Karunadu Studio

ಕರ್ನಾಟಕ

Bhagya Lakshmi Serial: ಓಡಿ ಹೋಗಿ ಮದುವೆ ಆದ ಕಿಶನ್-ಪೂಜಾ?: ತಾಳಿ ಕಟ್ಟುವಾಗ ಬಂದಳು ಭಾಗ್ಯ – Kannada News | Bhagya Lakshmi Kannada Serial June 25th Episode Colors Kannada


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ರೋಚಕ ತಿರುವುದ ಪಡೆದುಕೊಂಡಿದೆ. ಪೂಜಾ-ಕಿಶನ್ ಮದುವೆ ಎಪಿಸೋಡ್ ಅನ್ನು ಸುಮ್ಮನೆ ಓಡಿಸುತ್ತಿದ್ದಾರೆ ಎಂದು ಹೇಳುತ್ತಿದ್ದ ಜನರಿಗೆ ಬಿಗ್ ಟ್ವಿಸ್ಟ್ ಕೊಡಲಾಗಿದೆ. ಯಾರಿಗೂ ಹೇಳದೆ ಪೂಜಾ-ಕಿಶನ್ ಓಡಿ ಬಂದಿದ್ದು, ದೇವಸ್ಥಾನದಲ್ಲಿ ಮದುವೆ ಆಗಲು ತಯಾರಾಗಿದ್ದಾರೆ. ಆದರೆ, ಇದೇ ಹೊತ್ತಿಗೆ ಹೇಗೋ ವಿಷಯ ತಿಳಿದು ಅಲ್ಲಿಗೆ ಭಾಗ್ಯ ಫ್ಯಾಮಿಲಿ ಬಂದಿದೆ. ಮತ್ತೊಂದೆಡೆ ಇದೆಲ್ಲ ಭಾಗ್ಯ ಪ್ಲ್ಯಾನ್ ಎಂದು ಆದೀಶ್ವರ್ ಮತ್ತು ಕನ್ನಿಕಾ ಭಾಗ್ಯ ಮೇಲೆ ಕೆಂಡ ಕಾರುತ್ತಿದ್ದಾರೆ.

ಈ ಹಿಂದೆ ನಾನಾ ಅಡೆತಡೆಗಳ ಮಧ್ಯೆ ಕೊನೆಗೆ ಹೇಗೋ ಪೂಜಾ-ಕಿಶನ್ ಎಂಗೇಜ್ಮೆಂಟ್ ನಡೆದು ಹೋಗಿತ್ತು. ಆದರೆ, ಮದುವೆ ಯಾವುದೇ ಕಾರಣಕ್ಕೂ ಆಗಲು ಬಿಡುವುದಿಲ್ಲ ಎಂದು ಆದೀಶ್ವರ್, ಮೀನಾಕ್ಷಿ ಮತ್ತು ಕನ್ನಿಕಾ ಟೊಂಕ ಕಟ್ಟಿ ನಿಂತಿದ್ದರು. ಎಂಗೇಜ್ಮೆಂಟ್ ಹೇಗೋ ಆಯ್ತು ಆದ್ರೆ ಮದುವೆ ಮಾತ್ರ ಯಾವುದೇ ಕಾರಣಕ್ಕೆ ಆಗಲು ಬಿಡಲ್ಲ ಎಂದು ಮೀನಾಕ್ಷಿ ಉಪವಾಸ ಕೂತಿದ್ದಳು. ಆದರೆ, ಕಿಶನ್ ಇದು ಯಾವುದನ್ನು ಲೆಕ್ಕಿಸದೆ ಲೆಟರ್ ಬರೆದಿಟ್ಟು ಮದುವೆ ಆಗಲು ಹೊರಟಿದ್ದಾನೆ.

ನಮ್ಮ ಮನೆಗೆ ಪೂಜಾನೆ ಸರಿಯಾದ ಸೊಸೆ. ಈ ಸಂಬಂಧ ಸರಿ ಇಲ್ಲ ಅನ್ನೋದನ್ನು ಪ್ರೂವ್ ಮಾಡಿ.. ಅದು ಪ್ರೂವ್ ಆದ್ರೆ ಆ ಕ್ಷಣವೇ ಮದುವೆ ನಿಲ್ಲಿಸುತ್ತೇನೆ ಎಂದು ರಾಮ್​ದಾಸ್ ಹೇಳಿದ್ದಾರೆ. ಆದ್ರೆ, ಭಾಗ್ಯ ಮನೆಯವರು ಕೆಟ್ಟವರೆಂದು ಪ್ರೂವ್ ಮಾಡಲು ಇವರ ಬಳಿ ಒಂದೇ ಒಂದು ಸಾಕ್ಷಿ ಇರಲಿಲ್ಲ. ಇದಕ್ಕಾಗಿ ಬೇರೆ ದಾರಿಯಲ್ಲದೆ ಮೀನಾಕ್ಷಿ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಶುರುಮಾಡಿದ್ದಳು. ಕಿಶನ್ ಬಳಿ ಎಮೋಷನ್ ಡ್ರಾಮಾ ಆಡಿ ಈ ಮದುವೆ ಆಗಬಾರದು ಎಂದು ಪೀಡಿಸುತ್ತಿದ್ದರು. ಹೀಗಾಗಿ ಕಿಶನ್ ಈ ನಿರ್ಧಾರ ತೆಗೆದುಕೊಂಡಿದ್ದಾನೆ.

ಮತ್ತೊಂದೆಡೆ ಅತ್ತ ಭಾಗ್ಯ ಮನೆಯಲ್ಲೂ ಈ ಮದುವೆ ಬೇಡ ಎಂದು ಭಾಗ್ಯ ತಂದೆ ಪಟ್ಟುಹಿಡಿದು ನಿಂತಿದ್ದರು. ಆದರೆ, ಭಾಗ್ಯ ಮನವೊಲಿಸಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಮದುವೆ ಆಗಿ ನನ್ನ ಬಾಳು ಹೇಗೋ ಹಾಳಾಯಿತು.. ಪೂಜಾ ಆದ್ರು ಅವಳು ಅಂದುಕೊಂಡ, ಇಷ್ಟಪಟ್ಟ ಹುಡುಗನ ಜೊತೆ ಮದುವೆ ಆಗಲಿ ಎಂದು ಹೇಳಿದಾಗ ಭಾಗ್ಯ ತಂದೆ ಕೊನೆಗೆ ಒಪ್ಪಿಕೊಂಡಿದ್ದಾರೆ. ಆದರೆ, ಈ ಹೊತ್ತಿಗೆ ಪೂಜಾಗೆ ಕಿಶನ್ ಬಂದಿದ್ದು, ಅರ್ಜೆಂಟ್ ಆಗಿ ಒಂದು ಜಾಗಕ್ಕೆ ಬಾ ಎಂದು ಹೇಳಿದ್ದಾನೆ.

ಕಿಶನ್ ಮಾತು ಕೇಳಿ ಪೂಜಾ ಬಂದಿದ್ದಾಳೆ. ಪೂಜಾಳನ್ನು ಕಿಶನ್ ಕಾರಿನಲ್ಲಿ ಕೂರಿಸಿ ನಿನಗೊಂದು ಸರ್​ಪ್ರೈಸ್ ಇದೆ ಎಂದು ಹೇಳಿ ಮೊದಲಿಗೆ ಸೀರೆ ಅಂಗಡಿಗೆ ಕರೆದುಕೊಂಡು ಹೋಗುತ್ತಾನೆ. ಇಲ್ಲಿ ನಿನಗೆ ಇಷ್ಟವಾದ ಮದುವೆ ಸೀರೆ ಆಯ್ಕೆ ಮಾಡು ಎಂದು ಹೇಳುತ್ತಾನೆ. ಪೂಜಾಗೆ ಏನೆಂದು ಅರ್ಥವಾಗುವುದಿಲ್ಲ.. ಈಗ ಯಾಕೆ ಸಡನ್ ಆಗಿ ಮದುವೆ ಸೀರೆ? ಎಂದು ಪ್ರಶ್ನಿಸುತ್ತಾಳೆ. ಇದಕ್ಕೆ ಹೇಗೋ ಮ್ಯಾನೇಜ್ ಮಾಡಿದ ಕಿಶನ್, ಈ ಸೀರೆಯನ್ನು ಉಟ್ಟುಕೊಂಡು ಬಾ ಎಂದು ಹೇಳುತ್ತಾನೆ. ಬಳಿಕ ನೇರವಾಗಿ ಆಕೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ.

ಕಿಶನ್ ಕೂಡ ಮದುವೆ ಡ್ರೆಸ್​ನಲ್ಲಿ ರೆಡಿಯಾಗಿ ಬರುತ್ತಾನೆ. ಆದರೆ, ಪೂಜಾಳಿಗೆ ಇದೆಲ್ಲ ಏನೆಂದು ಅರ್ಥನೇ ಆಗೋದಿಲ್ಲ.. ಕೊನೆಯಲ್ಲಿ ಕೇಳಿದಾಗ, ಇವತ್ತು ನಾನು ಮತ್ತು ನೀನು ಮದುವೆ ಆಗುತ್ತಿದ್ದೇವೆ ಎಂದು ಹೇಳುತ್ತಾನೆ. ಪೂಜಾಳಿಗೆ ಇದು ಸರಿ ಕಾಣದಿದ್ದರೂ ಇಬ್ಬರೂ ಹಾಯ ಬದಲಾಯಿಸುತ್ತಾರೆ.. ಕಿಶನ್ ತಾಳಿ ಕಟ್ಟಲು ಮುಂದಾಗುತ್ತಾನೆ. ಆಗ ಅಲ್ಲಿಗೆ ಭಾಗ್ಯ ಕುಟುಂಬ ಬಂದಿದೆ. ಜೊತೆಗೆ ಅದೀಶ್ವರ್, ಕನ್ನಿಕಾ ಅವರೆಲ್ಲರೂ ಬಂದಿದ್ದಾರೆ,

ಅತ್ತ ಆದೀ ಭಾಗ್ಯ ಮೇಲೆ ಸಿಟ್ಟಾಗಿದ್ದಾನೆ. ಕಿಶನ್ ಹಾಗೂ ಪೂಜಾ ದೇವಸ್ಥಾನದಲ್ಲಿ ಯಾರಿಗೂ ಗೊತ್ತಾಗದಂತೆ ಮದುವೆ ಮಾಡುವ ಪ್ಲ್ಯಾನ್ ಭಾಗ್ಯಾಳದ್ದೇ ಎಂದು ಆದೀ ಅಂದುಕೊಂಡಿದ್ದಾನೆ. ಕೊನೆಗೂ ನಿಮ್ಮ ಥರ್ಡ್ ಕ್ಲಾಸ್ ಬುದ್ದಿ ತೋರಿಸಿಬಿಟ್ರಲ್ಲ.. ಕಿಶನ್ ಇಲ್ಲಿ ಲೆಟರ್ ಬರೆದಿಟ್ಟು ಮದುವೆ ಆಗಲು ಹೊರಟಿದ್ದಾನೆ.. ಇದೆಲ್ಲ ನಿನ್ದೆ ಪ್ಲ್ಯಾನ್ ಅಂತ ಗೊತ್ತು ಮರಿಯಾದೆಯಿಂದ ಕಿಶನ್ ಎಲ್ಲಿ ಅಂತ ಹೇಳು ಎಂದಿದ್ದಾನೆ. ಆದ್ರೆ, ಭಾಗ್ಯಗೆ ಈ ವಿಚಾರ ಗೊತ್ತಿರುವುದಿಲ್ಲ.. ನನಗೂ ಈಗಲೇ ನೀವು ಹೇಳಿದಾಗ ಗೊತ್ತಾಗಿದ್ದು ಎಂದು ಹೇಳಿದರೂ ಆದೀ ನಂಬಲು ರೆಡಿ ಇರುವುದಿಲ್ಲ..

ಸದ್ಯ ಕಿಶನ್ ತಾಳಿ ಕಟ್ಟುವ ಸಂದರ್ಭ ಅಲ್ಲಿಗೆ ಎರಡೂ ಮನೆಯವರು ಬಂದಿದ್ದಾರೆ. ಕಿಶನ್ ಪೂಜಾ ಕತ್ತಿಗೆ ನಿಜಕ್ಕೂ ತಾಳಿ ಕಟ್ಟುತ್ತಾನ ಅಥವಾ ಭಾಗ್ಯ ಕನ್ವೆನ್ಸ್ ಮಾಡುತ್ತಾಳ?, ಎಲ್ಲರ ಸಮ್ಮುಖದಲ್ಲೇ ಮದುವೆ ಆಗೋಣ ಎಂದು ಹೇಳುತ್ತಾಳ ಅತ್ತ ಆದೀಶ್ವರ್ ಏನು ಹೇಳುತ್ತಾನೆ ಎಂಬುದೆಲ್ಲ ಕುತೂಹಲ ಕೆರಳಿಸಿದ್ದು, ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

Ugramm Manju: ಬಿಗ್ ಬಾಸ್​ನಿಂದ ಹೊರಬಂದ ಬಳಿಕ ನಡೆದ ಆ ಘಟನೆ ನೆನೆದು ಕಣ್ಣೀರಿಟ್ಟ ಉಗ್ರಂ ಮಂಜು



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »