Karunadu Studio

ಕರ್ನಾಟಕ

Chikkaballapur News: ಅಪರಾಧ ಕೃತ್ಯಗಳನ್ನು ತಡೆಯಲು ಪೊಲೀಸ್ ಇಲಾಖೆಯೊಂದಿಗೆ ಆಟೋ ಚಾಲಕರು ಕೈ ಜೋಡಿಸಿ : ಎಸ್ಪಿ.ಕುಶಾಲ್ ಚೌಕ್ಸೆ – Kannada News | Auto drivers join hands with the police department to prevent criminal acts: SP Kushal Choukse


ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸದಾ ಕಾರ್ಯಶೀಲವಾಗಿರುತ್ತದೆ.ಇಲಾಖೆಯೊಟ್ಟಿಗೆ ಆಟೋಚಾಲಕರು ಕೂಡ ಕೈಜೋಡಿಸಿ ದಲ್ಲಿ ನೆರವಾಗಲಿದೆ.ಆಟೋಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾ ಸಾರ್ವಜನಿಕರ ಸೇವೆಯಲ್ಲಿ ತೊಡಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಟೋ ಚಾಲಕರ ಮತ್ತು ಮಾಲಿಕರ  ಸಂಘದ ವತಿಯಿಂದ ನಡೆದ ಸೌಲಭ್ಯಗಳ ವಿತರಣೆ ಹಾಗೂ ಆಟೋಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಆಟೋಚಾಲಕರು ಸಂಚಾರಿನಿಯಮಗಳನ್ನು ಪಾಲಿಸುವುದರಲ್ಲಿ ಮುಂಚೂಣಿಯಲ್ಲಿ ದ್ದಾರೆ. ವಾಹನ ನಿಲ್ದಾಣಗಳನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾ ಸಾರ್ವ ಜನಿಕರೊಂದಿಗೆ ಗೊಡವೆಗಳಿಲ್ಲದೆ ಸೌಜನ್ಯದಿಂದ ವರ್ತಿಸುತ್ತಿರುವುದಕ್ಕಾಗಿ ಇಲಾಖೆ ವತಿಯಿಂದ ಅಭಿನಂದಿಸುತ್ತೇನೆ ಎಂದರು.

ಇದನ್ನೂ ಓದಿ:Chikkaballapur News: ರಾಶ್ಚೇರುವು ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ದ ಸಲ್ಲಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆ

ಇದೇ ಮೊದಲ ಬಾರಿಗೆ ಆಟೊ ಚಾಲಕರ ಸಂಘದಿAದ ಚಾಲಕರಿಗೆ ಗುರುತಿನ ಚೀಟಿ ನೀಡುತ್ತಿರು ವುದು ಒಳ್ಳೆಯ ಬೆಳವಣಿಗೆ.ಚಾಲಕರ ಹಿಂಭಾಗದ ಸೀಟಿನಲ್ಲಿ ಚಾಲಕರ ಪೋಟೋ ಮಾಹಿತಿಯುಳ್ಳ ಕಾರ್ಡನ್ನು ಪ್ರಯಾಣಿಕರಿಗೆ ಕಾಣುವಂತೆ ಹಾಕಬೇಕು.ಕುತ್ತಿಗಯಲ್ಲಿ ಗುರುತಿನ ಚೀಟಿ ಧರಿಸುವು ದರಿಂದ ಸಾರ್ವಜನಿಕರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲಿದೆ ಎಂದರು.

ವೃತ್ತಿಯಲ್ಲಿ ಪ್ರಾಮಾಣಿಕತೆ ಮೆರೆಯುವ ಹಾಗೆ ನಿಮ್ಮ ಆರೋಗ್ಯ ಮತ್ತು ಕುಟುಂಬ ಮಕ್ಕಳ ಬಗ್ಗೆ ಕಾಳಜಿವಹಿಸಿ.ನಿಮ್ಮಂತೆ ಮಕ್ಕಳನ್ನೂ ಆಟೋ ಡ್ರೆöÊವರ್‌ಗಳಾಗಿ ಮಾಡುವ ಬದಲು ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ರೂಪಿಸಿ.ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಮಾತನಾಡಿ ಆಟೋ ಚಾಲಕರ ಮತ್ತು ಮಾಲಿಕರ ಸಂಘವು ಉತ್ತಮವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ.ಬೆವರನ್ನು ನಂಬಿ ಬದುಕುತ್ತಿರುವ ನೀವು ದಿನದ ೨೪ಗಂಟೆಯೂ ನಾಗರೀಕರಿಗೆ ಉತ್ತಮ ಸೇವೆ ನೀಡುವ ಸಾರಥಿ ಗಳಾಗಿದ್ದಿರಿ.ನಿಮ್ಮ ಸಂಘವು ಉಜ್ವಲವಾಗಿ ಬೆಳೆಯಲಿ, ಆಟೋ ಚಾಲಕರ ಕುಟುಂಬಗಳಿಗೆ ಆಸರೆ ಯಾಗಿ ನಿಲ್ಲಲಿ ಎನ್ನುವ ಮಹದೋದ್ದೇಶದಿಂದ ೧ ಲಕ್ಷ ರೂಪಾಯಿ ದೇಣಿಗೆ ನೀಡುತ್ತಿದ್ದೇನೆ ಎಂದು ಘೋಷಿಸಿದರು.

ಹಗಲು ರಾತ್ರಿ ಎನ್ನದೆ ಸಾರ್ವಜನಿಕ ಸೇವೆಯಲ್ಲಿರುವ ನೀವು ಆಕಸ್ಮಿಕವಾಗಿ ಅಕಾಲಿಕ ಮರಣಕ್ಕೆ ತುತ್ತಾರೆ, ನೊಂದ ಕುಟುಂಬಕ್ಕೆ ಕನಿಷ್ಟ ೧ ಲಕ್ಷ ಹಣವನ್ನು ನೀಡುವಷ್ಟರ ಮಟ್ಟಿಗೆ ಸಂಘಟನೆ ಯನ್ನು ಬಲಗೊಳಿಸುವ ಕೆಲಸ ಮಾಡಬೇಕು.ಅಕಾಲಿಕ ಮರಣಕ್ಕೆ ತುತ್ತಾಗುವ ಕುಟುಂಬದ ಮಕ್ಕಳ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದರು.

ನಿಮ್ಮ ವಾಹನಗಳಿಗೆ ವಿಮೆಯಿರಲೇಬೇಕು.ನೀವು ವಾಹನ ಚಾಲನಾ ಪರವಾನಗಿ ಪಡೆಯಲೇ ಬೇಕು.ಸಂಚಾರಿ ನಿಯಮಗಳನ್ನು ಪಾಲಿಸುವುದು ಕರ್ತವ್ಯ ಎಂದು ಭಾವಿಸಿ ಪ್ರಯಾಣಿಕರನ್ನು ಸುಕ್ಷಿತವಾಗಿ ಅವರವರ ಸ್ಥಳಗಳಿಗೆ ತಲುಪಿಸಿ, ನಿಮ್ಮ ಸಂಘದೊಟ್ಟಿಗೆ ಸದಾ ನಾನಿರುತ್ತೇನೆ  ಎಂದು ಅಭಯ ನೀಡಿದರು.

ಕಾರ್ಯಕ್ರಮದಲ್ಲಿ ಗುರುತಿನ ಚೀಟಿ, ವಿಮಾ ಸೌಲಭ್ಯ,ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಮಧುಕರ್,ಕರ್ನಾಟಕ ರಾಜ್ಯ ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್,ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನ ಅಜ್ಮಿ ಸಮಾಜ ಸೇವಕ ಹೋಟೆಲ್ ರಾಮಣ್ಣ,ಹಿರಿಯ ಆಟೋ ಮೆಕ್ಯಾನಿಕ್ ನಜೀರ್ ಮತ್ತಿತರರು ಮಾತನಾಡಿದರು.

ಈ ವೇಳೆ ಜಿಲ್ಲಾ ಆಟೋ ಚಾಲಕರ ಮತ್ತು ಮಾಲಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ಬಾಲಕೃಷ್ಣ, ಗೌರವಾಧ್ಯಕ್ಷ ಡಾಂಬು ಶ್ರೀನಿವಾಸ್, ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ, ಎಂ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಲೀಲ್, ಖಜಾಂಚಿ ಸಾದಿಕ್ ಪಾಷ, ಜಂಟಿ ಕಾರ್ಯದರ್ಶಿ ಆರ್.ಆನಂದ್, ವಿ.ಪ್ರಕಾಶ್, ತಾ.ಸಂಚಾಲ ಕೆ.ಮುನಿರಾಜು, ಎನ್.ಮಂಜುನಾಥ್, ಸದಸ್ಯರಾದ ಕೆಂಚೇಗೌಡ, ನಾರಾಯಣಸ್ವಾಮಿ, ರಮೇಶ್, ಸುಬಾನ್, ರಿಜ್ವಾನ್ ಅಹ್ಮದ್, ನರಸಿಂಹ ಮೂರ್ತಿ ಮತ್ತಿತರರು ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »