Karunadu Studio

ಕರ್ನಾಟಕ

e-khata: ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ; ಜುಲೈ 1ರಿಂದ ಮನೆ ಬಾಗಿಲಿಗೆ ಇ-ಖಾತಾ ಅಭಿಯಾನ – Kannada News | From July 1, the e-khata campaign in Bengaluru


ಬೆಂಗಳೂರು: ಜುಲೈ 1 ರಿಂದ ಇಡೀ ತಿಂಗಳು ಆಸ್ತಿಯ ಇ-ಖಾತಾ ದಾಖಲೆಗಳನ್ನು (e-khata) ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿವೆ. ಈ ಪೈಕಿ 5 ಲಕ್ಷ ಮಂದಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. 20 ಲಕ್ಷ ಆಸ್ತಿಗಳ ದಾಖಲೆಗಳ ಅಪ್‌ಲೋಡ್‌ ಬಾಕಿ ಇದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಇ-ಖಾತಾ ಎಂಬುದು ಸಾಂಪ್ರದಾಯಿಕ ಖಾತಾ ಪ್ರಮಾಣಪತ್ರದ ಎಲೆಕ್ಟ್ರಾನಿಕ್ ಆವೃತ್ತಿಯಾಗಿದ್ದು, ಇದು ಆಸ್ತಿಯ ಮಾಲೀಕತ್ವ ಮತ್ತು ಬಿಬಿಎಂಪಿಯ ನಿಯಮಗಳ ಅನುಸರಣೆಯ ಅಧಿಕೃತ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರಿನ ಆಸ್ತಿ ದಾಖಲೆಗಳನ್ನು, ವಿಶೇಷವಾಗಿ ಖಾತಾವನ್ನು ಡಿಜಿಟಲೀಕರಣಗೊಳಿಸಲು ಅಭಿವೃದ್ಧಿಪಡಿಸಲಾದ ಆನ್‌ಲೈನ್‌ ವ್ಯವಸ್ಥೆಯಾಗಿದೆ. ಇದು ಮಾಲೀಕತ್ವದ ಮಾಹಿತಿ, ಆಸ್ತಿಯ ಆಯಾಮಗಳು, ಸ್ಥಳ ಮತ್ತು ವಿಶಿಷ್ಟ ಗುರುತಿನ ಸಂಖ್ಯೆಗಳು ಸೇರಿದಂತೆ ಅಗತ್ಯ ಆಸ್ತಿ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಕ್ರೋಡೀಕರಿಸುತ್ತದೆ. ಇದು ಕಾಗದಪತ್ರದ ಕೆಲಸವನ್ನು ಕಡಿಮೆ ಮಾಡಿ, ಆಸ್ತಿ ದಾಖಲೆಗಳ ನಿಖರತೆಯನ್ನು ಹೆಚ್ಚಿಸುತ್ತದೆ.



ಹೊಸ ಖಾತೆ ಪಡೆಯುವುದು ಹೇಗೆ?

ಬಿಬಿಎಂಪಿಯಿಂದ ಆನ್‌ಲೈನ್ ಮೂಲಕ ಅಸ್ತಿಯ ಹೊಸ ಖಾತೆ ಪಡೆದುಕೊಳ್ಳಬಹುದು. https://BBMP.Karnataka.gov.in/NewKhata ಪೋರ್ಟಲ್‌ ಮೂಲಕ ಹೊಸ ಖಾತೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಸರಳ ವಿಧಾನಗಳು

1. ನಿಮ್ಮ ಮೊಬೈಲ್ ಮತ್ತು ಓಟಿಪಿ ಬಳಸಿ ಲಾಗಿನ್ ಆಗಿರಿ

2. ಕ್ರಯ/ನೋಂದಾಯಿತ ಪತ್ರದ ಸಂಖ್ಯೆಯನ್ನು ನಮೂದಿಸಿ (ಉಪ ನೋಂದಣಾಧಿಕಾರಿಯಿಂದ ವಿದ್ಯುನ್ಮಾನವಾಗಿ ಪಡೆಯಲಾಗುವುದು)

3. ಆಧಾರ್ ಪರಿಶೀಲನೆ

4. ಸ್ವತ್ತಿನ ಋಣಭಾರ ಪ್ರಮಾಣ ಪತ್ರ

5. ಬೆಸ್ಕಾಂ ಐಡಿ

6. ಸ್ವತ್ತಿನ ಛಾಯಾ ಚಿತ್ರ

7. ತಹಲ್‌ವರೆಗಿನ ಸ್ವತ್ತಿನ ತೆರಿಗೆಯನ್ನು ಪಾವತಿಸಿ.

ನಿಮ್ಮ ಮಾಹಿತಿಯನ್ನು ಪರಿಶೀಲಿಸಿದ ನಂತರ ಹೊಸ ಖಾತೆಯನ್ನು ಆನ್‌ಲೈನ್ ಮೂಲಕ ವಿತರಿಸಲಾಗುವುದು. ಒಂದು ವೇಳೆ ನೀವು ಈಗಾಗಲೇ ಕೈಬರಹ ಖಾತೆ ಹೊಂದಿದ್ದಲ್ಲಿ ಹೊಸ ಖಾತೆಗಾಗಿ ಅರ್ಜಿ ಸಲ್ಲಿಸಕೂಡದು, ಒಂದು ವೇಳೆ ಈ ರೀತಿ ಮಾಡಿದ್ದಲ್ಲಿ ತಮ್ಮನ್ನು ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರನನ್ನಾಗಿ ಮಾಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

ಈಗಾಗಲೇ ಇರುವ ಕೈಬರಹ ಖಾತೆಗೆ ಇ-ಖಾತೆಯನ್ನು https://bbmpeaasthi.karnataka.gov.in/ ಲಿಂಕ್‌ ಮೂಲಕ ಪಡೆಯಬಹುದು.

ಕೈ ಬರಹ ಖಾತೆಯನ್ನು ಇ-ಖಾತಾ ಆಗಿ ಪರಿವರ್ತಿಸುವುದು ಹೇಗೆ?

  • ಅಧಿಕೃತ ವೆಬ್‌ಸೈಟ್ https://bbmpeaasthi.karnataka.gov.in/ಗೆ ಭೇಟಿ ನೀಡಿ.
  • ಮೆನುವಿನಲ್ಲಿ ಇಲಾಖೆಗಳು ಮತ್ತು ಸೇವೆಗಳ ವಿಭಾಗಕ್ಕೆ ತೆರಳಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಆಯ್ಕೆ ಮಾಡಿ ಮತ್ತು ನಂತರ ಹೊಸ ಇ-ಖಾತಾಕ್ಕಾಗಿ ಅರ್ಜಿಯ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ‘ಆನ್‌ಲೈನ್‌ನಲ್ಲಿ ಅನ್ವಯಿಸು’ ಕ್ಲಿಕ್ ಮಾಡಿ. ನಿಮ್ಮ ಬಳಕೆದಾರ ಹೆಸರು, ಪಾಸ್‌ವರ್ಡ್ ಬಳಸಿಕೊಂಡು ಲಾಗಿನ್ ಮಾಡಿ.
  • ಎಲ್ಲಾ ಅಗತ್ಯ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಸೂಚನೆಗಳ ಪ್ರಕಾರ ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅನ್ವಯವಾಗುವ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
  • ನಿಮ್ಮ ವಿವರಗಳನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ. ಸಲ್ಲಿಸಿದ ನಂತರ, ನಿಮ್ಮ ಉಲ್ಲೇಖಕ್ಕಾಗಿ ಸ್ವೀಕೃತಿಯನ್ನು ರಚಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ | PM Kisan: ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ 20ನೇ ಕಂತು ಬಿಡುಗಡೆ ಯಾವಾಗ? ಅರ್ಜಿ ಸಲ್ಲಿಕೆ ಹೇಗೆ?





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »