Karunadu Studio

ಕರ್ನಾಟಕ

Stock Market: ಸೆನ್ಸೆಕ್ಸ್ 700 ಅಂಕ ಜಿಗಿತ: ಎಚ್‌ಡಿಬಿ ಫೈನಾನ್ಷಿಯಲ್‌ ಸರ್ವಿಸಸ್‌ 12,000 ಕೋಟಿ ಐಪಿಒ ಶುರು – Kannada News | Stock Market Sensex jumps 700 points


ಕೇಶವ ಪ್ರಸಾದ್‌ ಬಿ.

ಮುಂಬೈ: ಬುಧವಾರ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 700 ಅಂಕಗಳ ಏರಿಕೆ ದಾಖಲಿಸಿ 82,737ಕ್ಕೆ ತಲುಪಿತು. ನಿಫ್ಟಿ 200 ಅಂಕ ಏರಿಕೆಯಾಗಿ 25,244ಕ್ಕೆ ವೃದ್ಧಿಸಿತು. ಐಟಿ, ಆಟೊ ಮೊಬೈಲ್‌, ಮಹೀಂದ್ರಾ & ಮಹೀಂದ್ರಾ, ಇನ್ಫೋಸಿಸ್ ಸ್ಟಾಕ್ಸ್‌ ಏರಿಕೆ ದಾಖಲಿಸಿತು. ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ – ಇರಾನ್‌ ಕದನ ವಿರಾಮದ ಬಳಿಕ ಬಿಕ್ಕಟ್ಟು ಉಪಶಮನವಾಗುತ್ತಿರುವುದು ಜಾಗತಿಕ ಷೇರು ಮಾರುಕಟ್ಟೆಯ (Stock Market)‌ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಎಲ್ಲ 13 ಸೆಕ್ಟರ್‌ಗಳು ಲಾಭ ಗಳಿಸಿದವು. ಸ್ಮಾಲ್‌ ಕ್ಯಾಪ್ಸ್‌ 0.6% ಏರಿದರೆ, ಮಿಡ್‌ ಕ್ಯಾಪ್ಸ್‌ 0.4% ಲಾಭ ಪಡೆಯಿತು. ಕದನ ವಿರಾಮವು ಜಾಗತಿಕವಾಗಿ ಆಶಾದಾಯಕವಾಗಿದ್ದು, MSCI world Index ಹೊಸ ಎತ್ತರಕ್ಕೇರಿತು. ಏಷ್ಯನ್‌ ಮತ್ತು ಎಮರ್ಜಿಂಗ್‌ ಮಾರ್ಕೆಟ್‌ನಲ್ಲಿ ಸ್ಟಾಕ್ಸ್‌ 2022ರ ಬಳಿಕ ಹೊಸ ಎತ್ತರಕ್ಕೇರಿತು.

ಮಾರ್ಕೆಟ್‌ ಹೈ ಲೈಟ್ಸ್

  • ಇಂಡಿಯಾ ಮಾರ್ಟ್‌ ಷೇರಿಗೆ 3,800/- ಟಾರ್ಗೆಟ್‌ ದರ ಸಿಕ್ಕಿದ್ದು, ಷೇರು ದರ 6% ಏರಿಕೆ
  • MCX ಷೇರು 5% ಏರಿಕೆಯಾಗಿ ಆಲ್‌ ಟೈಮ್‌ ಹೈ ದಾಖಲಿಸಿತು.

ಇಂದು ಲಾಭ ಗಳಿಸಿದ ಐಟಿ (IT) ಸ್ಟಾಕ್ಸ್‌

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌: 3,415/-

ಇನ್ಫೋಸಿಸ್‌: 1,604/-

ಎಲ್‌ಟಿಐಮೈಂಡ್‌ ಟ್ರೀ: 5,451/-

ಟೆಕ್‌ ಮಹೀಂದ್ರಾ: 1,702/-

ಎಂಫಸಿಸ್‌: 2,723/-

ರಿಲಯನ್ಸ್‌ ಇನ್‌ ಫ್ರಾ ಷೇರಿನ ದರದಲ್ಲಿ ಇಂದು 5% ಏರಿಕೆಯಾಗಿದ್ದು, ಅಪ್ಪರ್‌ ಸರ್ಕ್ಯೂಟ್‌ ತಲುಪಿತು. ಜರ್ಮನಿಯ ಡಿಫೆನ್ಸ್‌ ಕಂಪನಿಯಿಂದ 600 ಕೋಟಿ ರುಪಾಯಿಗಳ ಗುತ್ತಿಗೆ ಲಭಿಸಿರುವುದು ಇದಕ್ಕೆ ಕಾರಣ.

ಇನ್ಫಿಬೀಮ್‌ ಅವೆನ್ಯೂಸ್‌ ಷೇರಿನ ದರದಲ್ಲಿ 15% ಏರಿಕೆ ದಾಖಲಾಯಿತು. ತನ್ನ Rights Issue ಸಲುವಾಗಿ ಸೆಬಿಗೆ ದಾಖಲೆಗಳನ್ನು ಸಲ್ಲಿಸಿರುವುದು ಇದಕ್ಕೆ ಕಾರಣ.

HDFC Bankನ ಯುನಿಟ್‌ ಆಗಿರುವ HDB ಫೈನಾನ್ಷಿಯಲ್‌ ಸರ್ವೀಸ್‌ನ 12,500 ಕೋಟಿ ರುಪಾಯಿಗಳ ಮೆಗಾ ಐಪಿಒ ಆರಂಭವಾಗಿದೆ. ಇದರ GMP 74 ರುಪಾಯಿ ಆಗಿದ್ದು, ಪ್ರೀಮಿಯಂಗಿಂತ 10% ಹೆಚ್ಚಳ ದಾಖಲಿಸಿದೆ. ಜೂನ್‌ 27ರ ತನಕ ಈ ಐಪಿಒ ನಡೆಯಲಿದೆ. ಷೇರಿನ ಐಪಿಒ ಪ್ರೈಸ್‌ ಬ್ಯಾಂಡ್‌ 700-740/- ಆಗಿದೆ. HDB ಫೈನಾನ್ಷಿಯಲ್‌ ಸರ್ವೀಸ್‌ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದೆ.

HDB Financial Services IPO

ಬಿಡ್ಡಿಂಗ್‌ ಅವಧಿ: ಜೂನ್‌ 25-27

ಕನಿಷ್ಠ ಹೂಡಿಕೆ ಎಷ್ಟು: 14,000/-

ದರ ಶ್ರೇಣಿ: 700-740/-

IPO ಗಾತ್ರ: 12,500 ಕೋಟಿ ರುಪಾಯಿ

ಲಾಟ್‌ ಸೈಜ್:‌ 20 ಷೇರು

HDB Financial 1 ಲಕ್ಷದ 6 ಸಾವಿರ ಕೋಟಿ ರುಪಾಯಿ ಮೌಲ್ಯದ ಸಾಲವನ್ನು ವಿತರಿಸಿದ್ದು, 2024-25ರಲ್ಲಿ 2,176 ಕೋಟಿ ರುಪಾಯಿ ನಿವ್ವಳ ಲಾಭ ದಾಖಲಿಸಿದೆ. 2023-24ರಲ್ಲಿ 1,359 ಕೋಟಿ ರುಪಾಯಿ ಲಾಭ ಗಳಿಸಿತ್ತು. ಅಂದರೆ ಗಣನೀಯ ಏರಿಕೆಯಾಗಿರುವುದನ್ನು ಗಮನಿಸಬಹುದು. HDB ಫೈನಾನ್ಷಿಯಲ್‌ ಸರ್ವೀಸ್‌ನ gross non-performing assets (GNPA) 2.49% ಆಗಿದ್ದು, ನಿವ್ವಳ NPA 1.3% ಆಗಿದೆ. ಇದು ಸಂಸ್ಥೆಯ ಹೆಲ್ತಿ ಅಸೆಟ್‌ ಕ್ವಾಲಿಟಿಯನ್ನು ಬಿಂಬಿಸಿದೆ. HDB ಫೈನಾನ್ಷಿಯಲ್‌ ಸರ್ವೀಸ್‌ 1,200 ನಗರಗಳಲ್ಲಿ 1,700 ಬ್ರ್ಯಾಂಚ್‌ಗಳನ್ನು ಹೊಂದಿದ್ದು, 1 ಕೋಟಿ 90 ಲಕ್ಷ ಗ್ರಾಹಕರನ್ನು ಒಳಗೊಂಡಿದೆ. ಪರ್ಸನಲ್‌ ಲೋನ್‌, ಗೋಲ್ಡ್‌ ಲೋನ್‌, ಸಣ್ಣ ಉದ್ದಿಮೆಯ ಸಾಲವನ್ನು ಜನರಿಗೆ ವಿತರಿಸುತ್ತದೆ.

ಬ್ರೋಕರೇಜ್‌ ಹೌಸ್‌ಗಳು ಈ ಐಪಿಒಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ. ಎಸ್‌ಬಿಐ ಸೆಕ್ಯುರಿಟೀಸ್‌ , ವೆಂಚುರಾ ಸೆಕ್ಯುರಿಟೀಸ್‌ ಮತ್ತು ಆನಂದ್‌ ರಾತಿ ಬ್ರೋಕರೇಜ್‌ ಹೌಸ್‌ಗಳು “ಸಬ್‌ ಸ್ಕ್ರೈಬ್‌ʼ ಕಾಲ್ಸ್‌ಗಳನ್ನು ಕೊಟ್ಟಿವೆ. HDB ಫೈನಾನ್ಷಿಯಲ್‌ ಸರ್ವೀಸ್‌ನ ಸ್ಟ್ರಾಂಗ್‌ ಫಂಡಮೆಂಟಲ್ಸ್‌, ಉತ್ತಮ ಅಸೆಟ್‌ ಕ್ವಾಲಿಟಿ, ದೀರ್ಘಾವಧಿಯ ಬೆಳವಣಿಗೆಯ ಮುನ್ನೋಟವನ್ನು ಸಕಾರಾತ್ಮಕವಾಗಿ ಪರಿಗಣಿಸಿವೆ. ಜುಲೈ ಮೊದಲ ವಾರದಲ್ಲಿ ಷೇರು NSE ಮತ್ತು BSE ನಲ್ಲಿ ಲಿಸ್ಟ್‌ ಆಗುವ ಸಾಧ್ಯತೆ ಇದೆ.

ಸುದ್ದಿಯಲ್ಲಿರುವ ಕಂಪನಿಗಳು

ರಿಲಯನ್ಸ್‌ ಇಂಡಸ್ಟ್ರೀಸ್‌ ಗ್ರೀನ್‌ ಎನರ್ಜಿಯನ್ನು ಉತ್ಪಾದಿಸಲು, ವಿಶ್ವದಲ್ಲೇ ಅತಿ ದೊಡ್ಡ ಇಕೊ ಸಿಸ್ಟಮ್‌ ಅನ್ನು ನಿರ್ಮಾಣ ಮಾಡಲಿದೆ ಎಂದು ಗ್ರೂಪ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ತಿಳಿಸಿದ್ದಾರೆ.

  • ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಅಥವಾ NSE, ಜುಲೈ ಅಂತ್ಯದ ವೇಳೆಗೆ ತನ್ನ IPO ಸಂಬಂಧ ಪೇಪರ್‌ಗಳನ್ನು ಸೆಬಿಗೆ ಸಲ್ಲಿಸುವ ನಿರೀಕ್ಷೆ ಇದೆ.
  • ಸೆಬಿಯು ಜುಲೈನಲ್ಲಿ ಎನ್‌ಎಸ್‌ಇಯ ಐಪಿಒಗೆ ತನ್ನ ಅನುಮೋದನೆಯನ್ನು ನೀಡುವ ನಿರೀಕ್ಷೆ ಇದೆ.

ಟಾಟಾ ಮೋಟಾರ್ಸ್‌ನ ಅಧೀನ ಸಂಸ್ಥೆಯಾದ ಬ್ರಿಟಿಷ್‌ ಲಕ್ಸುರಿ ಕಾರುಗಳ ಉತ್ಪಾದಕ ಜಾಗ್ವಾರ್‌ ಲ್ಯಾಂಡ್‌ ರೋವರ್‌, ತಮಿಳುನಾಡಿನಲ್ಲಿ ತನ್ನ ಹೊಸ ಘಟಕದಲ್ಲಿ 2026ರಿಂದ ಕಾರುಗಳ ಜೋಡಣೆಯ ಕೆಲಸಗಳನ್ನು ಅಥವಾ ಅಸೆಂಬ್ಲಿಂಗ್‌ ಅನ್ನು ಆರಂಭಿಸಲಿದೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 9,000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ. ಭವಿಷ್ಯದಲ್ಲಿ ಭಾರತದಲ್ಲೇ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಕಾರುಗಳು ಉತ್ಪಾದನೆಯಾಗಲಿವೆ.

ಅದಾನಿ ಟೋಟಲ್‌ ಗ್ಯಾಸ್‌ ಮತ್ತು ಜಿಯೊ-ಬಿಪಿ ಕಂಪನಿ ರಿಟೇಲ್‌ ವಲಯದಲ್ಲಿ ಇಂಧನ ವಿತರಣೆಗೆ ಜಂಟಿ ಒಪ್ಪಂದ ಮಾಡಿಕೊಂಡಿವೆ.‌

ಇಂದು 52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿದ ಷೇರುಗಳ ಡಿಟೇಲ್ಸ್

‌ಮಲ್ಟಿ ಕಮಾಡಿಟಿ ಎಕ್ಸ್‌ ಚೇಂಜ್‌ ಆಫ್‌ ಇಂಡಿಯಾ: 8664/-

ಜಿಇ ವೆರ್ನೊವಾ ಟಿ&ಡಿ ಇಂಡಿಯಾ: 2,394/-

ಅಸ್ಟರ್‌ ಡಿಎಂ ಹೆಲ್ತ್‌ಕೇರ್:‌ 591/-

ನಾರಾಯಣ ಹೃದಯಾಲಯ : 2,052/-

ಫೋರ್ಟಿಸ್‌ ಹೆಲ್ತ್‌ ಕೇರ್:‌ 779/-

ಈ ಸುದ್ದಿಯನ್ನೂ ಓದಿ | SBI Recruitment 2025: ಬ್ಯಾಂಕ್‌ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್‌; ಎಸ್‌ಬಿಐಯಲ್ಲಿ ಖಾಲಿ ಇದೆ 541 ಪ್ರೊಬೆಷನರಿ ಆಫೀಸರ್‌ ಹುದ್ದೆ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »