Karunadu Studio

ಕರ್ನಾಟಕ

IND vs ENG: ಭಾರತ ತಂಡಕ್ಕೆ ಬ್ಯಾಟಿಂಗ್‌ ಕ್ರಮಾಂಕ ಆರಿಸಿದ ದಿನೇಶ್‌ ಕಾರ್ತಿಕ್‌! – Kannada News | Karun Nair At No.6, Nitish Reddy Out: Dinesh Karthik Predicts India Batting Order Vs England


ಲೀಡ್ಸ್:‌ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು(IND vs ENG) ಆಡುವ ಮೂಲಕ ಭಾರತ ತಂಡ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC 2025-27) ಅಭಿಯಾನವನ್ನು ಆರಂಭಿಸಲು ಎದುರು ನೋಡುತ್ತಿದೆ. ಜೂನ್‌ 20 ರಂದು ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಮೊದಲನೇ ಪಂದ್ಯದಲ್ಲಿ ಆಡುವ ಮೂಲಕ ಟೀಮ್‌ ಇಂಡಿಯಾ, ಇಂಗ್ಲೆಂಡ್‌ ಪ್ರವಾಸವನ್ನು ಅಧಿಕೃತವಾಗಿ ಆರಂಭಿಸಲಿದೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹಾಗಾಗಿ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಹಾಗಾಗಿ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ (Dinesh Karthik) ಭಾರತ ತಂಡಕ್ಕೆ ಬ್ಯಾಟಿಂಗ್‌ ಕ್ರಮಾಂಕವನ್ನು ಆರಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಮಾತನಾಡಿದ ದಿನೇಶ್‌ ಕಾರ್ತಿಕ್‌, ಯಶಸ್ವಿ ಜೈಸ್ವಾಲ್‌ ಜೊತೆ ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಬೇಕು. ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್‌ ಆಡಬೇಕು. ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶುಭಮನ್‌ ಗಿಲ್‌ ಆಡಬೇಕೆಂದು ಹೇಳಿದ್ದಾರೆ. ರಿಷಭ್‌ ಪಂತ್‌ ಐದನೇ ಕ್ರಮಾಂಕದಲ್ಲಿ ಆಡಿದರೆ, ಕರುಣ್‌ ನಾಯರ್‌ ಆರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ತಿಳಿಸಿದ್ದಾರೆ.‌ ಸ್ಪಿನ್ ಆಲ್‌ರೌಂಡರ್‌ ರವೀಂದ್ರ ಜಡೇಜಾ ಏಳನೇ ಕ್ರಮಾಂಕ ಮತ್ತು ಶಾರ್ದುಲ್‌ ಠಾಕೂರ್‌ ಎಂಟನೇ ಕ್ರಮಾಂಕದಲ್ಲಿ ಆಡಬೇಕೆಂದು ಸಲಹೆ ನೀಡಿದ್ದಾರೆ.

IND vs ENG: ಭಾರತದ ನಾಲ್ಕನೇ ಕ್ರಮಾಂಕದಲ್ಲಿ ಆಡಲಿರುವ ಬ್ಯಾಟ್ಸ್‌ಮನ್‌ ಆರಿಸಿದ ರಿಷಭ್‌ ಪಂತ್‌!

“ಜೈಸ್ವಾಲ್ ಇಂತಹ ಸವಾಲಿಗೆ ಸಿದ್ಧರಾಗಿರುವ ವ್ಯಕ್ತಿಯಂತೆ ಕಾಣುತ್ತಾರೆ. 3ನೇ ಸ್ಥಾನದಲ್ಲಿ ಸಾಯಿ ಸುದರ್ಶನ್, ವೈಟ್-ಬಾಲ್ ಕ್ರಿಕೆಟ್, ಐಪಿಎಲ್ ಮತ್ತು ಭಾರತಕ್ಕಾಗಿ ಅವರು ಪಡೆದ ಸೀಮಿತ ಅವಕಾಶಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಕಾರ್ತಿಕ್ ಹೇಳಿದ್ದಾರೆ.

“ಅವರು (ಸುದರ್ಶನ್) ವೈಟ್‌ಬಾಲ್‌ ಫಾರ್ಮ್ ಅನ್ನು ರೆಡ್-ಬಾಲ್ ಕ್ರಿಕೆಟ್ ಆಗಿ ಪರಿವರ್ತಿಸಬಹುದೇ? ಶುಭಮನ್ ಗಿಲ್, ಅವರು ಕಿಂಗ್‌ ವಿರಾಟ್‌ ಕೊಹ್ಲಿಯಿಂದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಅದು ದೊಡ್ಡದು, ಆದರೆ ಅವರಿಗೆ ತಿಳಿದಿದೆ. ಅವರು ಆ ಡ್ರೆಸ್ಸಿಂಗ್ ರೂಮ್ ಅನ್ನು ಗೆಲ್ಲಲು ಬಯಸುತ್ತಾರೆ. ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತೋರಿಸಿದ ಫಾರ್ಮ್ ಅನ್ನು ತೋರಿಸಿದರೆ, ಜಗತ್ತೇ ಅವರನ್ನು ಮೆಚ್ಚಿಕೊಳ್ಳಲಿದೆ. 8ನೇ ಕ್ರಮಾಂಕಕ್ಕೆ ಶಾರ್ದುಲ್‌ ಠಾಕೂರ್ ಸೂಕ್ತ ವ್ಯಕ್ತಿಯಾಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಬೌಲಿಂಗ್ ಆಲ್‌ರೌಂಡರ್, ಆದರೆ ಅವರ ಬ್ಯಾಟಿಂಗ್ ಉಪಯುಕ್ತವಾಗಲಿದೆ,” ಎಂದು ಅವರು ಹೇಳಿದರು.

IND vs ENG: ಮೊದಲನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XI ಪ್ರಕಟ!

ಭಾರತ ಟೆಸ್ಟ್‌ ತಂಡ

ಶುಭಮನ್ ಗಿಲ್ (ನಾಯಕ), ರಿಷಭ್‌ ಪಂತ್ (ಉಪ ನಾಯಕ ಮತ್ತು ವಿ.ಕೀ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿ.ಕೀ), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಜಸ್‌ಪ್ರೀತ್‌ ಬುಮ್ರಾ. ಮೊಹಮ್ಮದ್‌ ಸಿರಾಜ್, ಪ್ರಸಿಧ್‌ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲ್‌ದೀಪ್ ಯಾದವ್, ಹರ್ಷಿತ್‌ ರಾಣಾ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »