Karunadu Studio

ಕರ್ನಾಟಕ

Israel-Iran Conflict: 3ನೇ ವಿಶ್ವಯುದ್ಧ ಫಿಕ್ಸ್‌? ಅಮೆರಿಕ ದಾಳಿ ಬೆನ್ನಲ್ಲೇ ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ಇರಾನ್‌ ಅಟ್ಯಾಕ್‌ – Kannada News | Iran Hits Israeli Sites, Ben Gurion Airport After US Strike, Israel Fires Back


ಟೆಹ್ರಾನ್‌: ಇಸ್ರೇಲ್‌ ಹಾಗೂ ಇರಾನ್‌ (Israel-Iran Conflict) ನಡುವಿನ ಕದನ ತಾರಕ್ಕೇರಿದೆ. ಇದೀಗ ರಣರಂಗಕ್ಕೆ ಅಮೆರಿಕ ಎಂಟ್ರಿ ಕೊಟ್ಟಿದೆ. ಅಮೆರಿಕದ ಪಡೆಗಳು ಇಸ್ರೇಲ್‌ ಜೊತೆಗೆ ಸೇರಿ ಇರಾನ್‌ ಮೇಲೆ ದಾಳಿ ನಡೆಸಿದ್ದವು. ಇದೀಗ ಇರಾನ್‌ ಇಸ್ರೇಲ್‌ ಮೇಲೆ ತಿರುಗಿ ಬಿದ್ದಿದೆ. ಇರಾನಿನ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ದಾಳಿ ಮಾಡಿದ ಕೆಲವೇ ಗಂಟೆಗಳ ನಂತರ ಟೆಹ್ರಾನ್ ಭಾನುವಾರ ಇಸ್ರೇಲ್ ಮೇಲೆ ಹೊಸ ದಾಳಿಗಳನ್ನು ನಡೆಸಿದೆ. ಇರಾನ್ ಹೈಫಾ ಮತ್ತು ಟೆಲ್ ಅವೀವ್ ಮೇಲೆ ಎರಡು ಬ್ಯಾಚ್‌ಗಳಲ್ಲಿ 27 ಕ್ಷಿಪಣಿಗಳನ್ನು ಹಾರಿಸಿದೆ ಎಂದು ತಿಳಿದು ಬಂದಿದೆ.

ಇರಾನ್‌ ಇಸ್ರೇಲ್‌ ಮೇಲೆ ಎರಡು ಬ್ಯಾಚ್‌ಗಳಲ್ಲಿ 27 ಕ್ಷಿಪಣಿಗಳನ್ನು ಹಾರಿಸಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಟೆಲ್ ಅವೀವ್ ಬಳಿಯ ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನೂ ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. ಇರಾನ್ ವಾಯು ಸೇನೆಯಿಂದ ಟೆಲ್ ಅವೀವ್, ಹೈಫಾ ನಗರದ ಮೇಲೆ ಏರ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿದೆ. ಇರಾನ್ ನಡುವಿನ ಯುದ್ಧಕ್ಕೆ ಇದೀಗ ಅಮೇರಿಕ ಅಧಿಕೃತ ಪ್ರವೇಶ ಪಡೆದಿದ್ದು, ಅಮೆರಿಕ ಪರಮಾಣು ನೆಲೆಗಳಾದ ಪೋರ್ಡೋ, ನಟಾಂಜ್, ಎಸ್ಟಹಾನ್ ಮೇಲೆ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ನ ಪ್ರಮುಖ ನಗರಗಳಲ್ಲಿ ಹೆಲಿಕಾಪ್ಟರ್ ಮೂಲಕ ಸೈರನ್ ಮೊಳಗಿಸಲಾಗಿದೆ.

ಇರಾನ್‌ ಇರಾನ್ ಇಸ್ರೇಲ್ ಕಡೆಗೆ ಕ್ಷಿಪಣಿಗಳ ದಾಳಿ ನಡೆಸಿತು. ಇರಾನ್ ಕ್ಷಿಪಣಿಗಳು ಟೆಲ್ ಅವೀವ್, ಹೈಫಾ, ನೆಸ್ ಜಿಯೋನಾ ಮತ್ತು ರಿಶಾನ್ ಲೆಜಿಯಾನ್ ಪ್ರದೇಶ ಸೇರಿದಂತೆ ಮಧ್ಯ ಮತ್ತು ಉತ್ತರ ಇಸ್ರೇಲ್‌ನ ಕೆಲ ಭಾಗದಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಅಮೆರಿಕ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದೆ. ಇರಾನ್‌ನ ಪರಮಾಣು ಇಂಧನ ಸಂಸ್ಥೆಯು ಭಾನುವಾರ ಮುಂಜಾನೆ ತನ್ನ ಮೂರು ಪರಮಾಣು ತಾಣಗಳ ಮೇಲೆ ನಡೆದ ದಾಳಿಗಳನ್ನು ದೃಢಪಡಿಸಿದೆ ಮತ್ತು ತನ್ನ ರಾಷ್ಟ್ರೀಯ ಉದ್ಯಮದ ಅಭಿವೃದ್ಧಿಯನ್ನು ನಿಲ್ಲಿಸಲು ಬಿಡುವುದಿಲ್ಲ ಎಂದು ಹೇಳಿದೆ. ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ ಕೆರಳಿದ್ದು ಖಡಕ್‌ ಎಚ್ಚರಿಕೆಯನ್ನು ನೀಡಿತ್ತು.

ಈ ಸುದ್ದಿಯನ್ನೂ ಓದಿ: Israel-Iran Conflict: ಇರಾನ್‌ ಕ್ಷಿಪಣಿಗಳ ದಾಳಿಗೆ ಇಸ್ರೇಲ್‌ ಐರನ್‌ ಡೋಮ್‌ ಶಕ್ತಿ ಕುಂದಿತಾ? ಅಖಾಡಕ್ಕೆ ರಷ್ಯಾ- ಅಮೆರಿಕ ಎಂಟ್ರಿ!

ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ (Israel-Iran Conflict) ಅಮೆರಿಕದ ಪಡೆಗಳು ದಾಳಿ ನಡೆಸಿದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಶ್ಲಾಘಿಸಿದ್ದಾರೆ. ಬೇರೆ ಯಾವುದೇ ದೇಶ ಮಾಡದೆ ಇರುವ ಸಾಧನೆಯನ್ನು ಅಮೆರಿಕ ಮಾಡಿದೆ. ಅಭಿನಂದನೆಗಳು, ಅಧ್ಯಕ್ಷ ಟ್ರಂಪ್, ಅಮೆರಿಕದ ಅದ್ಭುತ ಮತ್ತು ಶೌರ್ಯ ಪ್ರದರ್ಶನದಿಂದ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ನಿಮ್ಮ ದಿಟ್ಟ ನಿರ್ಧಾರವು ಇತಿಹಾಸವನ್ನು ಬದಲಾಯಿಸುತ್ತದೆ ಎಂದು ಅವರು ಹೇಳಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »