Karunadu Studio

ಕರ್ನಾಟಕ

MP Dr K Sudhakar:ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಕ್ಷೇತ್ರದಲ್ಲಿ ಅವರನ್ನು ಮೆಂಟಲ್ ಎಂತಲೇ ಕರೆಯುತ್ತಾರೆ : ಟಾಂಗ್ ಕೊಟ್ಟ ಸಂಸದ ಡಾ.ಕೆ.ಸುಧಾಕರ್. – Kannada News | Minister Dr. M.C. Sudhakar is called “mental” in the constituency: MP Dr. K. Sudhakar gave a speech.


ಚಿಕ್ಕಬಳ್ಳಾಪುರ : ಡಾ.ಎಂ.ಸಿ.ಸುಧಾಕರ್ ಅವರನ್ನು ಕ್ಷೇತ್ರದಲ್ಲಿ ಮೆಂಟಲ್ ಅಂತಾನೆ ಜನ ಕರಿತಾರೆ. ಜಿಲ್ಲಾ ಉಸ್ತುವಾರಿಯಾಗಿ ಏನು ಮಾಡುತ್ತಿದ್ದಾರೆ? ನಾನು ಮಾಡಿದ ಅಭಿವೃದ್ದಿ ಕಾಮಗಾರಿ ಗಳನ್ನು ಉದ್ಘಾಟನೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಸಚಿವರಾಗಿ ಜಿಲ್ಲೆಗೆ ಒಂದೇ ಒಂದು ಹೊಸ ಯೋಜನೆ ತಂದಿಲ್ಲ. ತರಲು ಇವರ ಕೈಲಿ ಆಗುವುದೂ ಇಲ್ಲ. ನಾನು ಸಚಿವನಾಗಿ ದ್ದಾಗ ಏನ್ ಮಾಡಿದ್ದೇನೆ ಅಂತ ಜಿಲ್ಲೆಯ ಜನರಿಗೆ ಗೊತ್ತಿದೆ ಎನ್ನುವ ಮೂಲಕ ಸಚಿವ ಎಂ.ಸಿ ಸುಧಾಕರ್‌ಗ ತಿರುಗೇಟು ನೀಡಿದರು.

ದಿಶಾಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡೆಂಟಲ್ ಡಾಕ್ಟರ್ ಅಲ್ಲ ಮೆಂಟಲ್ ಡಾಕ್ಟರ್ ಅಷ್ಟೆ ಎಂದ ಅವರು, ಇವರ ಸರಕಾರದಲ್ಲಿ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಶಾಸಕ ಬಿ.ಆರ್.ಪಾಟಿಲ್ ಅವರೇ ಹೇಳಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದು ಮಕ್ಕಳಿಗೂ ಗೊತ್ತಿದೆ. ಸ್ವತಃ ಕಂದಾಯ ಸಚಿವರೇ ಹೇಳಿಲ್ಲವ ಇಲಾಖೆಗಳಲ್ಲಿ ಲಂಚದ ಬೋರ್ಡ ಹಾಕಿ ಅಂತ. ಕಂದಾಯ ಸಚಿವ ಕೃಷ್ಣ ಬೈರೇಗೌಡ ರಿಗೂ ಗೊತ್ತು ತಮ್ಮ ಇಲಾಖೆಗಳಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ ಎಂದು ಕಾಲೆಳೆದರು.

ಇದನ್ನೂ ಓದಿ: MP Dr K Sudhakar: ಬಯಲುಸೀಮೆಗೆ ಒತ್ತು ನೀಡಿ, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ, ಎಚ್‌ಎನ್‌ ವ್ಯಾಲಿಯಲ್ಲಿ ತೃತೀಯ ಹಂತದ ಶುದ್ಧೀಕರಣ ಮಾಡಿ: ಸಂಸದ ಡಾ.ಕೆ.ಸುಧಾಕರ್‌ ಆಗ್ರಹ

೧೪೦ ಕೋಟಿ ಜನ ತೀರ್ಪು ಕೊಟ್ಟಿದ್ದರಿಂದ ಕೇಂದ್ರ ಸರಕಾರ ಪ್ರಧಾನಿ ಮೋದಿ ನಾಯಕತ್ವದಲ್ಲಿ ೧೧ ವರ್ಷಗಳ ಕಾಲ ಆಡಳಿತದಲ್ಲಿದೆ. ಸ್ಥಳೀಯ ಶಾಸಕರು ಸೇರಿದಂತೆ ಕೆಲವರು ಪೂರ್ವಾಗ್ರಹ ಪೀಡಿತ ರಾಗಿದ್ದಾರೆ. ಕೆಲವು ಆಲೋಚನೆಗಳಿಗೆ ಬಲಿಯಾಗಿದ್ದಾರೆ.ಅವರು ವಿಶಾಲವಾಗಿ ನೋಡುತ್ತಿಲ್ಲ.ದೇಶ ಯಾವಕಡೆ ಸಾಗುತ್ತಿದೆ ಎಂದು ನೋಡುತ್ತಿಲ್ಲ.ಅವರು ನಂಬಿರುವ ತತ್ವಗಳಿಗೆ ಅವರಿಗೆ ಅವರೇ  ಸಿಕ್ಕಿಹಾಕಿಕೊಂಡು ನರಳುತ್ತಿದ್ದಾರೆ ಎಂದರು.

೩ನೇ ಹಂತದ ಶುದ್ದೀಕರಣ ಬೇಕೇ ಬೇಕು
ಹೆಚ್.ಎನ್.ವ್ಯಾಲಿ ನೀರಿಗೆ ೩ನೇ ಹಂತದ ಶುದ್ಧೀಕರಣ ೧೦೦ಕ್ಕೆ ನೂರು ಅಗತ್ಯವಿದೆ.ಎರಡನೇ ಹಂತದಲ್ಲಿ ಶುದ್ಧೀಕರಣ ಆಗಿರುವ ನೀರನ್ನು ನೇರವಾಗಿ ಬಳಸುತ್ತಿರುವ ಏಕೈಕ ಜಿಲ್ಲೆಗಳು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮಾತ್ರ.ಜನರ ಆರೋಗ್ಯ ಬಯಸುವವರು ಕೂಡಲೇ ೩ನೇ ಹಂತದ ಶುದ್ಧೀಕರಣ ಮಾಡಬೇಕು. ಪ್ರಪಂಚದಲ್ಲಿ ಬೇರೆ ಎಲ್ಲೂ ಹೀಗೆ ನೇರವಾಗಿ ಜನತೆ ಬಳಸುತ್ತಿಲ್ಲ ಎಂದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »