Karunadu Studio

ಕರ್ನಾಟಕ

US Visa: ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುತ್ತಿದ್ದೀರಾ? 5 ವರ್ಷಗಳ ಎಲ್ಲ ಸೋಶಿಯಲ್ ಮೀಡಿಯಾ ಖಾತೆ ವಿವರ ಸಲ್ಲಿಕೆ ಕಡ್ಡಾಯ – Kannada News | Applying For US Visa? Now, You Have To Disclose All Social Media Handles


ನವದೆಹಲಿ: ಅಮೆರಿಕ (America) ತನ್ನ ವೀಸಾ ಪರಿಶೀಲನೆ (Visa Verification) ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ ಜಾರಿಗೊಳಿಸಿದ್ದು, ಎಲ್ಲ ವೀಸಾ ಅರ್ಜಿದಾರರು ಕಳೆದ ಐದು ವರ್ಷಗಳಲ್ಲಿ ಬಳಸಿದ ಸಾಮಾಜಿಕ ಮಾಧ್ಯಮ ಖಾತೆಗಳ (Social Media) ಹೆಸರು ಮತ್ತು ಹ್ಯಾಂಡಲ್‌ಗಳನ್ನು ತಿಳಿಸುವುದು ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ವೀಸಾ ತಿರಸ್ಕಾರ ಮತ್ತು ಭವಿಷ್ಯದ ವೀಸಾ ಅರ್ಹತೆಗೆ ಕಾರಣವಾಗಬಹುದು ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಎಚ್ಚರಿಸಿದೆ.

ಅಮೆರಿಕ ರಾಯಭಾರ ಕಚೇರಿಯ ಅಧಿಕೃತ ಎಕ್ಸ್ ಖಾತೆ ಮೂಲಕ ಈ ಘೋಷಣೆ ಮಾಡಲಾಗಿದ್ದು, ರಾಷ್ಟ್ರೀಯ ಭದ್ರತೆ ಮತ್ತು ಗುರುತಿನ ಪರಿಶೀಲನೆಗೆ ಆದ್ಯತೆ ನೀಡಲಾಗಿದೆ. “ವೀಸಾ ಅರ್ಜಿದಾರರು DS-160 ಅರ್ಜಿ ಫಾರಂನಲ್ಲಿ ಕಳೆದ 5 ವರ್ಷಗಳಲ್ಲಿ ಬಳಸಿದ ಎಲ್ಲ ಸಾಮಾಜಿಕ ಮಾಧ್ಯಮ ಖಾತೆಗಳ ಬಳಕೆದಾರ ಹೆಸರುಗಳನ್ನು ಪಟ್ಟಿ ಮಾಡಬೇಕು. ಅರ್ಜಿ ಸಲ್ಲಿಸುವ ಮೊದಲು ನೀಡಿದ ಮಾಹಿತಿಯು ನಿಖರವಾಗಿದೆ ಎಂದು ದೃಢೀಕರಿಸಬೇಕು” ಎಂದು ರಾಯಭಾರ ಕಚೇರಿ ತಿಳಿಸಿದೆ. “ಸಾಮಾಜಿಕ ಮಾಧ್ಯಮ ಮಾಹಿತಿಯನ್ನು ಬಿಟ್ಟರೆ ವೀಸಾ ತಿರಸ್ಕಾರವಾಗಬಹುದು” ಎಂದು ಎಚ್ಚರಿಕೆ ನೀಡಿದೆ.



ಈ ಸುದ್ದಿಯನ್ನೂ ಓದಿ: Visa cancellation: ಅಮೆರಿಕ ವಿದ್ಯಾರ್ಥಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ಹಾಗಾದ್ರೆ ಈ ನಿಯಮಗಳು ನಿಮಗೆ ಗೊತ್ತಿರಲೇಬೇಕು?

ಈ ವಾರದ ಆರಂಭದಲ್ಲಿ,ಅಮೆರಿಕ ಸ್ಟೇಟ್ ಇಲಾಖೆಯು ವಿದ್ಯಾರ್ಥಿ ವೀಸಾ ಪ್ರಕ್ರಿಯೆಯನ್ನು ಪುನರಾರಂಭಿಸಿದ ಕೆಲವೇ ದಿನಗಳಲ್ಲಿ, ಎಫ್, ಎಂ, ಅಥವಾ ಜೆ ಗೈರ್-ಪ್ರವಾಸಿ ವೀಸಾಗಳಿಗೆ ಅರ್ಜಿ ಸಲ್ಲಿಸುವವರು ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳ ಗೌಪ್ಯತೆ ಸೆಟ್ಟಿಂಗ್‌ಗಳನ್ನು ‘ಪಬ್ಲಿಕ್’ ಆಗಿ ಬದಲಾಯಿಸಬೇಕು ಎಂದು ಸೂಚಿಸಲಾಗಿದೆ. “ಎಲ್ಲ ಅರ್ಜಿದಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ‘ಪಬ್ಲಿಕ್’ ಆಗಿ ಮಾಡಬೇಕು, ಇದರಿಂದ ಗುರುತಿನ ಪರಿಶೀಲನೆ ಮತ್ತು ಅಮೆರಿಕಕ್ಕೆ ಪ್ರವೇಶಾರ್ಹತೆಯನ್ನು ಸ್ಥಾಪಿಸಲು ಸುಗಮವಾಗುತ್ತದೆ” ಎಂದು ರಾಯಭಾರ ಕಚೇರಿ ತಿಳಿಸಿದೆ.

2019ರಿಂದಲೂ ಅಮೆರಿಕವು ವೀಸಾ ಅರ್ಜಿ ಪ್ರಕ್ರಿಯೆಯಲ್ಲಿ ಸಾಮಾಜಿಕ ಮಾಧ್ಯಮ ಗುರುತುಗಳನ್ನು ಸಂಗ್ರಹಿಸುತ್ತಿದೆ. “ರಾಷ್ಟ್ರೀಯ ಭದ್ರತೆಗೆ ಯಾವುದೇ ಭೀತಿ ಒಡ್ಡುವ ಅರ್ಜಿದಾರರನ್ನು ಗುರುತಿಸಲು ಎಲ್ಲ ಲಭ್ಯ ಮಾಹಿತಿಯನ್ನು ಬಳಸುತ್ತೇವೆ” ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ಕಳೆದ ತಿಂಗಳು ಟ್ರಂಪ್ ಆಡಳಿತವು ವಿಶ್ವಾದ್ಯಂತ ತನ್ನ ರಾಯಭಾರ ಕಚೇರಿಗಳಿಗೆ ಹೊಸ ವಿದ್ಯಾರ್ಥಿ ವೀಸಾ ಸಂದರ್ಶನಗಳು ಮತ್ತು ವಿನಿಮಯ ಸಂದರ್ಶಕ ವೀಸಾಗಳನ್ನು ನಿಲ್ಲಿಸಲು ಆದೇಶಿಸಿತ್ತು.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »