Karunadu Studio

ಕರ್ನಾಟಕ

Emergency 1975: ತುರ್ತು ಪರಿಸ್ಥಿತಿ ವಿರೋಧಿಸಿದ್ದ ಇಂದಿರಾ ಗಾಂಧಿ ಸಂಬಂಧಿ – Kannada News | Emergency 1975: Indira Gandhi’s relatives suffered during the Emergency!


ನವದೆಹಲಿ: ಇಂದಿರಾ ಗಾಂಧಿ (Indira Gandhi) ಪ್ರಧಾನಿಯಾಗಿದ್ದಾಗ 1975ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಸಮಯದಲ್ಲಿ (Emergency 1975) ಅವರ ಸೋದರ ಸಂಬಂಧಿಯೊಬ್ಬರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಅವರಿಗೆ ಬಂಧನದ ಭೀತಿಯು ಎದುರಾಗಿತ್ತು. ಆದರೂ ಅವೆಲ್ಲವನ್ನೂ ಅವರು ದಿಟ್ಟವಾಗಿ ಎದುರಿಸಿದರು. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಸಮಯದಲ್ಲಿ ನೆಹರೂ ಅವರ ಸೋದರ ಸೊಸೆ ನಯನತಾರಾ ಸೆಹಗಲ್ (Nayantara Sahgal) ಸರ್ಕಾರವನ್ನು ಟೀಕಿಸಿದ್ದರು. ಇದರಿಂದ ಅವರು ಸಾಕಷ್ಟು ತೊಂದರೆಗೆ ಸಿಕ್ಕಿಹಾಕಿಕೊಂಡರು. ಆದರೂ ಅವರು ಇಂದಿರಾ ಗಾಂಧಿ ಅವರ ಸರ್ವಾಧಿಕಾರ ಧೋರಣೆಯ ವಿರುದ್ಧ ಮಾತನಾಡುವುದನ್ನು ಮುಂದುವರಿಸಿದರು.

1975ರ ತುರ್ತು ಪರಿಸ್ಥಿತಿಯ ಸಮಯವದು. ಇಂದಿರಾ ಗಾಂಧಿ ಅವರ ಸರ್ವಾಧಿಕಾರ ಧೋರಣೆಯ ವಿರುದ್ಧ ಪ್ರಸಿದ್ಧ ಲೇಖಕಿ ಮತ್ತು ಜವಾಹರಲಾಲ್ ನೆಹರೂ ಅವರ ಸೋದರ ಸೊಸೆ ನಯನತಾರಾ ಸೆಹಗಲ್ ದಿಟ್ಟವಾಗಿ ಮಾತನಾಡಿದರು. ಇದಕ್ಕಾಗಿ ಅವರು ಸೆನ್ಸಾರ್ ಶಿಪ್, ಸಾಮಾಜಿಕ ಪ್ರತ್ಯೇಕತೆ ಮತ್ತು ರಾಜಕೀಯ ಬೆದರಿಕೆಯನ್ನು ಎದುರಿಸಬೇಕಾಯಿತು.

ಸಂಜಯ್ ಗಾಂಧಿ ಅವರ ಚಿಕ್ಕಮ್ಮ ಮತ್ತು ಭಾರತದ ಮೊದಲ ಮಹಿಳಾ ರಾಯಭಾರಿಯಾಗಿದ್ದ ವಿಜಯಲಕ್ಷ್ಮೀ ಪಂಡಿತ್ ಅವರ ಮಗಳಾದ ಸೆಹಗಲ್ 1975ರ ಜೂನ್‌ನಲ್ಲಿ ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಿದ್ದು ಸೈದ್ಧಾಂತಿಕ ಘರ್ಷಣೆಗೆ ಕಾರಣವಾಗಿತ್ತು. ಮಾತ್ರವಲ್ಲದೆ ವೈಯಕ್ತಿಕ ದ್ವೇಷಕ್ಕೂ ಕಾರಣವಾಗಿತ್ತು.

ಇದ್ದಕ್ಕಿದ್ದಂತೆ ಅವರಿಗೆ ಸಂಪಾದಕೀಯ ಮನೆಯ ಬಾಗಿಲುಗಳು ಮುಚ್ಚಿದವು. ಅವರ ಅಂಕಣಗಳನ್ನು ಯಾಚಿಸುತ್ತಿದ್ದ ಸಂಪಾದಕರು ಅವರ ಕರೆಗಳಿಗೆ ಉತ್ತರಿಸಲಿಲ್ಲ. ಈ ಹಿಂದೆ ಅವರ ‘ದಿಸ್ ಟೈಮ್ ಆಫ್ ಮಾರ್ನಿಂಗ್’ ಕಾದಂಬರಿಯನ್ನು ಚಲನಚಿತ್ರವಾಗಿ ಮಾಡಲು ಆಸಕ್ತಿ ತೋರಿದ್ದ ವಿದೇಶಿ ಚಲನಚಿತ್ರ ನಿರ್ಮಾಪಕಿಯೊಬ್ಬರು ಸಹ ಮೌನವಾಗಿದ್ದು ಯೋಜನೆಯಿಂದ ಹಿಂದೆ ಸರಿದರು. ಸೆಹಗಲ್ ಅವರೊಂದಿಗಿನ ಸಂಬಂಧದಿಂದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬಾಗಿಲು ತಮಗೆ ಮುಚ್ಚಬಹುದು ಎನ್ನುವ ಆತಂಕದಿಂದ ಹೆಚ್ಚಿನವರು ಅವರೊಂದಿಗಿನ ಸಂಬಂಧ ಕಡಿತಗೊಳಿಸಿದರು.

ಇದು ಒಂದು ರೀತಿಯಲ್ಲಿ ಸೆಹಗಲ್ ಅವರಿಗೆ ಭಯದ ವಾತಾವರಣವನ್ನು ಉಂಟು ಮಾಡಿತ್ತು. ತಮ್ಮ ಫೋನ್ ಅನ್ನು ಕದ್ದಾಲಿಸಲಾಗುತ್ತಿದೆ ಮತ್ತು ಚಲನವಲನಗಳ ಮೇಲೆ ಕಣ್ಣಿಡಲಾಗಿದೆ ಎನ್ನುವ ಅನುಮಾನ ಅವರಿಗೆ ಉಂಟಾಗಿತ್ತು.

ರಾಜಕೀಯದಿಂದ ದೂರವಿರಲು ಸೆಹಗಲ್ ಅವರ ತಾಯಿಯೇ ಒತ್ತಾಯಿಸಿದರು. ಆದರೂ ಸೆಹಗಲ್ ಮೌನವಾಗಿರಲಿಲ್ಲ. 1975ರ ಡಿಸೆಂಬರ್‌ನಲ್ಲಿ ಸರ್ಕಾರವನ್ನು ಟೀಕಿಸಿ ಕರಪತ್ರವನ್ನು ಬರೆದರು. ಇದರಿಂದ ಸಾವಿರಾರು ಜನರನ್ನು ಆಂತರಿಕ ಭದ್ರತಾ ನಿರ್ವಹಣೆ ಕಾಯ್ದೆ (MISA) ಅಡಿಯಲ್ಲಿ ಬಂಧಿಸಲಾಯಿತು. ಸೆಹಗಲ್ ಬಂಧನದಿಂದ ತಪ್ಪಿಸಿಕೊಂಡರೂ ಅವರ ಆಪ್ತರಿಗೆ ಬೆದರಿಕೆಗಳು ಬರಲಾರಂಭಿಸಿತು.

ಇದನ್ನೂ ಓದಿ: Pralhad Joshi: ಬಾಹ್ಯಾಕಾಶಕ್ಕೆ ಪಸರಿಸಿತು ವಿದ್ಯಾಕಾಶಿ ವಿಜ್ಞಾನ ಸ್ಫೂರ್ತಿ: ಪ್ರಲ್ಹಾದ್‌ ಜೋಶಿ ಸಂತಸ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರೇ ಅವರು ನಯನತಾರಾ ಸೆಹಗಲ್ ಅವರನ್ನು ಯಾವುದೇ ಸಮಯದಲ್ಲಿ ಬೇಕಾದರೂ ಬಂಧಿಸಬಹುದು ಎಂದು ಸೆಹಗಲ್ ಅವರ ಸಹೋದರಿಗೆ ತಿಳಿಸಿದ್ದರು. ಆದರೂ ಸೆಹಗಲ್ ಧೈರ್ಯದಿಂದ ಇದ್ದರು.

ಈ ಬಳಿಕ ಸೆಹಗಲ್ ವಿರುದ್ದದ ಧ್ವನಿಗಳು ಹೆಚ್ಚಾಯಿತು. ತಮ್ಮವರಿಂದಲೇ ಆದ ದ್ರೋಹ ಸೆಹಗಲ್ ಅವರಿಗೆ ನೋವುಂಟು ಮಾಡಿತ್ತು. ತುರ್ತು ಪರಿಸ್ಥಿತಿಯ ನಿರ್ಧಾರವು ಶಾಂತ ಕ್ರೌರ್ಯವನ್ನು ಪ್ರದರ್ಶಿಸಿತ್ತು. ನಯನತಾರಾ ಸೆಹಗಲ್ ಅವರಂತಹ ಅನೇಕರಿಗೆ ಭಾವನಾತ್ಮಕವಾಗಿಯೂ ಘಾಸಿಗೊಳಿಸಿತ್ತು. ಆದರೂ ಸೆಹಗಲ್ ತಮ್ಮ ಸಂಕಲ್ಪವನ್ನು ದೃಢಗೊಳಿಸಿ ತಮ್ಮ ಅಭಿಪ್ರಾಯಗಳನ್ನು ಬರೆದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »