ಬೆಂಗಳೂರು: ಹಲವು ವರ್ಷಗಳಿಂದ ಗ್ಯಾರೇಜ್‌ನಲ್ಲಿ ನಿಂತಿದ್ದ ಅಣ್ಣ ಚಿರು ಸರ್ಜಾ ಅವರ ಫೇವರಿಟ್ ಗಾಡಿಯನ್ನು ನಟ ಧ್ರುವ ಸರ್ಜಾ (Dhruva Sarja) ರೆಡಿ ಮಾಡಿಸಿದ್ದು, ಬೈಕ್ ಓಡಿಸುವ ಮೂಲಕ ಖುಷಿಪಟ್ಟಿದ್ದಾರೆ. ಅಣ್ಣನ ಪ್ರತಿಯೊಂದು ನೆನಪನ್ನು ತನ್ನ ಬಳಿ ಇರಿಸಿಕೊಳ್ಳಲು ಪ್ರಯತ್ನಪಡುತ್ತಿರುವ ಧ್ರುವ ಸರ್ಜಾ, ಅಣ್ಣನ (Chiranjeevi Sarja) ಫೇವರೆಟ್ ಗಾಡಿ ನೋಡಿ ಭಾವುಕರಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ದುರಂತಗಳಲ್ಲಿ ನಟ ಚಿರಂಜೀವಿ ಸರ್ಜಾ ಸಾವಿನ ಘಟನೆ ಕೂಡ ಒಂದು. 2020ರ ಜೂನ್ 7ರಂದು ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದರು. ಧ್ರುವ ಸರ್ಜಾ ಅವರಿಗೆ ಅಣ್ಣ ಚಿರಂಜೀವಿ ಎಂದರೆ ಅಚ್ಚುಮೆಚ್ಚು. ಅಣ್ಣ ಬದುಕಿದ್ದಾಗ ಕೂಡ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ತುಂಬಾ ಆಪ್ತತೆ ಹೊಂದಿದ್ದರು. ಅಣ್ಣ ಚಿರು ಇಹಲೋಕ ತ್ಯಜಿಸಿದ ದಿನದಿಂದ ಅಣ್ಣನ ಸವಿನೆನಪಿನೊಂದಿಗೆ ತಮ್ಮ ಬದುಕು ಕಳೆಯುತ್ತಿದ್ದಾರೆ.
ಇದೀಗ, ತಮ್ಮ ಧ್ರುವ ಸರ್ಜಾ ಅಣ್ಣ ಚಿರಂಜೀವಿ ನೆನಪು ಮಾಡಿಕೊಂಡು ಒಂದು ಅಪೂರ್ವವಾದ ಕೆಲಸ ಮಾಡಿದ್ದಾರೆ. ಹಲವು ವರ್ಷಗಳಿಂದ ಗ್ಯಾರೇಜ್‌ನಲ್ಲಿ ನಿಂತಿದ್ದ ಅಣ್ಣನ ಫೇವರಿಟ್ ಗಾಡಿಯನ್ನು ಮತ್ತೆ ಧ್ರುವ ಸರ್ಜಾ ರೆಡಿ ಮಾಡಿಸಿದ್ದಾರೆ. ತಂದೆ ಜತೆಗೆ ಗಾಡಿ ಓಡಿಸಿ ಖುಷಿ ಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ | Nanda Kishore: ಸಿನಿಮಾದಲ್ಲಿ ಆಫರ್ ನೀಡುವುದಾಗಿ ಯುವ ನಟನಿಗೆ ಲಕ್ಷ ಲಕ್ಷ ವಂಚನೆ; ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ