Karunadu Studio

ಕರ್ನಾಟಕ

Chikkaballapur News: ಛಲವಾದಿ ನಾರಾಯಣಸ್ವಾಮಿ ವಿರುದ್ಧ ವೈಯಕ್ತಿಕ ದಾಳಿ ಖಂಡನೀಯ: ರಾಜೇಂದ್ರ ಬಾಬು ಎಂ. – Kannada News | Personal attack against the deceitful Narayanaswamy is condemnable: Rajendra Babu M.


ಚಿಂತಾಮಣಿ: ಛಲವಾದಿ ನಾರಾಯಣಸ್ವಾಮಿ ನಮ್ಮ ನಾಯಕರು. ಅವರನ್ನು  ರಾಜಕೀಯವಾಗಿ ಎದುರುಗೊಳ್ಳಬೇಕೇ ವಿನಃ ವೈಯಕ್ತಿಕವಾಗಿ ಅವಮಾನಿಸುವುದು, ವೈಯಕ್ತಿಕವಾಗಿ ನಿಂಧನೆ ಮಾಡುವುದನ್ನು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಖಂಡಿಸುತ್ತದೆ ಎಂದು ಅಂಬೇಡ್ಕರ್ ಸ್ವಾಭಿ ಮಾನಿ ಸೇನೆಯ ರಾಜೇಂದ್ರ ಬಾಬು ಎಚ್ಚರಿಕೆ ನೀಡಿದ್ದಾರೆ.

ಚಿಂತಾಮಣಿ ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿ ಮಾತನಡಿರುವ ಅವರು ಕರ್ನಾಟಕ ರಾಜ್ಯವನ್ನು ಅನೇಕ ಸಭ್ಯ ರಾಜಕಾರಣಿಗಳು ರಾಜ್ಯವಾಳಿದ ಇತಿಹಾಸವಿದೆ. ಅದರಲ್ಲೂ ಬಿ.ಬಸವಲಿಂಗಪ್ಪ, ಎನ್.ರಾಚಯ್ಯ ನವರಂತ ಮಹನೀಯರು ರಾಜಕಾರಣ ಮಾಡಿದ ನೆಲವಿದು. ಇಂತಹವರ ಸಾಲಿಗೆ ಸೇರುವ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ನಡೆಯನ್ನು ಪ್ರಶ್ನಿಸುವುದು ಸಹಜ. ಆದರೆ ಇದಸನ್ನು ಸಹಿಸದೆ ಕೆಲವರು ಇತ್ತೀಚೆಗೆ ಛಲವಾದಿ ನಾರಾಯಣ ಸ್ವಾಮಿಯವರ ಮೇಲೆ ವೈಯಕ್ತಿಕ ದಾಳಿ ಅವಹೇಳನ ಆಗುತ್ತಿರುವುದು ಖಂಡನೀಯ ಎಂದರು.

ಇದನ್ನೂ ಓದಿ: Chikkaballapur News: ರೈಲ್ವೇ ಮೇಲ್ಸೇತುವೆ ಮೇಲೆ ಎಲ್‌ಇಡಿ ಲೈಟುಗಳ ಅಳವಡಿಕೆ: ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳಿಗೆ ಕೃತಜ್ಞತೆ

ನಮಗೆ ಪಕ್ಷ ಮುಖ್ಯವಲ್ಲ ಯಾರು ಯಾವುದೇ ಪಕ್ಷದಲ್ಲಿರಲಿ ವೈಯಕ್ತಿಕ ದಾಳಿಯನ್ನು ಯಾರು ಸಹಿಸಿಕೊಳ್ಳಬಾರದು.ದಲಿತನೆ ಅಲ್ಲ. ಛಲವಾದಿನೇ ಅಲ್ಲ.ಚುನಾವಣೆಯಲ್ಲಿ ಗೆದ್ದೆ ಇಲ್ಲ ಎನ್ನುವ ಈ ಮಾತುಗಳು ಸಭ್ಯ ರಾಜಕಾರಣಿಗೆ ಶೋಭೆ ತರುವುದಿಲ್ಲ. ಮೂವತೈದು ವರ್ಷಗಳ ಕಾಲ ಕಾಂಗ್ರೆಸ್‌ ನಲ್ಲಿದ್ದೆ ಒಂದೇ ಒಂದು ಅವಕಾಶ ನೀಡಲಿಲ್ಲ. ಮಾತಾಡುವ ಹಕ್ಕು ಕೊಟ್ಟಿಲ್ಲ ಅಂತ ಹೇಳುವುದು ತಪ್ಪೆ.ಈಗ ಮಾತಾಡುವ ಅವಕಾಶ ಸಿಕ್ಕಿದೆ. ತನ್ನ ಸಮುದಾಯದ ವಿಚಾರಗಳ ಬಗ್ಗೆ ಮಾತಾಡುವ ಅವಕಾಶವಿದೆ. ಹಾಗಾಗಿ ಮಾತಾಡ್ತಿನಿ ಅನ್ನೋದು ತಪ್ಪೇ ಎಂದರು.

ಯಾಕೆ ಒಬ್ಬ ದಲಿತ ನಾಯಕ ವಿರೋಧಪಕ್ಷದ ನಾಯಕನಾಗಬಾರದಾ? ಆಗಬಾರದು ಎಂಬ ಮನಸ್ಥಿಯ ಮಂದಿಯಿಂದ ಮಾತ್ರ ಅವಹೇಳನ ಸಾಧ್ಯ. ಗುಲಬರ್ಗಾ ಪ್ರವಾಸಿ ಮಂದಿರದಲ್ಲಿ ಗಂಟೆ ಗಟ್ಟಲ್ಲೇ ದಿಗ್ಬಂಧನ ಮಾಡುತ್ತಾರೆ. ಸಾರ್ವಜನಿಕವಾಗಿ ನಿಂಧನೆ ಮಾಡುವುದು, ಬೆದರಿಕೆ ಹಾಗುವು ದನ್ನು ಗಮನಿಸಿದರೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು ಎಂದು ಕಿಡಿಕಾರಿದರು.

ಛಲವಾದಿ ನಾರಾಯಣಸ್ವಾಮಿ ನೂರಾರು ಕೋಟಿಗಳನ್ನು ಕೂಡಿಟ್ಟಿಲ್ಲ, ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಲಿಲ್ಲ, ಹೀಗಿದ್ದರೂ ಒಬ್ಬ ಸಮುದಾಯದ ನಾಯಕ  ಎಸ್ಸಿಎಸ್‌ಪಿ.ಟಿಎಸ್‌ಪಿ ಹಣ ದುರುಪಯೋಗದ ಬಗ್ಗೆ ಮಾತಾಡುತ್ತಿದ್ದಾರೆ, ಆಡಳಿತ ಪಕ್ಷದಲ್ಲಿದ್ದ ಯಾವೊಬ್ಬ ಸಮುದಾಯದ ನಾಯಕ ಈ ದುರುಪಯೋಗವನ್ನು ಖಂಡಿಸಿದ್ದು ತಪ್ಪೇ ಎಂಬುದನ್ನು ಅವಹೇಳನ ಮಾಡು ವವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ಸಮುದಾಯ ಹಿತಕ್ಕೆ ಒಳಿತನ್ನು ಮಾಡುವವರು ಯಾವುದೇ ಪಕ್ಷದಲ್ಲಿರಲಿ ಅವರನ್ನು ನಾವು ಬೆಂಬಲಿಸುತ್ತೇವೆ. ಅದೇ ರೀತಿ ಸಮುದಾಯದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುವವರು ಯಾವುದೇ ಪಕ್ಷದಲ್ಲಿ ಇರಲಿ ನಾವು ಅವರನ್ನು ವಿರೋಧಿಸು ತ್ತೇವೆ. ನಮಗೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್  ವಾದವೇ ಮುಖ್ಯ ಅದು ಬಿಟ್ಟರೆ ಬೇರೆ ಯಾವುದು ಇಲ್ಲ. ಹಾಗಾಗಿ ಛಲವಾದಿ ನಾರಾಯಣಸ್ವಾಮಿ ಯವರು ಸಮುದಾಯದ ಪರವಾಗಿ ರಾಜಕಾರಣ ಮಾಡುತ್ತಿದ್ದಾರೆ ಅವರ ಪರವಾಗಿ ನಾವಿದ್ದೇವೆ ಎಂದು ರಾಜ್ಯ ಕಾರ್ಯದರ್ಶಿ ರಾಜೇಂದ್ರ ಬಾಬು ಮಾಧ್ಯಮಗಳಿಗೆ ತಿಳಿಸಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »