಬೈ: ಅಹಮದಾಬಾದ್‍ನಲ್ಲಿ ನಡೆದ ಭೀಕರ ಏರ್‌ ಇಂಡಿಯಾ ವಿಮಾನ ದುರಂತ ಇನ್ನು ಯಾರ ಮನಸ್ಸಿನಿಂದಲೂ ಮಾಸಿಲ್ಲ. ಇದೀಗ ಪುಣೆ ವಿಮಾನ ನಿಲ್ದಾಣದಲ್ಲಿ ಆಹಾರದ ಗುಣಮಟ್ಟದ ವಿಚಾರಕ್ಕೆ ಪ್ರಯಾಣಿಕರು ವಿಮಾನ ಸಿಬ್ಬಂದಿಯ ಜತೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. ಸ್ಪೈಸ್‌ಜೆಟ್ ಪ್ರಯಾಣಿಕರ ಗುಂಪೊಂದು ವಿಮಾನ ವಿಳಂಬದ ಸಂದರ್ಭದಲ್ಲಿ ತಮಗೆ ನೀಡಲಾದ ಆಹಾರದ ಗುಣಮಟ್ಟ ಉತ್ತಮವಾಗಿಲ್ಲ ಎಂದು ಆರೋಪಿಸಿ ಅದನ್ನು ವಿಮಾನ ಸಿಬ್ಬಂದಿಗೆ ತಿನ್ನುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಏನಿದೆ?

ವೈರಲ್ ಆದ ವಿಡಿಯೊಗಳಲ್ಲಿ, ಸ್ಪೈಸ್‌ಜೆಟ್ ವಿಮಾನದ ಸಿಬ್ಬಂದಿ ಬಳಿ ಪ್ರಯಾಣಿಕರು, ತಮಗೆ ನೀಡಲಾದ ಆಹಾರವನ್ನು ಸೇವಿಸುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ. ಆ ಸಿಬ್ಬಂದಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಅವರ ಮುಂದೆಯೇ ಆ ಊಟವನ್ನು ತಿಂದಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ…

ಈ ಬಗ್ಗೆ ವಿಮಾನಯಾನ ಸಂಸ್ಥೆಯ ಪ್ರತಿಕ್ರಿಯೆ ಏನು?

ಈ ಘಟನೆಗೆ ಪ್ರತಿಕ್ರಿಯೆಯಿಸಿದ ವಿಮಾನಯಾನ ಸಂಸ್ಥೆ, ಪ್ರಯಾಣಿಕರ ಆರೋಪಗಳನ್ನು ತಳ್ಳಿ ಹಾಕಿದೆ. ಪ್ರಯಾಣಿಕರಿಗೆ ನೀಡಿದ ಆಹಾರವು ತಾಜಾ ಮತ್ತು ಉತ್ತಮ ಗುಣಮಟ್ಟದ್ದಾಗಿತ್ತು ಎಂದು ಹೇಳಿದೆ. ಊಟವನ್ನು ಪೂರೈಸುವ ಅಧಿಕೃತ ಮಾರಾಟಗಾರರಿಂದ ಆಹಾರವನ್ನು ಪಡೆಯಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ತನ್ನ ಸಿಬ್ಬಂದಿ ವಿರುದ್ಧದ ಪ್ರಯಾಣಿಕರ ವರ್ತನೆಯನ್ನು ಸ್ಪೈಸ್‌ಜೆಟ್ ಖಂಡಿಸಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. “ಶಿಷ್ಟಾಚಾರ ಇಲ್ಲದ ಜನರು” ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು, “ವಿಮಾನ ನಿಲ್ದಾಣದ ಸಿಬ್ಬಂದಿಗೆ ಕಿರುಕುಳ ಮತ್ತು ಅವಮಾನ ಏಕೆ?” ಎಂದು ಕೇಳಿದ್ದಾರೆ. ʼʼಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಹುಚ್ಚರಾಗಿದ್ದಾರೆ!” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: 56 ವರ್ಷಗಳ ನಂತರ ಈ ಕುಟುಂಬದಲ್ಲಿ ಹೆಣ್ಣು ಮಗು ಜನನ; ಇವ್ರ ಸಂಭ್ರಮ ನೋಡೋಕೆ ಕಣ್ಣೆರಡು ಸಾಲದು!

ವರದಿ ಪ್ರಕಾರ, ದಿಲ್ಲಿಗೆ ತೆರಳಬೇಕಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ಈ ಘಟನೆ ಸಂಭವಿಸಿದ್ದು, ವಿಮಾನ ಏಳು ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಗಿದ್ದರಿಂದ ಪ್ರಯಾಣಿಕರು ನಿರಾಶೆಗೊಂಡು ಇಂತಹ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »