ಶಿರಸಿ: ಶಿರಸಿಯಲ್ಲಿ ತಹಸೀಲ್ದಾರ್ ಇಲ್ಲದೇ ಸಾಕಷ್ಟು ಕಾಗದ ಪತ್ರ ಕೆಲಸಕಾರ್ಯಗಳು ಸ್ಥಗಿತವಾಗಿದ್ದು, ಕಳೆದ 4 ತಿಂಗಳಿನಿಂದ ಶಿರಸಿಯಲ್ಲಿ ತಹಶೀಲ್ದಾರ್ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನ ವಹಿಸುತ್ತಿಲ್ಲ.
ಇದನ್ನೂ ಓದಿ: Sirsi News: 23 ರಂದು ಕಾರವಾರ ಚಲೋ
ಇದರಿಂದ ಸಾರ್ವಜನಿಕರ ಕೆಲಸ ಕುಂಠಿತವಾಗಿದೆ. ತಕ್ಷಣ ಶಿರಸಿಗೆ ಖಾಯಂ ತಹಶೀಲ್ದಾರರನ್ನು ನೇಮಕಗೊಳಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ನೇತ್ರತ್ವದಲ್ಲಿ ಕಾರವಾರ ಚಲೋ ನಡೆಯಿತು. ಇಂದು ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಜನ ಜಮಾವಣೆಯಾಗಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡೆ ಉಷಾ ಹೆಗಡೆ, ಹೋರಾಟಗಾರ ಅನಂತ ಮೂರ್ತಿ ಹೆಗಡೆ ಸೇರಿದಂತೆ ಶಿರಸಿ ಬಿಜೆಪಿ ಗ್ರಾಮೀಣ ಭಾಗದ ಹಲವಾರುಮುಖಂಡರು, ಕಾರ್ಯಕರ್ತರು ಉಪಸ್ಥಿತ ರಿದ್ದರು.