Karunadu Studio

ಕರ್ನಾಟಕ

ರೀಲ್‌ ಅಲ್ಲ ರಿಯಲ್‌; ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಪತ್ನಿ, ಮಕ್ಕಳ ಅಪಹರಿಸಿದ ಶಸ್ತ್ರಸಜ್ಜಿತ ಗುಂಪು – Kannada News | Gunmen storm Madhya Pradesh home; shoot man, kidnap wife, daughters


ಭೋಪಾಲ್‌: ಶಸ್ತ್ರಸಜ್ಜಿತ ಗುಂಪೊಂದು ಹಾಡಹಗಲೇ ಮನೆಗೆ ನುಗ್ಗಿ ಮಾಲೀಕನ ಮೇಲೆ ಗುಂಡು ಹಾರಿಸಿ ಆತನ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿರುವ ಘಟನೆ ಮಧ್ಯ ಪ್ರದೇಶದ (Madhya Pradesh) ಛತ್ತರ್​​ಪುರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ (Viral Video) ಆಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಕರೆರಾ ತಹಸಿಲ್ ವ್ಯಾಪ್ತಿಯ ಲಾಲ್‌ಪುರ ಗ್ರಾಮದಲ್ಲಿ ಈ ಆಘಾತಕಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಮೇಲ್ಜಾತಿಯ ಪುರುಷರ ಗುಂಪು ದಲಿತ ಸಮುದಾಯದ ಮಾಜಿ ಸರಪಂಚ್ ಹರಿರಾಮ್‌ ಪಾಲ್‌ ಮನೆಗೆ ನುಗ್ಗಿ, ಗಾಳಿಯಲ್ಲಿ 9 ಸುತ್ತು ಗುಂಡು ಹಾರಿಸಿ, ಒಬ್ಬ ಮಹಿಳೆ ಮತ್ತು ಯುವಕನ ಮೇಲೆ ಬಂದೂಕಿನಿಂದ ಹಲ್ಲೆ ನಡೆಸಿ ಮೂವರನ್ನು ಅಪಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ʼʼ10ಕ್ಕಿಂತಲೂ ಅಧಿಕ ಜನರ ಗುಂಪು ಬಂದೂಕು, ದೊಣ್ಣೆ ಮತ್ತು ರಾಡ್‌ ಹಿಡಿದುಕೊಂಡು ಹರಿರಾಮ್‌ ಪಾಲ್‌ ಮನೆಗೆ ನುಗ್ಗಿದ್ದರು. ಇವರು ಕಾರು ಮತ್ತು ಬೈಕ್‌ಗಳಲ್ಲಿ ಆಗಮಿಸಿದ್ದರು. ಮನೆಯೊಳಗೆ ನುಗ್ಗಿದ ಅವರು ಯಾವುದೇ ಪ್ರಚೋದನೆಯಿಲ್ಲದೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಜತೆಗೆ ಕುಟುಂಬ ಸದಸ್ಯರನ್ನು ಥಳಿಸಿದ್ದರುʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೈಯಕ್ತಿಕ ದ್ವೇಷದ ಕಾರಣಕ್ಕೆ ಮಾಜಿ ಸರ್‌ಪಂಜ್‌ ಹರಿರಾಮ್‌ ಪಾಲ್‌ ಮನೆ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.



ಈ ಸುದ್ದಿಯನ್ನೂ ಓದಿ: 5ರ ಹರೆಯದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಭೀಕರ ಕೊಲೆ; 22 ವರ್ಷದ ಕಾಮುಕನ ಬಂಧನ

ದಾಳಿ ನಡೆಸಿ ಹರಿರಾಮ್‌ ಅವರ ಪತ್ನಿ ಮತ್ತು 7 ಹಾಗೂ 5 ವರ್ಷದ ಹೆಣ್ಣು ಮಕ್ಕಳನ್ನು ಬಂದೂಕಿನಿಂದ ಹೆದರಿಸಿ ಅಪಹರಿಸಲಾಗಿದೆ. ವೈರಲ್‌ ವಿಡಿಯೊದಲ್ಲಿ ಈ ಎಲ್ಲ ಘಟನೆ ದಾಖಲಾಗಿದೆ. ಪೊಲೀಸರು ಪ್ರಮುಖ ಆರೋಪಿಯನ್ನು ಅದೇ ಗ್ರಾಮದ ನಿವಾಸಿ ಸಂಜಯ್ ಸಿಂಗ್ ರಜಪೂತ್ ಎಂದು ಗುರುತಿಸಿದ್ದು, ಈತ 10ರಿಂದ 15 ಜನರ ಗುಂಪಿನ ನೇತೃತ್ವ ವಹಿಸಿದ್ದ ಎನ್ನಲಾಗಿದೆ. ದಾಳಿಯ ಹಿಂದಿನ ಉದ್ದೇಶ ವೈಯಕ್ತಿಕ ದ್ವೇಷ ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈವರೆಗೆ ಐವರು ಶಂಕಿತರನ್ನು ಬಂಧಿಸಲಾಗಿದ್ದು, 9 ವ್ಯಕ್ತಿಗಳ ವಿರುದ್ಧ ಕೊಲೆ ಯತ್ನ ಮತ್ತು ಅಪಹರಣ ಸೇರಿದಂತೆ ಭಾರತೀಯ ನ್ಯಾಯ ಸಂಹಿತಾ (BNS) 11 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 8 ಆರೋಪಿಗಳ ಗುರುತು ಪತ್ತೆಯಾಗಿಲ್ಲ. ಪೊಲೀಸರು ಹಲ್ಲೆಗೆ ಬಳಸಲಾದ ಬೊಲೆರೊ ಎಸ್‌ಯುವಿ ಮತ್ತು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಉಳಿದ ಅಪರಾಧಿಗಳನ್ನು ಬಂಧಿಸಲು 5 ವಿಶೇಷ ತಂಡಗಳನ್ನು ರಚಿಸಲಾಗಿದೆ ಮತ್ತು ಸುಳಿವು ನೀಡಿದವರಿಗೆ 10,000 ರೂ.ಗಳ ಬಹುಮಾನವನ್ನು ಘೋಷಿಸಲಾಗಿದೆ.

ಘಟನೆಯ ಬಗ್ಗೆ ಛತ್ತರ್‌ಪುರ ಎಸ್‌ಪಿ ಆಗಮ್ ಜೈನ್ ಮಾಹಿತಿ ನೀಡಿ, ʼʼದಾಳಿಕೋರರು ಮನೆಯೊಳಗೆ ನುಗ್ಗಿ, ಭಯಭೀತರಾಗಲು ಗಾಳಿಯಲ್ಲಿ ಗುಂಡು ಹಾರಿಸಿ, ಹರಿರಾಮ್ ಪಾಲ್ ಮೇಲೆ ಹಲ್ಲೆ ನಡೆಸಿ, ಅವರ ಪತ್ನಿ ಮತ್ತು ಹೆಣ್ಣುಮಕ್ಕಳನ್ನು ಅಪಹರಿಸಿ ಪರಾರಿಯಾಗಿದ್ದಾರೆʼʼ ಎಂದು ಹೇಳಿದ್ದಾರೆ. ದಾಳಿಯನ್ನು ಖಂಡಿಸಿದ‌ ಕಾಂಗ್ರೆಸ್‌ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »