ನವದೆಹಲಿ: ಇತ್ತೀಚೆಗೆ ತಂದೆಯೊಬ್ಬ ತನ್ನ ಎರಡು ವರ್ಷದ ಮಗುವನ್ನು ಹಿಡಿದುಕೊಂಡು ಬಂಗೀ ಜಂಪ್ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಇದನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸ್ಟ್ರಾಲರ್‌ನಲ್ಲಿ ಮಗುವನ್ನು ಮಲಗಿಸಿದ ಪೋಷಕರು ಸ್ಟ್ರಾಲರ್‌ನಲ್ಲಿ ಹಲ್ಲಿ ಇದ್ದರೂ ಅದನ್ನು ಲೆಕ್ಕಿಸದೇ ರೀಲ್ಸ್ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಕಿಡಿಕಾರಿದ್ದಾರೆ. ಇದೆಂಥ ರೀಲ್ಸ್ ಕ್ರೇಜ್ ಇವರದ್ದು ಎಂದು ತರಾಟೆ ತೆಗೆದುಕೊಂಡಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ಸ್ಟ್ರಾಲರ್‌ನಲ್ಲಿ ಮಗು ಮಲಗಿದ್ದಾಗ ಮಗುವಿನ ಸುತ್ತಲೂ ದೊಡ್ಡ ಹಲ್ಲಿಯೊಂದು ಹರಿದಾಡಿದ್ದು ಸೆರೆಯಾಗಿದೆ. ಸ್ಟ್ರಾಲರ್‌ನಲ್ಲಿ ಸಿಕ್ಕಿಹಾಕಿಕೊಂಡ ಹಲ್ಲಿ ಹೊರಬರಲು ದಾರಿ ಕಾಣದೆ ಒದ್ದಾಡುತ್ತಿತ್ತು. ಆದರೆ ಪೋಷಕರು ಮಾತ್ರ ಮಗುವನ್ನು ಅಲ್ಲಿಂದ ಎತ್ತಿಕೊಳ್ಳದೇ ಹಲ್ಲಿಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಪೋಷಕರು ತಮ್ಮ ಸೋಶಿಯಲ್ ಮಿಡಿಯಾ ವ್ಯೂವ್ಸ್‌ಗಾಗಿ ಹೆತ್ತ ಮಗುವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.