Karunadu Studio

ಕರ್ನಾಟಕ

SL vs BAN: ಶತಕ ಸಿಡಿಸಿ 1000 ಟೆಸ್ಟ್‌ ರನ್‌ಗಳನ್ನು ಪೂರ್ಣಗೊಳಿಸಿದ ಪಥುಮ್‌ ನಿಸಾಂಕ! – Kannada News | SL vs BAN: Pathum Nisanka Created Stir With His Batting In First Test against Bangladesh


ಗಾಲೆ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (SL vs BAN) ಶ್ರೀಲಂಕಾದ ಆರಂಭಿಕ ಆಟಗಾರ ಪಥುಮ್ ನಿಶಾಂಕ (Pathum Nissanka) ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ನಿಸಾಂಕ ಶತಕದ ಇನಿಂಗ್ಸ್‌ ಆಡುವ ಮೂಲಕ 1000 ಟೆಸ್ಟ್ ರನ್‌ಗಳ ಗಡಿಯನ್ನು ದಾಟಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಮೂರನೇ ಇನಿಂಗ್ಸ್‌ನಲ್ಲಿ ನಿಶಾಂಕ 136 ಎಸೆತಗಳಲ್ಲಿ ತಮ್ಮ ಮೂರನೇ ಟೆಸ್ಟ್ ಶತಕವನ್ನು ಪೂರೈಸಿದರು. ಶತಕ ಪೂರೈಸಿದ ನಂತರವೂ ಅವರು ಮುಂದುವರಿದರು. ಸ್ವಲ್ಪ ಸಮಯದಲ್ಲೇ ಅವರು 150 ರನ್‌ಗಳ ಗಡಿಯನ್ನು ದಾಟಿದ್ದಾರೆ. ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಈ ಪಂದ್ಯವು ಗಾಲೆಯಲ್ಲಿ ನಡೆಯುತ್ತಿದ್ದು, ಬಾಂಗ್ಲಾದೇಶ (Bangladesh) ತಂಡ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 495 ರನ್‌ಗಳನ್ನು ಕಲೆ ಹಾಕಿತ್ತು.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಪಥುಮ್ ನಿಶಾಂಕ ಅವರ ಮೂರನೇ ಶತಕ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು 27ರ ವಯಸ್ಸಿನ ನಿಶಾಂಕ ಈ ಸಾಧನೆ ಮಾಡಿದರು. ಒಂದೆಡೆ, ಬಾಂಗ್ಲಾದೇಶ ಬೌಲರ್‌ಗಳ ವಿರುದ್ಧ ಶ್ರೀಲಂಕಾ ಇತರೆ ಬ್ಯಾಟ್ಸ್‌ಮನ್‌ಗಳು ವಿಫಲರಾಗುತ್ತಿದ್ದರೆ, ಮತ್ತೊಂದು ಕಡೆ ಪಥುಮ್‌ ನಿಸಾಂಕ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಬೀಸಿದ್ದರು. ನಿಸಾಂಕ ಮೊದಲು ದಿನೇಶ್ ಚಾಂಡಿಮಲ್ ಅವರೊಂದಿಗೆ ಶತಕದ ಜೊತೆಯಾಟವನ್ನು ಆಡಿದ್ದರು. ಪಥುಮ್ ನಿಸಾಂಕ ತಮ್ಮ ದ್ವಿಶತಕದತ್ತ ವೇಗವಾಗಿ ಸಾಗುತ್ತಿದ್ದರು, ಆದರೆ ಅವರು 187 ರನ್‌ಗಳಿಗೆ ವಿಕೆಟ್‌ ಒಪ್ಪಿಸಬೇಕಾಯಿತು.

SL vs BAN: ಶತಕ ಬಾರಿಸಿ ಆಡಮ್‌ ಗಿಲ್‌ಕಿಸ್ಟ್‌ರ 17 ವರ್ಷಗಳ ಹಳೆಯ ದಾಖಲೆ ಮುರಿದ ಮುಷ್ಫಿಕರ್‌ ರಹೀಮ್!

ದ್ವಿಶತಕ ತಪ್ಪಿಸಿಕೊಂಡ ನಿಸಂಕ

ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ಬ್ಯಾಟ್‌ ಮಾಡುವಾಗ, ನಿಸಾಂಕ 187 ರನ್ ಗಳಿಸಿದ ತಮ್ಮ ದೀರ್ಘಾವಧಿ ಇನಿಂಗ್ಸ್‌ನಲ್ಲಿ 256 ಎಸೆತಗಳನ್ನು ಎದುರಿಸಿದ್ದಾರೆ. ಅವರ ಇನಿಂಗ್ಸ್‌ನಲ್ಲಿ ಅವರು 23 ಬೌಂಡರಿಗಳು ಮತ್ತು 1 ಸಿಕ್ಸರ್ ಸಹ ಸೇರಿದೆ. ನಿಸಾಂಕ ಅವರ ಈ ಅದ್ಭುತ ಬ್ಯಾಟಿಂಗ್‌ನಿಂದಾಗಿ, ಶ್ರೀಲಂಕಾ ತಂಡವು ಆಟದ ಮೂರನೇ ದಿನದಂದು 300 ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಯಿತು. ಆದಾಗ್ಯೂ, ನಿಸಂಕ ವಿಕೆಟ್ ನಂತರ, ಬಾಂಗ್ಲಾದೇಶ ಬೌಲರ್‌ಗಳು ಖಂಡಿತವಾಗಿಯೂ ಕಮ್‌ಬ್ಯಾಕ್‌ ಮಾಡಲು ಉತ್ತಮ ಅವಕಾಶವನ್ನು ಪಡೆದರು.

ದಿನೇಶ್ ಚಂಡಿಮಾಲ್ ಅರ್ಧಶತಕ

ಪಥುಮ್ ನಿಸಾಂಕ ಜೊತೆಗೆ, ದಿನೇಶ್ ಚಂಡಿಮಲ್ ಕೂಡ ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ, ಅವರು 119 ಎಸೆತಗಳನ್ನು ಎದುರಿಸಿ 64 ರನ್‌ಗಳ ಇನಿಂಗ್ಸ್‌ ಆಡಿದರು. ಅವರ ಈ ಅಲ್ಪ ಇನಿಂಗ್ಸ್‌ನಲ್ಲಿ 4 ಅತ್ಯುತ್ತಮ ಬೌಂಡರಿಗಳನ್ನೂ ಗಳಿಸಿದ್ದರು. ಒಟ್ಟಾರೆ ಮೂರನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ

93 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 368 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಇನ್ನೂ 127 ರನ್‌ಗಳ ಹಿನ್ನಡೆಯಲ್ಲಿದೆ.

ಬಾಂಗ್ಲಾದೇಶ: 495ಕ್ಕೆ ಆಲ್‌ಔಟ್‌

ದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಬಾಂಗ್ಲಾದೇಶ ತಂಡ, ಮುಷ್ಫಿಕರ್‌ ರಹೀಮ್‌ (163 ರನ್‌) ಹಾಗೂ ನಜ್ಮುಲ್‌ ಹುಸೇನ್‌ ಶಾಂಟೊ (148) ಅವರ ಶತಕಗಳ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 153.4 ಓವರ್‌ಗಳಿಗೆ 495 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಶ್ರೀಲಂಕಾ ಪರ ಅಸಿತಾ ಫೆರ್ನಾಂಡೊ 4 ವಿಕೆಟ್‌ ಕಿತ್ತಿದ್ದರೆ, ರತ್ನನಾಯಕೆ ಮತ್ತು ತರಿಂದು ರತ್ನನಾಯಕೆ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »