Karunadu Studio

ಕರ್ನಾಟಕ

IND vs ENG: ಕೊಹ್ಲಿ, ರೋಹಿತ್‌ ನಿವೃತ್ತಿಯು ಭಾರತದ ಮೇಲೆ ಪರಿಣಾಮ ಬೀರುತ್ತಾ? ಸಚಿನ್‌ ಕೊಟ್ಟ ಉತ್ತರ ಹೀಗಿದೆ? – Kannada News | IND vs ENG: Will Virat Kohli, Rohit Sharma’s Test cricket retirement affect India in England Test series?


ನವದೆಹಲಿ: ಒಂದೂವರೆ ದಶಕದ ಕಾಲ ಭಾರತ ತಂಡಕ್ಕೆ ಪ್ರಮುಖ ಆಧಾರ ಸ್ಥಂಭಗಳಾಗಿದ್ದ ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit sharma) 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಸಂದರ್ಭದಲ್ಲಿ ತಮ್ಮ ಟೆಸ್ಟ್‌ ವೃತ್ತಿ ಜೀವನಕ್ಕೆ ಹಠಾತ್‌ ವಿದಾಯ ಹೇಳುವ ಮೂಲಕ ಶಾಕ್‌ ನೀಡಿದ್ದರು. ರೋಹಿತ್‌ ಶರ್ಮಾ ಫಿಟ್‌ನೆಸ್‌ ಸಮಸ್ಯೆಯ ಕಾರಣ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರಬಹುದೆಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಸಂಪೂರ್ಣ ಫಿಟ್‌ ಇದ್ದ ವಿರಾಟ್‌ ಕೊಹ್ಲಿ ಇನ್ನೂ 3 ರಿಂದ 4 ವರ್ಷಗಳ ಕಾಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕಿತ್ತು. ಈ ಹಿನ್ನೆಲೆಯಲ್ಲಿ ಕೊಹ್ಲಿಯ ಟೆಸ್ಟ್‌ ನಿವೃತ್ತಿ ಬಗ್ಗೆ ಅಭಿಮಾನಿಗಳು ಸೇರಿದಂತೆ ಮಾಜಿ ಕ್ರಿಕೆಟಿಗರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ಕೊಹ್ಲಿ ಇನ್ನೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕಿತ್ತು ಎಂದು ಹೇಳಿದ್ದರು.

ಅಂದ ಹಾಗೆ ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಭಾರತ ತಂಡ, ಜೂನ್‌ 20 ರಂದು ಇಂಗ್ಲೆಂಡ್‌ ವಿರುದ್ದದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ಆರ್‌ ಅಶ್ವಿನ್‌ ಅವರ ಅನುಪಸ್ಥಿತಿಯಲ್ಲಿ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ, ಇಂಗ್ಲೆಂಡ್‌ನಲ್ಲಿ ಕಠಿಣ ಸವಾಲನ್ನು ಎದುರಿಸಲಿದೆ. ಕೊಹ್ಲಿ ಮತ್ತು ರೋಹಿತ್‌ ಅನುಪಸ್ಥಿತಿ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಗಂಭೀರ ಪರಿಣಾಮ ಬೀರಲಿದೆ. ಈ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ತಮ್ಮದೇ ಆದ ಅಭಿಫ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಕ್ರಿಕೆಟ್‌ ದೇವರಾದ ಸಚಿನ್‌ ತೆಂಡೂಲ್ಕರ್‌ ಕೂಡ ತಮ್ಮದೇ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

IND vs ENG 1st Test: ಲೀಡ್ಸ್‌ ಟೆಸ್ಟ್‌ನ ಪಿಚ್‌ ರಿಪೋರ್ಟ್‌, ಭಾರತ ಸಂಭಾವ್ಯ ಆಡುವ ಬಳಗ ಹೇಗಿದೆ?

ಕೊಹ್ಲಿ, ರೋಹಿತ್‌ ನಿವೃತ್ತಿಯು ಭಾರತ ತಂಡದ ಮೇಲೆ ಪರಿಣಾಮ ಬೀರುತ್ತಾ?

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ʻಆಂಡರ್ಸನ್‌ ಮತ್ತು ತೆಂಡೂಲ್ಕರ್‌ ಟ್ರೋಫಿʼ ಎಂದು ಮರು ನಾಮಕರಣ ಮಾಡಲಾಗಿದೆ. ಇದರ ಹಿನ್ನೆಲೆಯಲ್ಲಿ ಜಿಯೊ ಏರ್ಪಡಿಸಿದ್ದ ವರ್ಚುವಲ್‌ ಮೀಡಿಯಾ ಸಂವಾದದಲ್ಲಿ ಭಾಗವಹಿಸಿದ್ದ ಸಚಿನ್‌ ತೆಂಡೂಲ್ಕರ್‌ಗೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಟೆಸ್ಟ್‌ಗೆ ನಿವೃತ್ತಿ ಪಡೆದಿರುವುದು ಭಾರತ ತಂಡಕ್ಕೆ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಪರಿಣಾಮ ಬೀರುತ್ತಾ? ಎಂದು ವಿಶ್ವವಾಣಿ ಕ್ರೀಡಾ ನಿರೂಪಕ ಚಿದಾನಂದ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಸಚಿನ್‌ ತೆಂಡೂಲ್ಕರ್‌ ಸರಾಗವಾಗಿ ಉತ್ತರವನ್ನು ನೀಡಿದ್ದಾರೆ.

IND vs ENG: ಭಾರತ ತಂಡಕ್ಕೆ ಬ್ಯಾಟಿಂಗ್‌ ಕ್ರಮಾಂಕ ಆರಿಸಿದ ದಿನೇಶ್‌ ಕಾರ್ತಿಕ್‌!

ವಿಶ್ವವಾಣಿ ಪ್ರಶ್ನೆಗೆ ಸರಾಗವಾಗಿ ಉತ್ತರಿಸಿದ ಸಚಿನ್‌

“ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಜೊತೆಗೆ ರವಿಚಂದ್ರನ್‌ ಅಶ್ವಿನ್‌ ಕೂಡ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರ ಹೆಸರನ್ನು ನೀವು ಮರೆತಿದ್ದೀರಿ ಎಂದು ಭಾವಿಸುತ್ತೇನೆ. ಭಾರತ ತಂಡದ ಯಶಸ್ಸಿಗೆ ಆರ್‌ ಅಶ್ವಿನ್‌ ಕೂಡ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಅವರು ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್‌ ಆಗಿದ್ದಾರೆ. ಇನ್ನು ಮೊಹಮ್ಮದ್‌ ಶಮಿ ಕೂಡ ಈ ಗೈರಾಗಿದ್ದಾರೆ,” ಎಂದು ಸಚಿನ್‌ ತೆಂಡೂಲ್ಕರ್‌ ತಿಳಿಸಿದ್ದಾರೆ.

ಮಾತು ಮುಂದುವರಿಸಿದ ಅವರು,”ಕೊಡುಗೆ ಯಾವಾಗಲೂ ಇದ್ದೇ ಇರುತ್ತದೆ ಹಾಗೂ ನಾವು ಇದೀಗ ಬದಲಾವಣೆಯ ಕಾಲಘಟ್ಟದಲ್ಲಿದ್ದೇವೆ. ಅದರಂತೆ ಭಾರತ ತಂಡದಲ್ಲಿ ಕೆಲ ಯುವ ಪ್ರತಿಭಾವಂತ ಆಟಗಾರರಿದ್ದಾರೆ. ಈ ಯುವ ಆಟಗಾರರಿಗೆ ಹಿರಿಯ ಆಟಗಾರರು ಮಾರ್ಗದರ್ಶನವನ್ನು ನೀಡಲಿದ್ದಾರೆ. ಬದಲಾವಣೆಯ ಪ್ರಕ್ರಿಯೆಯು ವರ್ಷಗಳಿಂದ ಮುಂದುವರಿಯುತ್ತಲೇ ಇದೆ. ಇದು ಒಂದು ದಶಕದವರೆಗೂ ಮುಂದುವರಿಯಬಹುದು. ಕೆಲ ಹಂತದಲ್ಲಿ ಆಟಗಾರರು ನಿವೃತ್ತಿ ಪಡೆಯಬೇಕಾಗುತ್ತದೆ ಹಾಗೂ ಕೆಲ ಹೊಸ ಆಟಗಾರರು ಹಳೆಯ ಆಟಗಾರರ ಸ್ಥಾನವನ್ನು ತುಂಬಬೇಕಾಗುತ್ತದೆ. ಆ ಮೂಲಕ ತಮ್ಮ ಪಯಣವನ್ನು ಮುಂದುವರಿಸಬೇಕಾಗುತ್ತದೆ,” ಎಂದು ಹೇಳಿದ್ದಾರೆ.

ಕೆಲ ಹಂತದಲ್ಲಿ ನಿವೃತ್ತಿ ಪಡೆಯಬೇಕಾಗುತ್ತದೆ

“ನಮ್ಮ ಕಾಲದಲ್ಲಿ ವೀರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್‌, ಸೌರವ್‌ ಗಂಗೂಲಿ, ಯುವರಾಜ್‌ ಸಿಂಗ್‌, ನಾನು ಮತ್ತು ಎಂಎಸ್‌ ಧೋನಿ ಕೂಡ ಕೆಲ ಹಂತದಲ್ಲಿ ನಿವೃತ್ತಿಯನ್ನು ಘೋಷಿಸಿದ್ದೆವು. ನಮ್ಮ ಸ್ಥಾನಗಳನ್ನು ಮುಂದಿನ ತಲೆಮಾರು ತುಂಬಿದ್ದರು. ಈ ಪ್ರಕ್ರಿಯೆ ಹಾಗೆಯೇ ಮುಂದುವರಿಯುತ್ತದೆ. ಮುಂದಿನ ತಲೆಮಾರಿನ ಆಟಗಾರರು ಪ್ರತಿಭಾವಂತರಾಗಿದ್ದಾರೆ ಎಂಬುದರಲ್ಲಿ ನನಗೆ ಅನುಮಾನವೇ ಇಲ್ಲ. ನಮ್ಮ ದೇಶದಲ್ಲಿ ಕೌಶಲವನ್ನು ಪರಿಗಣಿಸಲಾಗುತ್ತದೆ. ಸಾಕಷ್ಟು ಕೌಶಲಭರಿತ ಆಟಗಾರರು ನಮ್ಮಲ್ಲಿ ಇದ್ದಾರೆ. ಈ ಹಂತದಲ್ಲಿ ಅವರು ಹೆಚ್ಚಿನ ಅವಕಾಶಗಳನ್ನು ನೀಡಲಾಗುವುದು ಎಂದು ನಾನು ಭಾವಿಸುತ್ತೇನೆ. ನೀವು ಹೇಳಿದ ಹಾಗೆ, ಕೊಹ್ಲಿ ಮತ್ತು ರೋಹಿತ್‌ ಜತೆಗೆ ಅಶ್ವಿನ್‌ ಕೂಡ ನಿವೃತ್ತಿ ತೆಗೆದುಕೊಂಡಿದ್ದಾರೆ. ಆದರೆ, ಅವರ ಕೊಡುಗೆಗೆ ನಾವು ಮೆಚ್ಚುಗೆ ವ್ಯಕ್ತಪಡಿಸಬೇಕಾಗುತ್ತದೆ,” ಎಂದು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ತಿಳಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »