Karunadu Studio

ಕರ್ನಾಟಕ

IND vs ENG: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌! – Kannada News | IND vs ENG: Yashasvi Jaiswal Creates History, Becomes First Player In The World To Achieve MIND-BOGGLING Record


ಲೀಡ್ಸ್‌: ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ (IND vs ENG) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿರುವ ಭಾರತ ತಂಡ ಉತ್ತಮ ಆರಂಭವನ್ನು ಪಡೆದಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ (Yashasvi jaiswal) ಅಜೇಯ ಅರ್ಧಶತಕವನ್ನು ಸಿಡಿಸುವ ಮೂಲಕ ಟೀಮ್‌ ಇಂಡಿಯಾಗೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದಾರೆ. ಅಂದಹಾಗೆ ಈ ಪಂದ್ಯದಲ್ಲಿ ಆಡುವ ಮೂಲಕ ಯಶಸ್ವಿ ಜೈಸ್ವಾಲ್‌ ಟೆಸ್ಟ್‌ ಕ್ರಿಕೆಟ್‌ ಇರಿಹಾಸದಲ್ಲಿಯೇ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.

ಕಳೆದ ವರ್ಷದ ಆರಂಭದಲ್ಲಿ ಭಾರತದಲ್ಲಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್‌ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು ಈ ಸರಣಿಯಲ್ಲಿ 700ಕ್ಕೂ ಅಧಿಕ ರನ್‌ ಗಳಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಇದೀಗ ಉತ್ತಮ ಫಾರ್ಮ್‌ ಮೂಲಕ ಇಂಗ್ಲೆಂಡ್‌ ಪ್ರವಾಸಕ್ಕೆ ಬಂದಿರುವ ಜೈಸ್ವಾಲ್‌, ಭಾರತ ತಂಡಕ್ಕೆ ಕೀ ಬ್ಯಾಟ್ಸ್‌ಮನ್‌ ಆಗಿದ್ದಾರೆ.

ಶುಕ್ರವಾರ ಕೆಎಲ್‌ ರಾಹುಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಮುರಿಯದ ಮೊದಲನೇ ವಿಕೆಟ್‌ಗೆ 91 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಟೀಮ್‌ ಇಂಡಿಯಾಗೆ ಉತ್ತಮ ಆರಂಭ ನೀಡಲು ನೆರವು ನೀಡಿದ್ದರು. ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಅವರು, 40 ಓವರ್‌ಗಳ ಹೊತ್ತಿಗೆ 115 ಎಸೆತಗಳಲ್ಲಿ ಅಜೇಯ 72 ರನ್‌ಗಳನ್ನು ಗಳಿಸಿದ್ದರು. ಆದರೆ, ಕೆಎಲ್‌ ರಾಹುಲ್‌ 42 ರನ್‌ ಗಳಿಸಿ ಬ್ರೈಡೆನ್‌ ಕಾರ್ಸ್‌ಗೆ ವಿಕೆಟ್‌ ಒಪ್ಪಿಸಿದ್ದರು.

IND vs ENG: ಭಾರತ ತಂಡವನ್ನು ಮುನ್ನಡೆಸಿ 58 ವರ್ಷಗಳ ಹಳೆಯ ದಾಖಲೆ ಮುರಿದ ಶುಭಮನ್‌ ಗಿಲ್‌!

ಅಪರೂಪದ ದಾಖಲೆ ಬರೆದ ಜೈಸ್ವಾಲ್‌

ಲೀಡ್ಸ್‌ನ ಹೆಡಿಂಗ್ಲೆ ಕ್ರಿಕೆಟ್‌ ಕ್ರೀಡಾಂಗಣದಲ್ಲಿನ ಪಂದ್ಯ ಯಶಸ್ವಿ ಜೈಸ್ವಾಲ್‌ ಅವರ ಪಾಲಿಗೆ 20ನೇ ಟೆಸ್ಟ್‌ ಪಂದ್ಯವಾಗಿದೆ. ಅವರು ತಮ್ಮ ವೃತ್ತಿ ಜೀವನದ 20 ಟೆಸ್ಟ್‌ ಪಂದ್ಯಗಳನ್ನು ಅವರು ವಿಭಿನ್ನ ಸ್ಥಳಗಳಲ್ಲಿ ಆಡಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಯನ್ನು ಬರೆದಿದ್ದಾರೆ, ಅವರು ವೆಸ್ಟ್‌ ಇಂಡೀಸ್‌ ವಿರುದ್ಧ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ಟೆಸ್ಟ್‌ ಪದಾರ್ಪಣೆ ಪಂದ್ಯವನ್ನು ಆಡಿದ್ದರು. ನಂತರ ಮುಂದಿನ ಎರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಕ್ರಮವಾಗಿ ಸೆಂಚೂರಿಯನ್‌ ಮತ್ತು ಕೇಪ್‌ ಟೌನ್‌ನಲ್ಲಿ ಆಡಿದ್ದರು.

ನಂತರ ಮುಂದಿನ 10 ಟೆಸ್ಟ್‌ ಪಂದ್ಯಗಳನ್ನು ಇಂಗ್ಲೆಂಡ್‌ (5 ಟೆಸ್ಟ್‌), ಬಾಂಗ್ಲಾದೇಶ (ಎರಡು ಟೆಸ್ಟ್‌) ಹಾಗೂ ನ್ಯೂಜಿಲೆಂಡ್‌ (ಮೂರು ಟೆಸ್ಟ್‌) ವಿರುದ್ಧ ಭಾರತದ ವಿವಿಧ ಕ್ರೀಡಾಂಗಣದಲ್ಲಿ ಆಡಿದ್ದರು. ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದದ ತಮ್ಮ ಮುಂದಿನ ಐದು ಪಂದ್ಯಗಳನ್ನು ಕ್ರಮವಾಗಿ ಪರ್ತ್‌, ಅಡಿಲೇಡ್‌, ಬ್ರಿಸ್ಬೇನ್‌, ಮೆಲ್ಬೋರ್ನ್‌ ಹಾಗೂ ಸಿಡ್ನಿಯಲ್ಲಿ ಆಡಿದ್ದರು. ಇದೀಗ ತಮ್ಮ 20ನೇ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್‌ ವಿರುದ್ಧ ಲೀಡ್ಸ್‌ನಲ್ಲಿ ಆಡುತ್ತಿದ್ದಾರೆ.

ಡಾನ್‌ ಬ್ರಾಡ್ಮನ್‌ ದಾಖಲೆಯ ಸನಿಹದಲ್ಲಿ ಜೈಸ್ವಾಲ್‌

ಯಶಸ್ವಿ ಜೈಸ್ವಾಲ್‌ ಅವರು ತಮ್ಮ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ವಿರುದ್ದ 800 ರನ್‌ಗಳ ಸನಿಹದಲ್ಲಿದ್ದಾರೆ. ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ವೇಗವಾಗಿ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಡಾನ್‌ ಬ್ರಾಡ್ಮನ್‌ ಹೆಸರಿನಲ್ಲಿದೆ. ಅವರು ತಮ್ಮ 13 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. ಈ ಸರಣಿಯಲ್ಲಿ ಜೈಸ್ವಾಲ್‌ ಅವರು, ಆಸೀಸ್‌ ದಿಗ್ಗಜನ ದಾಖಲೆಯನ್ನು ಮುರಿಯಬಹುದು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »