ಲಖನೌ: ಉತ್ತರ ಪ್ರದೇಶದ ಬಾರೌಟ್ ಪಟ್ಟಣದ ಹೋಟೆಲ್‌ವೊಂದರಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಎಂಜಾಯ್ ಮಾಡ್ತಿದ್ದ ವೇಳೆ ತನ್ನ ಪತಿಗೆ ಸಿಕ್ಕಿಬಿದ್ದಿದ್ದಾಳೆ. ಬಳಿಕ ತನ್ನ ಪತಿಯನ್ನು ನೋಡಿದ ಮಹಿಳೆ ಸುಮಾರು 12 ಅಡಿ ಎತ್ತರದ ಹೊಟೇಲ್ ಮಹಡಿಯಿಂದ ಜಿಗಿದು ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ. ಮಂಗಳವಾರ ಪತಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯರು ಮಹಿಳೆಯ ಪ್ರಿಯಕರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಕೆಯ ಪತಿ ನೀಡಿರುವ ದೂರಿನಾಧಾರದಲ್ಲಿ ಪ್ರಕರಣದ ಬೆನ್ನತ್ತಿರುವ ಪೋಲಿಸರು ಮಹಿಳೆಗಾಗಿ ಬಲೆ ಬೀಸಿದ್ದಾರೆ. ಆದರೆ ಮಹಿಳೆ ಇದುವರೆಗೂ ಪತ್ತೆಯಾಗಿಲ್ಲ ಎನ್ನಲಾಗಿದೆ. ಇನ್ನು ಮಹಿಳೆ ಮಹಡಿಯಿಂದ ಜಂಪ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ಬಾರೌಟ್ ಕೋತ್ವಾಲಿ ಠಾಣೆಯ ಪೋಲಿಸ್ ಅಧಿಕಾರಿ ಮನೋಜ್ ಕುಮಾರ್ ಚಹಲ್ ಮಾತನಾಡಿ, ಆಕೆಯ ಜೊತೆಗಿದ್ದ ವ್ಯಕ್ತಿಯನ್ನು ಶೋಭಿತ್ ಎಂದು ಗುರುತಿಸಲಾಗಿದೆ. ಈಗಾಗಲೇ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಹೋಟೆಲ್ ಮಾಲೀಕನನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಆಕೆಯ ಪತಿ ನೀಡಿರುವ ದೂರಿನಲ್ಲಿ 2019ರಲ್ಲಿ ನಾವಿಬ್ಬರು ವಿವಾಹವಾಗಿದ್ದು, ನಮಗೆ ಒಬ್ಬ ಮಗನಿದ್ದಾನೆ. ವಿವಾಹಕ್ಕೂ ಮೊದಲು ಮಹಿಳೆ ಇದೇ ರೀತಿಯ ಸಂಬಂಧಗಳನ್ನು ಹೊಂದಿದ್ದಳು. ಆ ಸಂಬಂಧಗಳು ಮದುವೆಯ ನಂತರವೂ ಮುಂದುವರಿದಿದ್ದವು. ನನ್ನನ್ನು ವಿರೋಧಿಸಿದರೆ ಕೊಲ್ಲುತ್ತೇನೆ ಎಂಬ ಬೆದರಿಕೆಯೊಡ್ಡಿದ್ದಳು ಎಂದು ದೂರಿನಲ್ಲಿ ಪತಿ ಹೇಳಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ವಿಡಿಯೊ ಫುಲ್ ವೈರಲ್
ಈ ಸುದ್ದಿಯನ್ನೂ ಓದಿ: Ahmedabad Plane Crash: ಹಾಸ್ಟೆಲ್ ಕಟ್ಟಡಕ್ಕೆ ವಿಮಾನ ಅಪ್ಪಳಿಸುತ್ತಿದ್ದಂತೆ ಕಿಟಕಿಯಿಂದ ಜಿಗಿದ ವಿದ್ಯಾರ್ಥಿ; ವಿಡಿಯೊ ವೈರಲ್
ಘಟನೆ ನಡೆದ ದಿನವೂ ಈ ದಂಪತಿ ಎಸ್‌ಪಿ ಕಚೇರಿಯಲ್ಲಿ ಮ್ಯಾರಿಟಲ್ ಕೌನ್ಸಿಲಿಂಗ್‌ಗೆ ಒಳಗಾಗಿದ್ದರು. ನಂತರ ಮಹಿಳೆ ತನ್ನ ಪ್ರಿಯಕರ ಶೋಭಿತ್ ಬೈಕ್ ಹತ್ತಿ ಹೋಗಿದ್ದು. ಇದನ್ನು ನೋಡಿದ ಪತಿ ಅವರನ್ನು ಹೋಟೆಲ್‌ವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾನೆ. ಬಳಿಕ ಪತಿಯನ್ನು ನೋಡಿದ ಪತ್ನಿ ಪರಾರಿಯಾಗಿದ್ದಾಳೆ. ಮಹಿಳೆ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಪತಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಪೊಲೀಸ್ ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.