Karunadu Studio

ಕರ್ನಾಟಕ

Viral Video: ಕೆನಡಾಕ್ಕಿಂತ ಭಾರತ ಬೆಸ್ಟ್ ಎಂದ ಅಲ್ಲಿನ ಕಂಟೆಂಟ್ ಕ್ರಿಯೇಟರ್; ಕಾರಣವೇನು ಗೊತ್ತಾ? – Kannada News | Why do content creators say India is better than Canada?


ಬೆಂಗಳೂರು: ಕೆನಡಾದ ಕಂಟೆಂಟ್ ಕ್ರಿಯೇಟರ್ ಒಬ್ಬ ವಿಭಿನ್ನ ಮಾರ್ಗವನ್ನು ಆರಿಸಿಕೊಳ್ಳುವ ಮೂಲಕ ಜೀವನ ನಡೆಸಲು ಭಾರತಕ್ಕೆ ಬಂದಿದ್ದಾನೆ. ಎಂಟು ವರ್ಷಗಳ ಹಿಂದೆ, ಕೆನಡಾದ ಕಂಟೆಂಟ್ ಕ್ರಿಯೇಟರ್ ಕ್ಯಾಲೆಬ್ ಫ್ರೈಸೆನ್, ಕೆನಡಾವನ್ನು ತೊರೆದು ಬೆಂಗಳೂರಿಗೆ ಬಂದಿದ್ದಾನೆ. ಅವನು ವೃತ್ತಿ ಜೀವನದಲ್ಲಿ ಗುರಿ ಸಾಧಿಸಲು ಭಾರತಕ್ಕೆ ಬರಲಿಲ್ಲ, ಬದಲಾಗಿ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಇಲ್ಲಿಗೆ ಬಂದಿದ್ದಾನೆ ಎನ್ನುವುದು ವಿಶೇಷ. ಇದೀಗ ಆತ ಕೆನಡಾ ಬಿಟ್ಟು ಭಾರತಕ್ಕೆ ಯಾಕೆ ಬಂದ ಕಾರಣದ ಬಗ್ಗೆ ಹೇಳಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ “ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ಚೇತರಿಸಿಕೊಳ್ಳಲು ಬಯಸಿದ್ದೆ. ಬೆಳವಣಿಗೆ ಅನಿವಾರ್ಯವಾಗಿದ್ದ ಸ್ಥಳದಲ್ಲಿ ನಾನು ಇರಬೇಕೆಂದು ಬಯಸಿದ್ದೆ. ಆ ಸ್ಥಳ ಭಾರತವಾಗಿತ್ತು. ಯಾಕೆಂದರೆ ಹೊಸ ಸಂಸ್ಕೃತಿ, ಹವಾಮಾನ ಮತ್ತು ಜೀವನ ವಿಧಾನಕ್ಕೆ ಹೊಂದಿಕೊಳ್ಳುವ ಅನಾನುಕೂಲತೆಯು ಅವನನ್ನು ಅಭಿವೃದ್ಧಿಯ ಕಡೆಗೆ ಸಾಗಿಸುತ್ತದೆ” ಎಂದು ಆತ ಹೇಳಿದ್ದಾನೆ. ಆತ ವಿಶೇಷವಾಗಿ ಯುವಜನರನ್ನು, ಬದಲಾವಣೆಗೆ ಸಾಧ್ಯವಾಗುವ ಪರಿಸರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ವಿನಂತಿಸಿಕೊಂಡಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ…

ಈ ಸುದ್ದಿಯನ್ನೂ ಓದಿ:Viral Video: ಅಬ್ಬಾ…ಎಂಥಾ ದುರಂತ! ನೋಡ ನೋಡ್ತಿದ್ದಂತೆ ಏರ್‌ ಬಲೂನ್‌ ಸ್ಫೋಟ- ಶಾಕಿಂಗ್‌ ವಿಡಿಯೊ ನೋಡಿ

ಮತ್ತೊಂದು ಘಟನೆಯಲ್ಲಿ, ದೆಹಲಿಯಿಂದ ಕೆನಡಾಕ್ಕೆ ವಲಸೆ ಬಂದ ವ್ಯಕ್ತಿಯೊಬ್ಬ ತನ್ನ ಬೇಸರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದನು. “ಭಾರತದಲ್ಲಿ ಉತ್ತಮ ಅವಕಾಶಗಳಿಲ್ಲ ಎಂದು ನಂಬುವ ಜನರು ವಿದೇಶಕ್ಕೆ ಬರುವ ಕನಸು ಕಾಣುವುದನ್ನು ನಾನು ನೋಡಿದ್ದೇನೆ. ಆದರೆ ನಾನು ನಿಮಗೆ ಅಲ್ಲಿನ ವಾಸ್ತವದ ಬಗ್ಗೆ ತಿಳಿಸುವುದೆನೆಂದರೆ ಅಲ್ಲಿನ ಜೀವನ ಕಣ್ಣಿಗೆ ಕಾಣುವಷ್ಟು ಸರಳವಾಗಿಲ್ಲ” ಎಂದಿದ್ದ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »