Karunadu Studio

ಕರ್ನಾಟಕ

Stock Market: ಇಸ್ರೇಲ್-‌ ಇರಾನ್‌ ಸಮರ: ತೈಲ ದರ ಏರಿಕೆಯ ಭೀತಿ, ಸೆನ್ಸೆಕ್ಸ್-ನಿಫ್ಟಿ ಮಂದಗತಿ – Kannada News | Stock Market Israel Iran war Fears of oil price hike Sensex Nifty slump


ಕೇಶವ ಪ್ರಸಾದ್‌ ಬಿ.

ಇಸ್ರೇಲ್‌ ಮತ್ತು ಇರಾನ್‌ ನಡುವಣ ಸಂಘರ್ಷ ತೀವ್ರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಬುಧವಾರ ಮಂದಗತಿಯಲ್ಲಿತ್ತು. ಅಂತಿಮವಾಗಿ ಸೆನ್ಸೆಕ್ಸ್‌ 138 ಅಂಕ ಕಳೆದುಕೊಂಡು 81,444ಕ್ಕೆ ಸ್ಥಿರವಾಯಿತು. ನಿಫ್ಟಿ 41 ಅಂಕ ನಷ್ಟದಲ್ಲಿ 24,811ಕ್ಕೆ ವಹಿವಾಟು ಮುಕ್ತಾಯಗೊಳಿಸಿತು.‌ ಇಸ್ರೇಲ್-‌ ಇರಾನ್‌ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ ಕುದಿಯುತ್ತಿದೆ. ಹೀಗಾಗಿ ಕಚ್ಚಾ ತೈಲ ದರ ಏರಿಕೆಯಾಗಲಿದೆ ಎಂಬ ಪ್ರಶ್ನೆ ಈಗ ಉಂಟಾಗಿದೆ. ಇಂದು ಲೋಹ ಮತ್ತು ಐಟಿ ವಲಯದ ಷೇರುಗಳು ಒತ್ತಡದಲ್ಲಿತ್ತು. ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆ ಮಂದಗತಿಯಲ್ಲಿದೆ. ಈ ಬಿಕ್ಕಟ್ಟು ಉಪಶಮನವಾದ ಬಳಿಕ ಸ್ಟಾಕ್‌ ಮಾರ್ಕೆಟ್‌ (Stock Market)‌ ಕೂಡ ಗಣನೀಯವಾಗಿ ಚೇತರಿಸುವ ನಿರೀಕ್ಷೆ ಇದೆ. ಇಸ್ರೇಲ್‌ ಮತ್ತು ಅಮೆರಿಕ ಬಿಕ್ಕಟ್ಟನ್ನು ಶೀಘ್ರ ಇತ್ಯರ್ಥಪಡಿಸುವ ಕಾತರದಲ್ಲಿವೆ. ಹಾಗೂ ಅಮೆರಿಕವು ಇರಾನ್‌ಗೆ ಭೇಷರತ್ತಾಗಿ ಶರಣಾಗುವಂತೆ ಸೂಚಿಸಿದೆ.

ನಷ್ಟಕ್ಕೀಡಾದ ಷೇರುಗಳು

ಪವರ್‌ ಗ್ರಿಡ್‌

ಕೋಟಕ್‌ ಬ್ಯಾಂಕ್‌

ಬಜಾಜ್‌ ಫೈನಾನ್ಸ್‌

ಎಚ್‌ಡಿಎಫ್‌ಸಿ ಬ್ಯಾಂಕ್‌

ಎನ್‌ಟಿಪಿಸಿ

ಎಕ್ಸಿಸ್‌ ಬ್ಯಾಂಕ್‌

ಲಾಭ ಗಳಿಸಿದ ಷೇರುಗಳು

ಇಂಡಸ್‌ಇಂಡ್‌ ಬ್ಯಾಂಕ್‌

ಎಚ್‌ಸಿಎಲ್‌ ಟೆಕ್‌

ಸನ್‌ ಫಾರ್ಮಾ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 73 ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವಾರ 67 ಡಾಲರ್‌ ಮಟ್ಟದಲ್ಲಿತ್ತು. ಒಂದು ವೇಳೆ ಹರ್ಮುಜ್‌ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡಚಣೆಯಾದರೆ, ಕಚ್ಚಾ ತೈಲ ದರ ಸ್ಫೋಟವಾಗುವ ಆತಂಕ ಇದೆ. ಏಕೆಂದರೆ ಹರ್ಮುಜ್‌ ಜಲಸಂಧಿಯು ಅಂತಾರಾಷ್ಟ್ರೀಯ ಕಚ್ಚಾ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿದೆ. ಹರ್ಮುಜ್‌ ಜಲಸಂಧಿಯು ಕಿರಿದಾದ ಜಲಮಾರ್ಗವಾಗಿದ್ದು, ಕೇವಲ 39 ಕಿಲೋಮೀಟರ್‌ ಅಗಲ ಇದೆ. ಈ ಜಲ ಸಂಧಿಯ ಒಂದು ತೀರದಲ್ಲಿ ಇರಾನ್‌ ಇದ್ದರೆ ಮತ್ತೊಂದು ತೀರದಲ್ಲಿ ಒಮಾನ್‌, ಯುಎಇ ಇದೆ. ಮುಖ್ಯವಾಗಿ ಈ ಜಲಸಂಧಿಯು ಪರ್ಷಿಯನ್‌ ಕೊಲ್ಲಿಗೂ, ಅರಬಿ ಸಮುದ್ರಕ್ಕೂ ಸಂಪರ್ಕ ಕಲ್ಪಿಸುತ್ತದೆ.

ಪ್ರಪಂಚಕ್ಕೆ 20% ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ಇಲ್ಲಿ ಏನಾದರೂ ಅಡ್ಡಿಯಾದರೆ ಬ್ರೆಂಟ್‌ ಕಚ್ಚಾ ತೈಲ ದರ ಬ್ಯಾರೆಲ್‌ಗೆ 120 ಡಾಲರ್‌ ತನಕ ಏರಿಕೆಯಾಗಬಹುದು ಎನ್ನಲಾಗುತ್ತಿದೆ. ಹೀಗಿದ್ದರೂ, ಈ ಸಾಧ್ಯತೆ ಕಡಿಮೆ ಎಂದೂ ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮಧ್ಯಪ್ರಾಚ್ಯ ಬಿಕ್ಕಟ್ಟು ಬೇಗ ಇತ್ಯರ್ಥವಾದರೆ ಕಚ್ಚಾ ತೈಲ ದರ ಕೂಡ ಸ್ಥಿರವಾಗುವ ನಿರೀಕ್ಷೆ ಇದೆ.

ಭಾರತವು 90% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಬಹುತೇಲ ತೈಲ ಮಧ್ಯ ಪ್ರಾಚ್ಯದಿಂದ ಬರುತ್ತಿದೆ. ಆದ್ದರಿಂದ ಕಚ್ಚಾ ತೈಲ ಪೂರೈಕೆಯಲ್ಲಿ ಅಡಚಣೆಯಾದರೆ, ಭಾರತಕ್ಕೆ ಸವಾಲಾಗಲಿದೆ. ಹಣದುಬ್ಬರ ಏರಿಕೆಯಾಗಲಿದೆ. ಉದ್ದಿಮೆಗಳಿಗೆ ಉತ್ಪಾದನೆಯ ವೆಚ್ಚ ಹೆಚ್ಚುತ್ತದೆ. ಸರಕುಗಳ ಸಾಗಣೆ ಖರ್ಚು ಏರುತ್ತದೆ. ಹೀಗೆ ನಾನಾ ಆಯಾಮಗಳು ಇದಕ್ಕಿವೆ. ಆದರೆ ಕಚ್ಚಾ ತೈಲ ದರ ಹೆಚ್ಚಳದಿಂದ ಕೆಲವು ತೈಲ ಸಂಸ್ಕರಣೆ ಕಂಪನಿಗಳ ಷೇರು ದರ ಏರಿಕೆಯಾಗುವ ಸಾಧ್ಯತೆ ಇದೆ. ಉದಾಹರಣೆಗೆ ಒಎನ್‌ಜಿಸಿ, ಆಯಿಲ್‌ ಇಂಡಿಯಾ, ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್‌ ಕಂಪನಿಗಳ ಷೇರುಗಳ ಮೇಲೆ ತೈಲ ದರಗಳು ಪ್ರಭಾವ ಬೀರುವ ಸಾಧ್ಯತೆ ಇದೆ.

ಈಗ ಸುದ್ದಿಯಲ್ಲಿರುವ ಷೇರುಗಳ ವಿವರ

ಎನ್‌ಟಿಪಿಸಿ

ಷೇರಿನ ಈಗಿನ ದರ: 333/-

1 ವರ್ಷ ಹಿಂದಿನ ದರ: 369/-

ಒಂದುವರ್ಷದಲ್ಲಿ ಎಷ್ಟು ಇಳಿಕೆ: 9.86%

5 ವರ್ಷದ ಹಿಂದಿನ ದರ: 93/-

5 ವರ್ಷದಲ್ಲಿ ಏರಿಕೆ ಎಷ್ಟು: 258%

ಮಾರುಕಟ್ಟೆ ಮೌಲ್ಯ: 3 ಲಕ್ಷದ 23 ಸಾವಿರ ಕೋಟಿ ರು.

52 wk high: 448/-

52 wk low: 292/-

NTPC ಷೇರು ಈಗ ಏಕೆ ಸುದ್ದಿಯಲ್ಲಿದೆ ಎಂದರೆ, ಇದು ಬಾಂಡ್‌ಗಳ ಮೂಲಕ 18,000 ಕೋಟಿ ರುಪಾಯಿಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ. Non -Convertible debentures ಗಳನ್ನು ಎನ್‌ ಟಿಪಿಸಿ ಬಿಡುಗಡೆ ಮಾಡಲು ಉದ್ದೇಶಿಸಿದೆ. ಕಂಪನಿಯ ಬಂಡವಾಳ ವೆಚ್ಚ, ಸಾಲದ ಮರು ಪಾವತಿ ಮತ್ತು ಇತರ ಕಾರ್ಪೊರೇಟ್‌ ಉದ್ದೇಶಗಳಿಗೆ ಇದು ಬಳಕೆಯಾಗಲಿದೆ.

ಹಿಂದೂಸ್ಥಾನ್‌ ಝಿಂಕ್‌

ಷೇರಿನ ಈಗಿನ ದರ: 456/-

1 ವರ್ಷದ ಹಿಂದಿನ ದರ: 645/-

1 ವರ್ಷದಲ್ಲಿ ಇಳಿಕೆ ಎಷ್ಟು: 29%

5 ವರ್ಷದ ಹಿಂದಿನ ದರ: 178/-

5 ವರ್ಷದಲ್ಲಿ ಏರಿಕೆ ಎಷ್ಟು: 156%

ಮಾರುಕಟ್ಟೆ ಮೌಲ್ಯ: 1 ಲಕ್ಷದ 93 ಸಾವಿರ ಕೋಟಿ ರು.

52 wk high: 717/-

52 wk low : 378/-

ಗಣಿಗಾರಿಕೆ ವಲಯದ ಹಿಂದೂಸ್ಥಾನ್‌ ಝಿಂಕ್‌ ಕಂಪನಿಯು ವೇದಾಂತ ಸಮೂಹದ ಭಾಗವಾಗಿದೆ. ವೇದಾಂತವು ಈ ಕಂಪನಿಯಿಂದ 3,302 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಹಿಂದೂಸ್ಥಾನ್‌ ಝಿಂಕ್‌ ಷೇರಿನ ದರದಲ್ಲಿ 6% ಇಳಿಕೆಯಾಗಿದೆ. ಈ ನಡುವೆ ವೇದಾಂತ ಲಿಮಿಟೆಡ್‌ ಪ್ರತಿ ಷೇರಿಗೆ 7/- ಡಿವಿಡೆಂಡ್‌ ಘೋಷಿಸಿದ್ದು, ಇದರ ರೆಕಾರ್ಡ್‌ ಡೇಟ್ ಜೂನ್‌ 24, 2025 ಆಗಿದೆ.

ಸ್ಟಾಕ್‌ ಮಾರ್ಕೆಟ್‌ನಲ್ಲಿ ಅನಿಶ್ಚಿತತೆ ಇರುವ ಪ್ರಸ್ತುತ ಸಂದರ್ಭದಲ್ಲಿ ಹಲವಾರು ಹೂಡಿಕೆದಾರರು ಡಿವಿಡೆಂಡ್‌ ಕೊಡುವ ಷೇರುಗಳ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ಜುಲೈನಲ್ಲಿ ಡಿವಿಡೆಂಡ್‌ ನೀಡಲಿರುವ ಕೆಲವು ಕಂಪನಿಗಳ ಷೇರಿನ ಬಗ್ಗೆ ತಿಳಿಯೋಣ.‌

ಬಾಷ್

ಡಿವಿಡೆಂಡ್‌ ಎಷ್ಟು: ಪ್ರತಿ ಷೇರಿಗೆ 512/-

ರೆಕಾರ್ಡ್‌ ಡೇಟ್:‌ ಜುಲೈ 29, 2025

2002ರಿಂದೀಚೆಗೆ ಬಾಷ್‌ 31 ಸಲ ಡಿವಿಡೆಂಡ್‌ ನೀಡಿದೆ.

3 ಎಂ ಇಂಡಿಯಾ

ಡಿವಿಡೆಂಡ್‌ ಎಷ್ಟು: 535/-

ರೆಕಾರ್ಡ್‌ ಡೇಟ್:‌ ಜುಲೈ 25, 2025

2022ರಿಂದೀಚೆಗೆ ಕಂಪನಿಯು 6 ಸಲ ಡಿವಿಡೆಂಡ್‌ ಕೊಟ್ಟಿದೆ.

ಆಬಟ್ ಇಂಡಿಯಾ‌

ಡಿವಿಡೆಂಡ್‌ ಎಷ್ಟು: 475/-

ರೆಕಾರ್ಡ್‌ ಡೇಟ್:‌ ಜುಲೈ 25, 2025

2003ರಿಂದ ಕಂಪನಿ 29 ಸಲ ಡಿವಿಡೆಂಡ್‌ ಕೊಟ್ಟಿದೆ.

ಹೀರೊ ಮೊಟೊಕಾರ್ಪ್‌

ಡಿವಿಡೆಂಡ್‌ ಎಷ್ಟು: 65/-

ರೆಕಾರ್ಡ್‌ ಡೇಟ್:‌ ಜುಲೈ 24, 2025

2003ರಿಂದ ಕಂಪನಿಯು 40 ಸಲ ಡಿವಿಡೆಂಡ್‌ ನೀಡಿದೆ.

ಐಐಎಫ್‌ಎಲ್‌ ಕ್ಯಾಪಿಟಲ್‌ ಸಂಸ್ಥೆಯು ಆನ್‌ಲೈನ್‌ ಫುಡ್‌ ಡೆಲಿವರಿ ವಲಯದ ಸ್ವಿಗ್ಗಿಯ ಬಗ್ಗೆ ಕವರೇಜ್‌ ನೀಡಲು ಆರಂಭಿಸಿದ್ದು, ಬೈ ರೇಟಿಂಗ್‌ ನೀಡಿದೆ. ಮತ್ತು ಟಾರ್ಗೆಟ್‌ ಪ್ರೈಸ್‌ ಆಗಿ 535 ರುಪಾಯಿ ಎಂದು ನಿಗದಿಪಡಿಸಿದೆ. ಫುಡ್‌ ಡೆಲಿವರಿ ವಲಯದಲ್ಲಿ ಸ್ವಿಗ್ಗಿಯ ಪರ್‌ ಫಾರ್ಮೆನ್ಸ್‌ ಸುಧಾರಿಸುತ್ತಿದೆ. 2025-28ರ ಅವಧಿಯಲ್ಲಿ ಈ ಫುಡ್‌ ಟೆಕ್‌ ಕಂಪನಿಯ ಆದಾಯದಲ್ಲಿ ವಾರ್ಷಿಕ ಸರಾಸರಿ 28% ಬೆಳವಣಿಗೆ ಆಗಬಹುದು ಎಂದು IIFL Capital ಅಂದಾಜಿಸಿದೆ. ಸ್ವಿಗ್ಗಿ ಷೇರಿನ ಈಗಿನ ದರ 365/- ಆಗಿದೆ.

ಮೋತಿಲಾಲ್‌ ಓಸ್ವಾಲ್‌, ಬಿಎಸ್‌ಇ ಕುರಿತ ರೇಟಿಂಗ್‌ ಅನ್ನು ನ್ಯೂಟ್ರಲ್‌ಗೆ ಇಳಿಸಿದೆ. ಹಾಗೂ ಟಾರ್ಗೆಟ್‌ ಪ್ರೈಸ್‌ ಅನ್ನು 2,300/-ಕ್ಕೆ ನಿಗದಿಪಡಿಸಿದೆ. ಬಿಎಸ್‌ಇ ಷೇರಿನ ಈಗಿನ ದರ 2,633/-. ಆಗಿದೆ. ಎನ್‌ಎಸ್‌ಇ ಮತ್ತು ಬಿಎಸ್‌ಇಗೆ ಈಕ್ವಿಟಿ ಡಿರೈವಟೀವ್‌ ಕಾಂಟ್ರಾಕ್ಟ್‌ಗಳ ವೀಕ್ಲಿ ಎಕ್ಸ್‌ಪೈರಿ ದಿನವನ್ನು ಮಂಗಳವಾರ ಮತ್ತು ಗುರುವಾರಕ್ಕೆ ಬದಲಾವಣೆ ಮಾಡಿರುವುದು ಬಿಎಸ್‌ಇ ಷೇರಿನ ಮೇಲೆ ಪ್ರಭಾವ ಬೀರಬಹುದು ಎಂದು ಮೋತಿಲಾಲ್‌ ಓಸ್ವಾಲ್‌ ವರದಿ ತಿಳಿಸಿದೆ. ಸೆಬಿಯ ನಿರ್ದೇಶನದ ಪ್ರಕಾರ ವೀಕ್ಲಿ ಎಕ್ಸ್‌ಪೈರಿ ದಿನವು ಎನ್‌ಎಸ್‌ಇಗೆ ಮಂಗಳವಾರ ಮತ್ತು ಬಿಎಸ್‌ಇಗೆ ಗುರುವಾರ ಆಗಲಿದೆ. ಈ ವರ್ಷ ಸೆಪ್ಟೆಂಬರ್‌ 1ರಿಂದ ಹೊಸ ಬದಲಾವಣೆ ಬರಲಿದೆ.

ಈ ಸುದ್ದಿಯನ್ನೂ ಓದಿ | Federal Bank Recruitment 2025: ಫೆಡರಲ್‌ ಬ್ಯಾಂಕ್‌ನಲ್ಲಿದೆ ವಿವಿಧ ಹುದ್ದೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »