Karunadu Studio

ಕರ್ನಾಟಕ

ಕೆನಡಾದಲ್ಲಿ ಬಿಷ್ಣೋಯ್ ಗ್ಯಾಂಗ್‌ಗೆ ಶೀಘ್ರದಲ್ಲೇ ಭಯೋತ್ಪಾದಕ ಸಂಘಟನೆ ಪಟ್ಟ? – Kannada News | Surrey Mayor appeals to Canadian government to declare Bishnoi gang a terrorist organization


ನವದೆಹಲಿ: ಕೆನಡಾದ (Canada) ಕಾನೂನಿನ ಅಡಿಯಲ್ಲಿ (Canadian law) ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi gang) ಮತ್ತು ಸುಲಿಗೆ ಹಾಗೂ ಹಿಂಸಾಚಾರದಲ್ಲಿ ಭಾಗಿಯಾಗಿರುವ ಇತರರನ್ನು ಭಯೋತ್ಪಾದಕರು ಎಂದು ಹೆಸರಿಸುವಂತೆ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಮೇಯರ್ ಬ್ರೆಂಡಾ ಲಾಕ್ (Brenda Locke) ಬುಧವಾರ ಮಾರ್ಕ್ ಕಾರ್ನಿ ನೇತೃತ್ವದ ಫೆಡರಲ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಲಾಕ್ ನಗರ ಸರ್ಕಾರದ ವೆಬ್‌ಸೈಟ್‌ನಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಸರ್ರೆಯ ಮೇಯರ್ ಬ್ರೆಂಡಾ ಲಾಕ್ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತು ದಕ್ಷಿಣ ಏಷ್ಯಾ ಮೂಲದ ಕೆನಡಿಯನ್ನರನ್ನು ಗುರಿಯಾಗಿಸಿಕೊಂಡು ಸುಲಿಗೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿರುವ ಇತರ ಯಾವುದೇ ಗುಂಪುಗಳಿದ್ದರೂ ಕೆನಡಾದ ಕಾನೂನಿನಡಿಯಲ್ಲಿ ಭಯೋತ್ಪಾದಕ ಸಂಘಟನೆಗಳೆಂದು ಫೆಡರಲ್ ಸರ್ಕಾರ ಘೋಷಿಸಬೇಕು ಎಂದು ಸರ್ರೆಯ ಮೇಯರ್ ಬ್ರೆಂಡಾ ಲಾಕ್ ಆಗ್ರಹಿಸಿದ್ದಾರೆ.

ಸುಲಿಗೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿರುವ ಸ್ಥಳೀಯ ಅಥವಾ ಅಂತಾರಾಷ್ಟ್ರೀಯ ಗುಂಪುಗಳ ಜಾಲಗಳನ್ನು ಕೆಡವಲು ಇದು ಅಗತ್ಯ. ನಮ್ಮ ನಿವಾಸಿಗಳು ಮತ್ತು ವ್ಯವಹಾರಗಳನ್ನು ರಕ್ಷಿಸಲು, ಇವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಈ ಪದನಾಮವು ನಿರ್ಣಾಯಕವಾಗಿದೆ. ಸರ್ರೆ ಸಮುದಾಯವು ಈ ಗ್ಯಾಂಗ್‌ಗಳಿಂದ ಎದುರಿಸುತ್ತಿರುವ ಹಿಂಸಾಚಾರ ಮತ್ತು ಬೆದರಿಕೆ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.

ಕೆನಡಾದಲ್ಲಿ ನೆಲೆಸಿರುವ ಹಲವಾರು ದರೋಡೆಕೋರರು ಭಾರತದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇವರು ಕಳೆದ ಕೆಲವು ವರ್ಷಗಳಿಂದ ಒಂಟಾರಿಯೊ, ಬ್ರಿಟಿಷ್ ಕೊಲಂಬಿಯಾ ಮತ್ತು ಆಲ್ಬರ್ಟಾದಲ್ಲಿ ಭಾರತೀಯರ ಮೇಲೆ ಅನೇಕ ದಾಳಿಗಳನ್ನು ನಡೆಸಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು (RCMP) ಆರೋಪಿಸಿದ್ದಾರೆ.

ಭಾರತದ ಹಲವಾರು ರಾಜ್ಯಗಳಲ್ಲಿಯೂ ಹಿಂಸಾಚಾರ, ಸುಲಿಗೆ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಗ್ಯಾಂಗ್‌ಗಳನ್ನು ಹತ್ತಿಕ್ಕಲು ಭಾರತ ಅನೇಕ ಬಾರಿ ಒಟ್ಟಾವಾಕ್ಕೆ ಮನವಿ ಮಾಡಿತ್ತು. ಕೆನಡಾದಿಂದ ಕಾರ್ಯನಿರ್ವಹಿಸುತ್ತಿರುವ ಕೆಲವು ಪ್ರಮುಖ ದರೋಡೆಕೋರರಲ್ಲಿ ಗೋಲ್ಡಿ ಬ್ರಾರ್ ಮತ್ತು ಅರ್ಶ್‌ದೀಪ್ ಡಲ್ಲಾ ಕೂಡ ಸೇರಿದ್ದಾರೆ.

ಸುಲಿಗೆ, ಹಿಂಸಾಚಾರದ ಬೆದರಿಕೆಗಳು, ಗುಂಡಿನ ದಾಳಿಗಳು ಇತ್ತೀಚೆಗೆ ಸಾಕಷ್ಟು ಏರಿಕೆಯಾಗಿದೆ. ಅಂತಹ ಕೃತ್ಯಗಳು ಕೇವಲ ಅಪರಾಧವಲ್ಲ. ಅವು ಆರ್ಥಿಕ ಭಯೋತ್ಪಾದನೆ. ಅವು ನಮ್ಮ ಸಮುದಾಯದ ಸುರಕ್ಷತೆಯನ್ನು ಅಸ್ಥಿರಗೊಳಿಸುತ್ತವೆ ಮತ್ತು ನಾವು ಈಗ ಸಾರ್ವಜನಿಕ ಸುರಕ್ಷತಾ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ ಎಂದು ಬ್ರೆಂಡಾ ಲಾಕ್ ತಿಳಿಸಿದ್ದಾರೆ.

ಈ ಗ್ಯಾಂಗ್‌ಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸುವುದರಿಂದ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸಾಧ್ಯವಾಗುತ್ತದೆ. ಸಾಮಾನ್ಯ ಜನರಿಗೆ ಹೆಚ್ಚು ಸುರಕ್ಷತೆ ಸಿಕ್ಕಂತಾಗುತ್ತದೆ. ಅಂತಹ ಅಪರಾಧ ಚಟುವಟಿಕೆಯನ್ನು ನಾವು ಸಹಿಸುವುದಿಲ್ಲ ಮತ್ತು ಕೆನಡಾದ ಕಾನೂನಿನ ಸಂಪೂರ್ಣ ಬಲವನ್ನು ನಮ್ಮ ನಿವಾಸಿಗಳ ರಕ್ಷಣೆಗೆ ಬಳಸಲಾಗುತ್ತದೆ ಎಂಬ ಸ್ಪಷ್ಟ ಸಂದೇಶ ಅವರಿಗೆ ಇದು ರವಾನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಲಾಕ್ ಆರೋಪ ಇದೇ ಮೊದಲೇನಲ್ಲ

ಸುಲಿಗೆ ಗ್ಯಾಂಗ್‌ಗಳ ವಿರುದ್ಧ ಲಾಕ್ ಮಾತನಾಡಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಜನವರಿಯಲ್ಲಿ ಅವರು ಈ ಕುರಿತು ಫೆಡರಲ್ ಸಾರ್ವಜನಿಕ ಸುರಕ್ಷತಾ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿಗೆ ಬ್ರಿಟಿಷ್ ಕೊಲಂಬಿಯಾ ಪ್ರಧಾನ ಮಂತ್ರಿ ಡೇವಿಡ್ ಎಬಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ಕೆನಡಾದಲ್ಲಿ ಭಯೋತ್ಪಾದಕ ಸಂಘಟನೆ ಎಂದು ಗುರುತಿಸುವಂತೆ ಪತ್ರ ಬರೆಯುವುದಾಗಿ ಘೋಷಿಸಿದ ಕೆಲವು ದಿನಗಳ ಬಳಿಕ ಲಾಕ್ ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್

ಉತ್ತರ ಭಾರತ ಮೂಲದ ಲಾರೆನ್ಸ್ ಬಿಷ್ಣೋಯ್ ಸುಮಾರು 700 ಸದಸ್ಯರ ಅತಿದೊಡ್ಡ ಗ್ಯಾಂಗ್ ಅನ್ನು ನಡೆಸುತ್ತಿದ್ದಾನೆ. 2015ರಿಂದ ಜೈಲಿನಲ್ಲಿರುವ ಈತ ಅಲ್ಲಿದ್ದುಕೊಂಡೇ ವ್ಯವಹಾರಗಳನ್ನು ನಡೆಸುತ್ತಿದ್ದಾನೆ.

ಇದನ್ನೂ ಓದಿ: Ahmedabad Plane Crash: ಏರ್ ಇಂಡಿಯಾ ಅಪಘಾತ; ಬ್ಲ್ಯಾಕ್ ಬಾಕ್ಸ್ ಡೇಟಾ ಡೌನ್‌ಲೋಡ್‌, ಮುಂದುವರಿದ ತನಿಖೆ

ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕಾರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸುಲಿಗೆ ಮತ್ತು ಕಳ್ಳಸಾಗಣೆ ಮೂಲಕ ಗಳಿಸಿದ ಹಣವನ್ನು ವಿದೇಶಗಳಲ್ಲಿ ಹೂಡಿಕೆ ಮಾಡುತ್ತಿತ್ತು. 2023ರಲ್ಲಿ ಚಾರ್ಜ್‌ಶೀಟ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ 2019ರಿಂದ 2021ರವರೆಗೆ ಸುಮಾರು 13 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಬಿಷ್ಣೋಯ್ ಹವಾಲಾ ಮಾರ್ಗದ ಮೂಲಕ ಕೆನಡಾ ಮತ್ತು ಥಾಯ್ಲೆಂಡ್‌ 5ರಿಂದ 60 ಲಕ್ಷ ರೂ. ವರೆಗೆ ಹಣವನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.

ಬಿಷ್ಣೋಯ್ ಮತ್ತು ಸತ್ವಿಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಖಲಿಸ್ತಾನಿ ಗುಂಪುಗಳೊಂದಿಗೆ ಹಾಗೂ ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್ (BKI) ನಾಯಕ ಲಖ್‌ಬೀರ್ ಸಿಂಗ್ ಲಾಂಡಾನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನುತ್ತಾರೆ ತನಿಖಾಧಿಕಾರಿಗಳು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »