Karunadu Studio

ಕರ್ನಾಟಕ

IND vs ENG: ಜೈಸ್ವಾಲ್‌-ಗಿಲ್‌ ಶತಕಗಳ ಬಲದಿಂದ ಮೊದಲನೇ ದಿನ ಪ್ರಾಬಲ್ಯ ಮೆರೆದ ಭಾರತ! – Kannada News | Yashasvi Jaiswal, Shubman Gill’s century and Rishabh Pant’s half century help India post 359/3 at Stumps


ಲೀಡ್ಸ್‌: ಯಶಸ್ವಿ ಜೈಸ್ವಾಲ್‌ (101) ಹಾಗೂ ಶುಭಮನ್‌ ಗಿಲ್‌ (127*) ಭರ್ಜರಿ ಶತಕಗಳು ಮತ್ತು ರಿಷಭ್‌ ಪಂತ್‌ (65*) ಅವರ ಅರ್ಧಶತಕದ ಬಲದಿಂದ ಭಾರತ ತಂಡ, ಆಡರ್ಸನ್‌-ತೆಂಡೂಲ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (IND vs ENG) ಮೊದಲನೇ ಟೆಸ್ಟ್‌ ಪಂದ್ಯದ ಆರಂಭಿಕ ದಿನ ಇಂಗ್ಲೆಂಡ್‌ ವಿರುದ್ದ ಪ್ರಾಬಲ್ಯ ಸಾಧಿಸಿದೆ. ಈ ಮೂವರು ಬ್ಯಾಟ್ಸ್‌ಮನ್‌ಗಳ ಅಬ್ಬರದ ಬ್ಯಾಟಿಂಗ್‌ ಬಲದಿಂದ ಭಾರತ ತಂಡ, ಮೊದಲನೇ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 85 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 359 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ.

ಶುಕ್ರವಾರ ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರಂಭವಾದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಅವರು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದರು ಹಾಗೂ ಎದುರಾಳಿ ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದರು. ಈ ವೇಳೆ ಅವರು ಪಿಚ್‌ನ ಆರಂಭಿಕ ಓವರ್‌ಗಳ ಲಾಭವನ್ನು ಪಡೆಯುವ ಉದ್ದೇಶವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಪ್ರವಾಸಿ ತಂಡದ ನಾಯಕ ಶುಭಮನ್‌ ಗಿಲ್‌ ಕೂಡ ಮೊದಲು ಬೌಲ್‌ ಮಾಡುವ ಉದ್ದೇಶವನ್ನೇ ವ್ಯಕ್ತಪಡಿಸಿದ್ದರು. ಆದರೆ, ಈ ಇಬ್ಬರೂ ನಾಯಕರ ನಿರೀಕ್ಷೆ ಉಲ್ಟಾ ಆಯಿತು. ಏಕೆಂದರೆ, ದಿನವೀಡಿ ಬಿಸಿಲು ಇತ್ತು ಹಾಗೂ ಕಂಡೀಷನ್ಸ್‌ ಬ್ಯಾಟಿಂಗ್‌ಗೆ ನೆರವು ನೀಡಿತು. ಇದರ ಫಲವಾಗಿ ಟೀಮ್‌ ಇಂಡಿಯಾ ಮೊದಲನೇ ದಿನ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಮೆರೆಯಲು ಸಾಧ್ಯವಾಯಿತು.

IND vs ENG: ಕೆಎಲ್‌ ರಾಹುಲ್‌ರನ್ನು ಶ್ಲಾಘಿಸಿ, ವಿರಾಟ್‌ ಕೊಹ್ಲಿಯನ್ನು ಟೀಕಿಸಿದ ಸಂಜಯ್‌ ಮಾಂಜ್ರೇಕರ್‌!

ಭಾರತ ತಂಡಕ್ಕೆ ಉತ್ತಮ ಆರಂಭ

ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಜೋಡಿ ಹೊಸ ಚೆಂಡಿನ ಸವಾಲನ್ನು ಸಮರ್ಥವಾಗಿ ಎದುರಿಸಿತು ಹಾಗೂ ಮುರಿಯದ ಮೊದಲನೇ ವಿಕೆಟ್‌ಗೆ 91 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತಕ್ಕೆ ಭರ್ಜರಿ ಆರಂಭವನ್ನು ನೀಡಿತ್ತು. ಆದರೆ, 78 ಎಸೆತಗಳಲ್ಲಿ 42 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ಕೆಎಲ್‌ ರಾಹುಲ್‌, 25ನೇ ಓವರ್‌ನಲ್ಲಿ ಬ್ರೈಡನ್‌ ಕಾರ್ಸ್‌ ಎಸೆತದಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್‌ ಕೊಟ್ಟಿದ್ದರು. ಆ ಮೂಲಕ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು.

ಯಶಸ್ವಿ ಜೈಸ್ವಾಲ್‌ ಶತಕ

ಕೆಎಲ್‌ ರಾಹುಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಟೆಸ್ಟ್‌ ಡೆಬ್ಯೂಟಂಟ್‌ ಸಾಯಿ ಸುದರ್ಶನ್‌ ಆಡಿದ ನಾಲ್ಕು ಎಸೆತಗಳಲ್ಲಿ ಖಾತೆ ತೆರೆಯದೆ ನಾಯಕ ಬೆನ್‌ ಸ್ಟೋಕ್ಸ್‌ ಎಸೆತದಲ್ಲಿ ಡಕ್‌ಔಟ್‌ ಆದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಯಶಸ್ವಿ ಜೈಸ್ವಾಲ್‌, 159 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ 101 ರನ್‌ಗಳನ್ನು ಗಳಿಸಿದರು ಹಾಗೂ ಇಂಗ್ಲೆಂಡ್‌ನಲ್ಲಿ ಆಡಿದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿಯೇ ಶತಕ ಸಿಡಿಸಿ ದಾಖಲೆ ಬರೆದರು. ಅಲ್ಲದೆ ನಾಯಕ ಶುಭಮನ್‌ ಗಿಲ್‌ ಜೊತೆ ಮೂರನೇ ವಿಕೆಟ್‌ಗೆ 129 ರನ್‌ಗಳ ಅದ್ಭುತ ಜೊತೆಯಾಟವನ್ನು ಆಡಿದರು. ಟೀ ವಿರಾಮದ ಬಳಿಕ ಕ್ರೀಸ್‌ಗೆ ಬಂದಿದ್ದ ಜೈಸ್ವಾಲ್‌, ಬೆನ್‌ ಸ್ಟೋಕ್ಸ್‌ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಕ್ಲೀನ್‌ ಬೌಲ್ಡ್‌ ಆದರು.

ನಾಯಕನಾಗಿ ಚೊಚ್ಚಲ ಟೆಸ್ಟ್‌ನಲ್ಲಿ ಗಿಲ್‌ ಶತಕ

ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದ ಬಳಿಕ ತಂಡದ ಜವಾಬ್ದಾರಿಯನ್ನು ಹೊತ್ತ ನಾಯಕ ಶುಭಮನ್‌ ಗಿಲ್‌ ಭರ್ಜರಿಯಾಗಿ ಬ್ಯಾಟ್‌ ಬೀಸಿದರು. ಇಲ್ಲಿನ ಕಂಡೀಷನ್ಸ್‌ ಅನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡ ಗಿಲ್‌, ಇಂಗ್ಲೆಂಡ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅವರು ಮೊದಲನೇ ದಿನದಾಟದ ಅಂತ್ಯಕ್ಕೆ 175 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 127 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಅವರು ಟೆಸ್ಟ್‌ ತಂಡದ ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಅಂದಹಾಗೆ ಗಿಲ್‌ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಅವರು ರಿಷಭ್‌ ಪಂತ್‌ ಜೊತೆ ನಾಲ್ಕನೇ ವಿಕೆಟ್‌ಗೆ 138 ರನ್‌ಗಳನ್ನು ಕಲೆ ಹಾಕಿದ್ದಾರೆ. ಪಂತ್‌ ಕೂಡ ಅಬ್ಬರಿಸಿದರು. ಅವರು ಆಡಿದ 102 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 65 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಗಿಲ್‌ ಜತೆ ಎರಡನೇ ದಿನದಾಟಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್‌ ಬೌಲಿಂಗ್‌ ವೈಫಲ್ಯ

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಅವರ ನಿರ್ಧಾರವನ್ನು ಸಮರ್ಥಿಸುವಲ್ಲಿ ಬೌಲರ್‌ಗಳು ವಿಫಲರಾದರು. ಏಕೆಂದರೆ, ದಿನವೀಡಿ ಬಿಸಿಲು ಇದ್ದ ಕಾರಣ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತಿತ್ತು. ಅಲ್ಲದೆ ಇಂಗ್ಲೆಂಡ್‌ ಬೌಲರ್‌ಗಳಿಗೆ ಕಂಡೀಷನ್ಸ್‌ ನೆರವು ನೀಡಲಿಲ್ಲ. ಆದರೆ, ನಾಯಕ ಬೆನ್‌ ಸ್ಟೋಕ್ಸ್‌ ಎರಡು ವಿಕೆಟ್‌ ಕಿತ್ತರೆ, ಬ್ರೈಡನ್‌ ಕಾರ್ಸ್‌ ಒಂದು ವಿಕೆಟ್‌ ಪಡೆದಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »