Karunadu Studio

ಕರ್ನಾಟಕ

ಜನಪ್ರತಿನಿಧಿಯಾಗಿ ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ: ಶಾಸಕ ಪ್ರದೀಪ್ ಈಶ್ವರ್ – Kannada News | I am doing my job as a public representative honestly: MLA Pradeep Eshwar


ಚಿಕ್ಕಬಳ್ಳಾಪುರ: ಜನಪರ ಕಾಳಜಿಯಿರುವ ಜನಪ್ರತಿನಿಧಿಯಾಗಿ ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ.ನಮ್ಮೂರಿಗೆ ನಮ್ಮ ಶಾಸಕ ಕೇವಲ ಘೋಷಣೆಯಲ್ಲ,ಬದಲಿಗೆ ನೆರವಿನ ಸಾಕಾರರೂಪವಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ತಾಲ್ಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಬೋಡಿನಾರಾಯಣಹಳ್ಳಿ, ದಿನ್ನಹಳ್ಳಿ, ಮುದ್ದಹಳ್ಳಿ, ಮಾದನಾಯಕನಹಳ್ಳಿಯಲ್ಲಿ ಐದು ಗ್ರಾಮಗಳಲ್ಲಿ 1 ಕೋಟಿ 25 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾಧ್ಯಮದೊಂದಿಗೆ ಮಾತನಾಡಿದರು.

ಜನರಿಂದ ಆಯ್ಕೆಯಾಗಿರುವ ಎಂಎಲ್‌ಎ ಜನಸಾಮಾನ್ಯರನ್ನು ಸಂಪರ್ಕಿಸಿ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಅವರಿದ್ದಲ್ಲಿಗೇ ತೆರಳಿ, ಅಹವಾಲು ಆಲಿಸಿ ಸೌಕರ್ಯ ಕಲ್ಪಿಸು ವುದೇ ಒಬ್ಬ ಜನಪ್ರತಿನಿಧಿಯ ಮುಖ್ಯ ಕೆಲಸ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಕುಗ್ರಾಮಗಳಲ್ಲಿ ಕೂಡ ಜನ ಸಾಮಾನ್ಯರಿಗೆ ಎಲ್ಲ ರೀತಿಯ ಸೌಲಭ್ಯಗಳು ಮರೀಚಿಕೆ ಯಾಗಿವೆ. ರಸ್ತೆ ಸಂಪರ್ಕ, ಪಿಂಚಣಿ ಸೌಲಭ್ಯ, ರೇಶನ್ ಕಾರ್ಡ್, ನೀರು, ವಸತಿ, ಶಾಲಾ ದಾಖಲಾತಿ, ಹಾಸ್ಟೆಲ್, ಚರಂಡಿ ನಿರ್ಮಾಣ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಇದನ್ನೂ ಓದಿ: Chikkaballapur News: ಕಾಗತಿ ಶಾಲಾ ಮಕ್ಕಳಿಗೆ ಶಬರಿ ಜನ ಸೇವಾ ಟ್ರಸ್ಟ್ ವತಿಯಿಂದ ಲೇಖನ ಸಾಮಗ್ರಿಗಳ ವಿತರಣೆ

ಇದು ತಪ್ಪೆನ್ನುವುದಾದರೆ, ಸರಿಯಾದ ಕೆಲಸ ಯಾವುದು ಎಂದು ತೋರಿಸಲಿ ಎನ್ನುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು.

ಹಲವಾರು ವರ್ಷಗಳಿಂದ ಈಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಕನಿಷ್ಠ ರಸ್ತೆ ಸಂಪರ್ಕಕ್ಕೆ ಒತ್ತು ನೀಡಿಲ್ಲ. ಹಲವಾರು ಗ್ರಾಮಸ್ಥರಿಗೆ ಪಿಂಚಣಿ ಬರುತ್ತಿಲ್ಲ,ಹಲವರಿಗೆ ರೇಶನ್ ಕಾರ್ಡ್, ಆಧಾರ ಕಾರ್ಡ್ ಇಲ್ಲ,ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಹಾಗಾಗಿ ಜನಗಳ ಬಳಿ ತೆರಳಿ ಸ್ಪಂದಿಸುತ್ತಿದ್ದೇನೆ. ಇನ್ನೂ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳಿಂದ ದಿನ್ನೂರು ಹಾಗು ಕರಕಮಾಕಲಹಳ್ಳಿಗಳಿಗೆ ರಸ್ತೆ ಸಂಪರ್ಕ ಇರಲಿಲ್ಲ ಇಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಇನ್ನೂ ಇದೆ ಪಂಚಾಯಿತಿ ವ್ಯಾಪ್ತಿಯ ಬೋಡಿನಾರಾಯಣಹಳ್ಳಿ, ದಿನ್ನಹಳ್ಳಿ,ಮುದ್ದಹಳ್ಳಿ,ಮಾದನಾಯಕನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.

ಇದೆ ವೇಳೆ ಗ್ರಾಮಸ್ಥರು ತಮ್ಮ ಹಲವಾರು ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಹೇಳಿಕೊಂಡಿದ್ದು ಜನರ ಸಮಸ್ಯೆಗಳನ್ನು ಆದಷ್ಟೂ ಬೇಗ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಿಡಿಓ ಮದ್ದಿರೆಡ್ಡಿ, ಮಂಡಿಕಲ್ ಮಂಚೇನಹಳ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್,ಕೆ ಎಂ ಮುನೇಗೌಡ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ ಅಚ್ಚು, ಟಿಎಪಿಸಿಎಂ ಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್, ನಗರಸಭೆ ನಾಮ ನಿರ್ದೇಶನ ಸದಸ್ಯ ಡೈರಿ ಗೋಪಿ, ಅಣ್ಣಮ್ಮ, ಇತರರು ಉಪಸ್ಥಿತರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »