Karunadu Studio

ಕರ್ನಾಟಕ

Firing: ಮೆಕ್ಸಿಕೋದ ಚರ್ಚ್‌ನಲ್ಲಿ ಸಂಭ್ರಮಾಚರಣೆ ವೇಲೆ ಗುಂಡಿನ ದಾಳಿ, 12 ಸಾವು – Kannada News | mass firing Gunmen kill 11 at religious festival in Mexico’s Guanajuato state


ಮೆಕ್ಸಿಕೋ : ಮೆಕ್ಸಿಕನ್ (Mexico) ರಾಜ್ಯದ ಗುವಾನಾಜುವಾಟೊದಲ್ಲಿ ಬುಧವಾರ ರಾತ್ರಿಯಿಡೀ ಇರಾಪುವಾಟೊ ನಗರದಲ್ಲಿ ಸಂಭ್ರಮಾಚರಣೆ ವೇಳೆ ಬಂದೂಕುಧಾರಿಗಳು (firing) ಗುಂಡು ಹಾರಿಸಿದಾಗ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಗೌರವಾರ್ಥ ಸ್ಥಳೀಯರು ನೃತ್ಯ ಮತ್ತು ಮದ್ಯಪಾನ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ.

ಆನ್‌ಲೈನ್‌ನಲ್ಲಿ ವೈರಲ್‌ ಆಗಿರುವ ವೀಡಿಯೊಗಳಲ್ಲಿ ಗುಂಡಿನ ದಾಳಿಯಿಂದ ಭಯಭೀತರಾದ ಜನ ಓಡಿಹೋಗುವುದನ್ನು ಹಾಗೂ ಶವಗಳನ್ನು ಕಾಣಬಹುದು. ಇರಾಪುವಾಟೊ ಅಧಿಕಾರಿ ರೊಡಾಲ್ಫೊ ಗ್ಮೆಜ್ ಸೆರ್ವಾಂಟೆಸ್ ಪತ್ರಿಕಾಗೋಷ್ಠಿಯಲ್ಲಿ ಸಾವಿನ ಸಂಖ್ಯೆ 12 ಕ್ಕೆ ಏರಿದೆ ಮತ್ತು ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದರು.

ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಈ ದಾಳಿಯನ್ನು “ದುಃಖಕರ” ಎಂದು ಖಂಡಿಸಿದರು ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಮೆಕ್ಸಿಕೋ ನಗರದ ವಾಯುವ್ಯದಲ್ಲಿರುವ ಗ್ವಾನಾಜುವಾಟೊ, ಹಲವು ವರ್ಷಗಳಿಂದ ಮೆಕ್ಸಿಕೋದ ಅತ್ಯಂತ ಹಿಂಸಾತ್ಮಕ ರಾಜ್ಯಗಳಲ್ಲಿ ಒಂದಾಗಿದೆ. ಅಲ್ಲಿನ ಕ್ರಿಮಿನಲ್ ಗುಂಪುಗಳು ಮಾದಕವಸ್ತು ಕಳ್ಳಸಾಗಣೆ ಮಾರ್ಗಗಳು ಮತ್ತು ಇತರ ಅಕ್ರಮ ಉದ್ಯಮಗಳಲ್ಲಿ ಹೋರಾಡುತ್ತಲೇ ಇವೆ. ವರ್ಷದ ಮೊದಲ ಐದು ತಿಂಗಳಲ್ಲಿ ರಾಜ್ಯವು 1,435 ಬಲಿಗಳನ್ನು ದಾಖಲಿಸಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »