ಬಗೆಬಗೆಯ ಡಿಸೈನರ್ ಶೀರ್ ದುಪಟ್ಟಾ
ಪಾರದರ್ಶಕವಾಗಿರುವ ಈ ದುಪಟ್ಟಾಗಳ ಫ್ಯಾಬ್ರಿಕ್ ತೀರಾ ಮೃದುವಾಗಿರುತ್ತದೆ. ಇವುಗಳ ಮೇಲೆ ಕುಂದನ್, ಕ್ರಿಸ್ಟಲ್ ಹಾಗೂ ನಕ್ಷತ್ರದಂತೆ ಮಿನುಗುವ ಹರಳುಗಳನ್ನು ಅಂಟಿಸಲಾಗಿರುತ್ತದೆ. ಸಲ್ವಾರ್ ಕಮೀಝ್, ಲೆಹೆಂಗಾ ಹಾಗೂ ಗ್ರ್ಯಾಂಡ್ ಔಟ್‌ಫಿಟ್‌ಗಳಿಗೆ ಇವು ಪರ್ಫೆಕ್ಟ್ ಮ್ಯಾಚ್ ಮಾಡಬಹುದು. ನೋಡಲು ಅತ್ಯಾಕರ್ಷಕವಾಗಿ ಕಾಣುವ ಈ ಬಗೆಯ ದುಪಟ್ಟಾಗಳು ಎಥ್ನಿಕ್ ಫ್ಯಾಷನ್‌ನಲ್ಲಿ ಸ್ಥಾನ ಗಿಟ್ಟಿಸಿವೆ ಎನ್ನುತ್ತಾರೆ ಮಾರಾಟಗಾರರು.