Karunadu Studio

ಕರ್ನಾಟಕ

Karnataka High Court: ಹಿಂದೂ ಮುಖಂಡರ ಮನೆಗೆ ಮಧ್ಯರಾತ್ರಿ ರೈಡ್‌, ದಕ್ಷಿಣ ಕನ್ನಡ ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌ – Kannada News | dakshina kannada SP gets karnataka high court notice for riding hindu leaders homes


ಮಂಗಳೂರು: ದಕ್ಷಿಣ ಕನ್ನಡ (dakshina kannada) ಜಿಲ್ಲೆಯಲ್ಲಿ ಕೋಮು ಸಂಘರ್ಷಗಳು (Communla clash) ಪದೇ ಪದೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅವುಗಳಿಗೆ ಬ್ರೇಕ್​ ಹಾಕಲು ಮಂಗಳೂರು ಪೊಲೀಸರು (Mangaluru Police) ಮಧ್ಯರಾತ್ರಿ ಹಿಂದೂ ಮುಖಂಡರ ಮನೆಗಳ ಕದ ತಟ್ಟಿದ್ದರು. ಈ ವಿಚಾರ ಇದೀಗ ಪೊಲೀಸರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ದಕ್ಷಿಣ ಕನ್ನಡ ಎಸ್​ಪಿ ಅರುಣ್ ಅವರಿಗೆ ಕರ್ನಾಟಕ ಹೈಕೋರ್ಟ್ (Karnataka High Court) ನೋಟಿಸ್ ಜಾರಿ ಮಾಡಿದೆ. ಸೂಕ್ತ ದಾಖಲೆ ಸಲ್ಲಿಸುವಂತೆ ಹೈಕೋರ್ಟ್ ತಾಕೀತು ಮಾಡಿದೆ.

ಮಿಡ್ ನೈಟ್ ರೇಡ್ ಪ್ರಕರಣ ದಕ್ಷಿಣ ಕನ್ನಡ ಎಸ್​ಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮಂಗಳೂರಿನ ಹಿರಿಯ ಅರ್.ಎಸ್.ಎಸ್ ಮುಖಂಡರ ಮನೆಗಳ ಮೇಲೆ ಪೊಲೀಸರು ಮಧ್ಯರಾತ್ರಿಗಳಲ್ಲಿ ತೆರಳಿ ಪರಿಶೀಲನೆ ಮಾಡಿದ್ದರು. ಪೊಲೀಸರ ಈ ಕ್ರಮ ಖಂಡಿಸಿ ಹಿಂದೂಪರ ಮುಖಂಡರು ಪ್ರತಿಭಟನೆ ನಡೆಸಿ ದೂರ ನೀಡಿದ್ದರು. ಈ ಸಂಬಂಧ ದಕ್ಷಿಣ ಕನ್ನಡ ಎಸ್ಪಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ದಾಖಲೆ ಸಲ್ಲಿಸಿ, ಕಾನೂನು ಹೊರತಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ತಾಕೀತು ಮಾಡಿದೆ.

ಜೂನ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ನಾಯಕರ ಮನೆಗಳಿಗೆ ಪೊಲೀಸರು ಮಧ್ಯರಾತ್ರಿ ತೆರಳಿ ಫೋಟೋ ತೆಗೆದು ಜಿಪಿಎಸ್ ಅಪ್‌ ಲೋಡ್ ಮಾಡಿದ್ದರು ಎಂದು ಉಪ್ಪಿನಂಗಡಿಯ ಹಿರಿಯ ನಾಗರಿಕರಾದ ಯು.ಜಿ ರಾಧಾ ಹೈಕೋರ್ಟ್ ಮೆಟ್ಟಿಲೇರಿದ್ದರು. ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾ ಕಾರಣ ಕಸಿದಿದ್ದಾರೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು.

ಆರೋಪಿಗಳ ರೀತಿ ನನ್ನನ್ನು ಪೊಲೀಸರು ನಡೆಸಿಕೊಂಡಿದ್ದು, ಇದರಿಂದ ನನ್ನ ಖಾಸಗಿತನ, ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ಈ ಮೂಲಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ನನಗೆ 20 ಲಕ್ಷ ರೂ ಮಾನನಷ್ಟ ಪರಿಹಾರ ನೀಡುವಂತೆ ಯು.ಜಿ.ರಾಧಾ ಹೈಕೋರ್ಟ್‌ಗೆ ದೂರು ನೀಡಿದ್ದರು.

ನ್ಯಾಯಮೂರ್ತಿ ಸುನಿಲ್‌ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು. ಯು.ಜಿ.ರಾಧಾ ಅವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಪ್ರತ್ಯೇಕ ದೂರು ನೀಡಿದ್ದಾರೆ. ಈಗಾಗಲೇ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಜಿಲ್ಲಾ ಎಸ್ಪಿಗೆ ನೋಟಿಸ್‌ ಜಾರಿ ಮಾಡಿದೆ. ಬೇರೆ ಬೇರೆ ದೂರುಗಳ ಆಧಾರದಲ್ಲಿ ಎಸ್ಪಿಗೆ ನೋಟಿಸ್​ ನೀಡಲಾಗಿದೆ.

ಪೊಲೀಸ್​ ಇಲಾಖೆಯಲ್ಲಿ ವರ್ಗಾವಣೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಿದೆ. ಮಂಗಳೂರು ಕಮಿಷನರೇಟ್ ಬಳಿಕ ಜಿಲ್ಲಾ ಪೊಲೀಸ್ ಇಲಾಖೆಯ ವಿವಿಧ ಠಾಣೆಗಳ 116 ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. 7 ಎಎಸ್ಐ, 31 ಎಚ್ ಸಿ, 78 ಪಿಸಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯ ಮೇರೆಗೆ ವರ್ಗಾವಣೆ ಆದೇಶ ಮಾಡಲಾಗಿದೆ. ಎರಡು ಭೀಕರ ಹತ್ಯೆಗಳ ಬಳಿಕ ದಕ್ಷಿಣ ಕನ್ನಡ ಪೊಲೀಸ್ ಇಲಾಖೆಗೆ ಭಾರಿ ಸರ್ಜರಿ ಆಗಿದೆ. ಹತ್ಯೆಯ ಸುಳಿವಿದ್ದರೂ ಪೊಲೀಸ್ ಇಲಾಖೆಯಿಂದ ನಿರ್ಲಕ್ಷ್ಯ ಎಂದು ರಾಜಕೀಯ ಮುಖಂಡರು ಆರೋಪಿಸಿದ್ದಾರೆ.

ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಠಾಣೆ ಸಿಬ್ಬಂದಿಗಳ ಮಾಹಿತಿ ಪಡೆದಿದ್ದ ಎಸ್​ಪಿ ಅರುಣ್ ಕುಮಾರ್, ಅಧಿಕಾರ ವಹಿಸಿಕೊಂಡ ಕೂಡಲೇ ಆಪರೇಷನ್​​ಗೆ ಮುಂದಾಗಿದ್ದರು. ನಾಲ್ಕು ವರ್ಷಗಳಿಂದ ಒಂದೇ ಠಾಣೆಯಲ್ಲಿರುವವರ ಬಗ್ಗೆ ಮಾಹಿತಿ ಪಡೆದಿದ್ರು. ಸಾರ್ವಜನಿಕರ ಆರೋಪ ಹಿನ್ನೆಲೆಯಲ್ಲಿ, ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದವರಿಗೆ ವರ್ಗಾವಣೆ ಶಾಕ್ ನೀಡಲಾಗಿದೆ.

ಇದನ್ನೂ ಓದಿ: UT Khader: “ಹೃದಯಗಳು ನೋವಿನಿಂದ ತುಂಬಿವೆ…” ಹಜ್‌ ಯಾತ್ರೆಯ ಬಳಿಕ ದಕ್ಷಿಣ ಕನ್ನಡದ ಜನತೆಗೆ ಯುಟಿ ಖಾದರ್‌ ಪತ್ರ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »