Karunadu Studio

ಕರ್ನಾಟಕ

Anil Shetty: ಸ್ಟಾರ್ಟ್‌ಅಪ್‌ ಉದ್ಯಮಿ, ಯುವ ರಾಜಕಾರಣಿ ಅನಿಲ್‌ ಶೆಟ್ಟಿ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ – Kannada News | Young politician Anil Shetty enters Sandalwood


ಬೆಂಗಳೂರು: ವಾಣಿಜ್ಯೋದ್ಯಮದಲ್ಲಿ ಹಲವು ಯಶಸ್ವಿ ಯೋಜನೆಗಳನ್ನು ರೂಪಿಸಿರುವ ಯುವ ಉದ್ಯಮಿ ಅನಿಲ್ ಶೆಟ್ಟಿ (Anil Shetty) ಇದೀಗ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೌದು, ಅನಿಲ್‌ ಶೆಟ್ಟಿ ಚಿತ್ರೋದ್ಯಮದಲ್ಲೂ ತಮ್ಮ ಛಾಪನ್ನು ಮೂಡಿಸಲು ಮುಂದಾಗಿದ್ದಾರೆ. ಸ್ಟಾರ್ಟ್‌ಅಪ್‌ ಉದ್ಯಮಿ ಆಗಿರುವುದರ ಜತೆಗೆ ರಾಜಕಾರಣದಲ್ಲಿಯೂ ಸಕ್ರಿಯರಾಗಿರುವ ಅನಿಲ್ ಬೆಂಗಳೂರು ನಗರದ ಯುವ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೀಗ ತಮ್ಮ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಅನಿಲ್ ಚಿತ್ರರಂಗಕ್ಕೆ ಸೇರುವ ತಮ್ಮ ಬಹಳ ದಿನಗಳ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ.

ತಮ್ಮ ಮೊದಲ ಚಿತ್ರದಲ್ಲೇ ಅನಿಲ್ ನಟನಾಗಿ ಮಾತ್ರವಲ್ಲದೆ ಬರಹಗಾರರಾಗಿಯೂ ಗುರುತಿಸಿಕೊಳ್ಳುತ್ತಿರುವುದು ವಿಶೇಷ.

ಚಲನಚಿತ್ರಗಳಲ್ಲಿ ಬಹು ಕಾಲದಿಂದ ಆಸಕ್ತಿ ಹೊಂದಿದ್ದ ಇವರಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ವ್ಯಕ್ತಿಯೊಬ್ಬರು ನಟನೆಯತ್ತ ಗಮನ ಹರಿಸುವಂತೆ ವರ್ಷಗಳ ಹಿಂದೆಯೇ ಪ್ರೇರೇಪಿಸಿದ್ದರು. ಈವರೆಗೂ ವ್ಯವಹಾರ, ರಾಜಕಾರಣ ಹಾಗೂ ಸಮಾಜ ಸೇವೆಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದ ಅನಿಲ್, ಇದೀಗ ಚಿತ್ರರಂಗದ ಕಡೆಗೆ ಗಮನವನ್ನು ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: X&Y Movie: ʼರಾಮಾ ರಾಮಾ ರೇʼ ಖ್ಯಾತಿಯ ಡಿ.ಸತ್ಯಪ್ರಕಾಶ್ ನಿರ್ದೇಶನ, ನಟನೆಯ ʼX&Yʼ ಚಿತ್ರ ಜೂ.26ರಂದು ರಿಲೀಸ್‌

ಸಿನಿಮಾ ಕ್ಷೇತ್ರದ ಜತೆಗೆ ಅನಿಲ್ ಶೆಟ್ಟಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು , ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರೊಂದಿಗೆ ಡ್ರಿಪ್ ಪ್ರಾಜೆಕ್ಟ್ ಮತ್ತು ಮೆಟಮನ್ ಎನ್ನುವ 2 ಫ್ಯಾಷನ್ ಬ್ರ್ಯಾಂಡ್‌ ಸ್ಥಾಪಿಸಿದ್ದಾರೆ. ಬೇರೆ ಅನೇಕ ಸ್ಟಾರ್ಟ್‌ಅಪ್‌ ಕಂಪನಿಗಳಿಗೆ ಬಂಡವಾಳ ಸಂಗ್ರಹಿಸುತ್ತಿದ್ದಾರೆ.

ಚಿತ್ರದ ಶೀರ್ಷಿಕೆ ಮತ್ತು ತಂಡದ ವಿವರಗಳು ಇನ್ನೂ ಬಹಿರಂಗವಾಗಿಲ್ಲದಿದ್ದರೂ, ಚಲನಚಿತ್ರರಂಗದ ಟಾಪ್ ಟ್ಯಾಲೆಂಟ್‌ಗಳ ಜತೆಗೆ ಕೆಲಸ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »