Karunadu Studio

ಕರ್ನಾಟಕ

Daily Work Hours: ರಾಜ್ಯದಲ್ಲಿ ಕೆಲಸದ ಅವಧಿ ಹೆಚ್ಚಳವಾಗುತ್ತಾ?; ಸರ್ಕಾರದ ಸ್ಪಷ್ಟನೆ ಇಲ್ಲಿದೆ – Kannada News | Clarification from the state government regarding the extension of the daily work hours


ಬೆಂಗಳೂರು: ರಾಜ್ಯದಲ್ಲಿ ಕೆಲಸದ ಅವಧಿ ಹೆಚ್ಚಳದ ಪ್ರಸ್ತಾವನೆಗೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ವಾರದ ಗರಿಷ್ಠ 48 ಗಂಟೆಗಳ ಕೆಲಸದ ಸಮಯ (Daily Work Hours) ಮಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಈ ತಿದ್ದುಪಡಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಹಾಗೂ ದೇಶೀಯ ಕಾರ್ಮಿಕ ಕಾನೂನುಗಳ ಮಾನದಂಡಗಳಿಗೆ ಪೂರಕವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇನ್ನು ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಪ್ರತಿಕ್ರಿಯಿಸಿ, ಈ ತಿದ್ದುಪಡಿ ಪ್ರಸ್ತಾವನೆ ಕುರಿತಂತೆ ಜೂನ್ 19ರಂದು ನೋಂದಾಯಿತ ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮದ ಪ್ರತಿನಿಧಿಗಳೊಂದಿಗೆ ತ್ರಿಪಕ್ಷೀಯ ಸಭೆ ನಡೆಸಲಾಗಿದೆ. 48 ಗಂಟೆಗಳ ಗರಿಷ್ಠ ವಾರದ ಮಿತಿಗೆ ಯಾವುದೇ ಬದಲಾವಣೆ ಇಲ್ಲ. ಈ ತಿದ್ದುಪಡಿಯು ವಾರದ ಗರಿಷ್ಠ ಕೆಲಸದ ಅವಧಿಯಾದ 48 ಗಂಟೆಗಳನ್ನು ಯಾವುದೇ ರೀತಿಯಲ್ಲಿ ಹೆಚ್ಚಿಸುವುದಿಲ್ಲ. ಅದು 48 ಗಂಟೆಗಳ ಮಿತಿಯಲ್ಲಿಯೇ ಉಳಿಯುತ್ತದೆ. ನಿರ್ಧಾರವು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಮತ್ತು ಮೂಲಭೂತ ದೇಶೀಯ ಕಾನೂನುಗಳು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿದೆ. ಯಾವುದೇ ಅಂತಾರಾಷ್ಟ್ರೀಯ ಮಾನದಂಡದ ಉಲ್ಲಂಘನೆಯಾಗಿಲ್ಲ ಎಂದಿದ್ದಾರೆ.

ಪ್ರಸಕ್ತ ಕಾನೂನಿನಡಿ ಕೆಲಸದ ಅವಧಿ 9 ತಾಸು ಇದೆ. ಹೊಸ ಪ್ರಸ್ತಾವನೆಯಂತೆ ದಿನದ ಕೆಲಸದ ಅವಧಿಯನ್ನು 10 ತಾಸಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಈ 10 ತಾಸುಗಳ ಕೆಲಸದ ಅವಧಿಯಲ್ಲಿ ಒಂದು ತಾಸಿನ ಭೋಜನ ವಿರಾಮವೂ ಸೇರಿದೆ. ಆ ಮೂಲಕ ಕೆಲಸ ಮಾಡುವ ಅವಧಿ 9 ತಾಸು ಮಾತ್ರ ಉಳಿಯಲಿದೆ. ಪ್ರಸ್ತಾವನೆಯ ಮೂಲ ಉದ್ದೇಶ ಉದ್ಯೋಗಿಗಳು, ಉದ್ಯೋಗದಾತ ಇಬ್ಬರಿಗೂ ಆಯ್ಕೆಗಳನ್ನು ನೀಡುವುದಾಗಿದೆ. ಈ ಬದಲಾವಣೆ ಮೂಲಕ ಕಾನೂನು ಪ್ರಕಾರ ಕೆಲ ದಿನಗಳಲ್ಲಿ ಉದ್ಯೋಗಿ ವಾರದಲ್ಲಿ 48 ತಾಸು ಕೆಲಸ ಮಾಡುವ ಅಗತ್ಯತೆಯನ್ನೂ ಪೂರೈಸುವ ವ್ಯವಸ್ಥೆ ಕಲ್ಪಿಸಲಿದೆ. ರಾಜ್ಯ ಸರ್ಕಾರ ಎಲ್ಲಾ ಸಿಬ್ಬಂದಿ ವರ್ಗದ ಹಿತರಕ್ಷಣೆಗೆ ಬದ್ಧವಾಗಿದೆ ಎಂದಿದ್ದಾರೆ.

ಸದ್ಯ ಪ್ರಸ್ತಾವನೆ ಸಮಾಲೋಚನೆ ಹಂತದಲ್ಲಿದೆ. ಎಲ್ಲಾ ಪಾಲುದಾರರ ಜೊತೆ ಸಮಗ್ರ ಚರ್ಚೆ ನಡೆಸಲಾಗುತ್ತಿದೆ. ಯಾವುದೇ ಅಂತಿಮ ತೀರ್ಮಾನಕ್ಕೆ ಬರುವ ಮೊದಲು ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | 10-hour workday Policy: ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ; ವಾರದಲ್ಲಿ ಎರಡು ದಿನ ರಜೆ?

ಪ್ರಸ್ತಾವಿತ ತಿದ್ದುಪಡಿಯ ಉದ್ದೇಶವೇನು?

ಪ್ರಸ್ತುತ ಕಾನೂನಿನಡಿಯಲ್ಲಿ ದಿನಕ್ಕೆ ಗರಿಷ್ಠ 9 ಗಂಟೆಗಳ ಕೆಲಸ ಮಾತ್ರ ಅನುಮತಿಸಲಾಗಿದೆ. ಹೊಸ ಪ್ರಸ್ತಾವನೆಯು 10 ಗಂಟೆಗಳ ಕಾಲ ದಿನದ ಕೆಲಸದ ಅವಧಿಯನ್ನು ಮಾಡಲು ಉದ್ದೇಶಿಸಿದೆ ಎಂಬ ಎನ್ನಲಾಗಿದೆ. ಇದರಲ್ಲಿ 1 ಗಂಟೆ ಭೋಜನ ವಿರಾಮವೂ ಸೇರಿತ್ತು. ಅಂದರೆ, ನಿಜವಾದ ಕೆಲಸದ ಅವಧಿ 9 ಗಂಟೆಗಳಷ್ಟೇ ಆಗುತ್ತದೆ. 12 ಗಂಟೆಗಳ ಗರಿಷ್ಠ ಮಿತಿ ಮಾತ್ರ ಹೆಚ್ಚುವರಿ ವೇಳೆಗೆ (ಒವರ್‌ಟೈಮ್‌) ಸಂಬಂಧಪಟ್ಟಿದೆ ಎಂದು ಸರ್ಕಾರ ಹೇಳಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »