Karunadu Studio

ಕರ್ನಾಟಕ

Phycology: ವೈವಾಹಿಕ ಜೀವನದಲ್ಲಿ ಬಿರುಕು ಮೂಡುತ್ತಿರುವುದು ಏಕೆ ಗೊತ್ತೆ? ಮನಃಶಾಸ್ತ್ರಜ್ಞರ ಉತ್ತರ ಇಲ್ಲಿದೆ ನೋಡಿ – Kannada News | Do you know why there is a rift in married life? Here is the answer from psychologists. Here is the answer from psychologists.


ಕೆ ಎನ್ ರಂಗನಾಥ್, ಚಿತ್ರದುರ್ಗ

ಅದೊಂದು ಕಾಲವಿತ್ತು ತುಂಬಾ ಹಿಂದೆ ಏನು ಹೋಗಬೇಕಿಲ್ಲ ಸರಿಸುಮಾರು ಇಂದಿಗೆ ಒಂದು 15 ರಿಂದ 18 ವರ್ಷಗಳ ಆಸು ಪಾಸು. ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಆಗಾಗ ಅಪ್ಪ-ಅಮ್ಮ ಜಗಳವಾಡಿದರೆ ಮನೆಯಲ್ಲಿ ಮೂರ್ನಾಲ್ಕು ದಿನಗಳ ಕಾಲ ಸ್ತಬ್ಧ ವಾತಾವರಣ ನಿರ್ಮಾಣವಾಗುತ್ತಿತ್ತು.ಅಮ್ಮ ಹಾಸಿಗೆಯಿಂದ ಮೇಲೇಳುತ್ತಿರಲಿಲ್ಲ, ಹಾಗಾಗಿ ಅಡುಗೆ ರೂಂ ಗೆ ಕೂಡ ವಿಶ್ರಾಂತಿಯ ಸಮಯವದು. ನಾವು ಅಂಗಡಿಯಿಂದ ತಂದ ತಿಂಡಿಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಇಂತಹ ಸನ್ನೀವೇಶ ಮನೆಯಲ್ಲಿ ನಿರ್ಮಾಣವಾದರೆ ನಮಗೆ ಮನೆಯಲ್ಲಿ ಏನೋ ಅಪರಾಧವಾದಂತೆ ಭಾಸವಾಗುತ್ತಿತ್ತು. ನಾವು ಈ ರೀತಿಯಾದಂತಹ ಘಟನೆಗಳನ್ನು ಧಾರಾವಾಹಿಗಳಲ್ಲಿ ನೋಡುತ್ತಿದ್ದೆವು. ಮೊದೆಲ್ಲ ತೀರಾ ಅಪರೂಪ ಎನಿಸುವ ಈ ಘಟನೆ ಇಂದಿನ ಪೀಳಿಗೆಯಲ್ಲಿ ಇದು ಸರ್ವೇ ಸಾಮಾನ್ಯ.

ಮದುವೆಯ ಮಂಟಪದಲ್ಲಿ ಹಸೆ ಮಣೆಯೇರಿದ ಹೆಣ್ಣು ಅಲ್ಲಿ ಸೇರಿರುವ ಅಷ್ಟೂ ಜನರ ಮುಂದೆ ತನ್ನ ತಂದೆ ತಾಯಿಯ ಮರ್ಯಾದೆ ಮತ್ತು ಪ್ರತಿಷ್ಠೆಯನ್ನೂ ಲೆಕ್ಕಿಸದೇ ತಾನು ಪ್ರೀತಿಸಿದ ಹುಡುಗನ ಹಿಂದೆ ಹೋಗುತ್ತಾಳೆ. ಮತ್ತೊಂದು ಕಡೆ ಹುಡುಗಿಯ ಮನೆಯಲ್ಲಿ ಮದುವೆಯ ಸೊಲ್ಲೆತ್ತಿದರೆ ಸಾಕು ಹುಡುಗ ಹುಡುಗಿ ಸೇರಿ Plan-A, Plan-B ಅಂತ ಮನೆಯವರ ಕಣ್ತಪ್ಪಿಸಿ ಮದುವೆಯಾಗಲು ಮುಂದಾಗುತ್ತಾರೆ. ಇದೆಲ್ಲವೂ ಒಂದು ಕಡೆಯಾದರೆ ಇನ್ನು ಕೆಲವು ವಿಚಿತ್ರ ಮನಸ್ಥಿತಿಗಳಿವೆ. ಮನೆಯಲ್ಲಿ ತಂದೆ ತಾಯಿಯ ಬಳಿ ತಮ್ಮ ಪ್ರೀತಿಯನ್ನು ನೇರವಾಗಿ ಹೇಳದೆ ಕೊನೆಗೆ ತಂದೆ ತಾಯಿಯ ಇಚ್ಛೆಯಂತೆ ಮದುವೆಯಾಗಿ ಹನಿಮೂನ್ ಎಂದು ಗಂಡನನ್ನು ಕರೆದುಕೊಂಡು ಹೋಗಿ ಅಲ್ಲಿ ತಮ್ಮ ಪ್ರಿಯತಮನಿಂದ ಕೊಲೆ ಮಾಡಿಸುತ್ತಾರೆ. ಪಾಪ ಯುವಕರು ಒಂದು ಒಳ್ಳೆ ಹುಡುಗಿಯನ್ನ ಮದುವೆಯಾಗಲು ಕಷ್ಟಪಟ್ಟು ರಾತ್ರಿ ಇಡೀ ಓದಿ ನೌಕರಿ ತಗೊಂಡು ಮನೆ ಕಟ್ಟಿಸಿ ಮದುವೆಯಾಗಿ ನೆಮ್ಮದಿಯಾಗಿ ಇರಬೇಕೆಂದುಕೊಂಡಾಗ ಹೆಂಡತಿಯೇ ಕೊಲ್ಲಿಸಿದರೆ ಇದು ಯಾರು ಬರೆದ ಕಥೆಯೋ ನನಗಾಗಿ ಬಂದ ವ್ಯಥೆಯೋ ಎಂಬ ಹಾಡು ನೆನಪಾಗುತ್ತೆ. ಹೌದು ಇತ್ತೀಚಿನ ಈ ರೀತಿಯಾದಂತಹ ಘಟನೆಗಳನ್ನು ಕೇಳಿದರೆ ನಮ್ಮ ಸಂಸ್ಕೃತಿ, ನಮ್ಮ ಆಚಾರ, ನಮ್ಮ ವಿಚಾರ, ನಮ್ಮ ಬದ್ಧತೆ ಎಲ್ಲಿಗೆ ಬಂದು ನಿಂತಿದೆ ಎನ್ನುವಂತದ್ದು ಒಂದು ಬಾರಿ ಖಂಡಿತವಾಗಿಯೂ ಅವಲೋಕನ ಮಾಡಿಕೊಳ್ಳುವಂತೆ ಮಾಡುತ್ತೆ.

ಇನ್ನು ಈ ವಿಚಾರಗಳ ಬಗ್ಗೆ ವಾಟ್ಸಪ್ ಯುನಿವರ್ಸಿಟಿಯಲ್ಲಿ ಕೆಲವು ಪಿ ಹೆಚ್ ಡಿ ಪುರಸ್ಕೃತ ಭಗ್ನ ಪ್ರೇಮಿಗಳು ಹೇಳುತಿರುತ್ತಾರೆ, ಪ್ರೀತಿ ಕುರುಡು,ಪ್ರೀತಿಗಾಗಿ ಲೋಕವನ್ನೇ ಪ್ರೀತಿಗಾಗಿ ಲೋಕವನ್ನೇ ಜಯಿಸಬಲ್ಲೆನಾ, ಇನ್ನು ಒಂದು ಕೊಲೆ ಮಾಡುವುದು ಯಾವ ಲೆಕ್ಕ ನನಗೆ. ನಿಜಕ್ಕೂ ಇಂದಿನ ಮನುಕುಲದ ಮನಸ್ಥಿತಿ ಎಷ್ಟರಮಟ್ಟಿಗೆ ಬದಲಾಗಿದೆ ಎನ್ನುವಂಥದ್ದು ಆಶ್ಚರ್ಯದ ಸಂಗತಿ. ಇರಬಹುದು ಅದೇನೇ ಇರಲಿ ಪ್ರೀತಿ ಪ್ರೇಮ ಎನ್ನುವಂಥದ್ದು ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವೆ ಅಥವಾ ಒಂದು ಹೆಣ್ಣು ಮತ್ತು ಗಂಡಿನ ನಡುವೆ ಇರುವಂತಹ ಆಕರ್ಷಣೆ. ಇದು ಕೇವಲ ಇಂದು ನೆನ್ನೆದಲ್ಲ ಇದು ಅನಾದಿಕಾಲದಿಂದಲೂ ಒಂದು ಹೆಣ್ಣಿನ ಸೆಳೆತಕ್ಕೆ ಅಥವಾ ಗಂಡಿನ ಸೆಳೆತಕ್ಕೆ ಒಂದು ಹೆಣ್ಣು ಆಕರ್ಷಿತಳಾಗುವುದು ಸರ್ವೇಸಾಮಾನ್ಯ. ಇದು ಕೇವಲ ಮನುಕುಲಕ್ಕೆ ಮಾತ್ರ ಸೀಮಿತವಾಗಿಲ್ಲ ಪ್ರಾಣಿ ಪಕ್ಷಿಗಳ ನಡುವೆಯೂ ಕೂಡ ಇದೆ. ಆದರೆ ಪ್ರಾಣಿ ಪಕ್ಷಿಗಳ ಮಧ್ಯ ಡಿವೋರ್ಸ್ ಆಗ್ತಾ ಇಲ್ಲ, ಕೊಲೆಗಳಾಗ್ತಾ ಇಲ್ಲ, ವಿಚ್ಛೇದನಕ್ಕಾಗಿ ಕೋರ್ಟು ಕಚೇರಿ ಅಂತ ಹೇಳ್ಬಿಟ್ಟು ಅಲೆಯುತ್ತಿಲ್ಲ. ದುರದೃಷ್ಟವಶಾತ್ ಈ ಮನುಕುಲದಲ್ಲಿ ಯಾಕೆ ಹೀಗಾಗುತ್ತದೆ ಎನ್ನುವಂಥದ್ದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದುಕೊಂಡಿದೆ.

ಅದಕ್ಕೆ ಹಲವು ಮನಶಾಸ್ತ್ರಜ್ಞರ ಉತ್ತರ ಇಲ್ಲಿದೆ ನೋಡಿ.

  • ಮಾಧ್ಯಮಗಳ ಪ್ರಭಾವ
  • ರಿಯಾಲಿಟಿ ಶೋ, ಸಿನಿಮಾಗಳು ಮತ್ತು ಸಾಮಾಜಿಕ ಮಾಧ್ಯಮಗಳು ತೀವ್ರವಾಗಿ ಪ್ರಭಾವ ಬೀರುತ್ತಿವೆ.
  • ಟೀನೇಜ್ ಲವ್
  • ಬಾಲ್ಯದಿಂದಲೇ ಪ್ರೀತಿ ಪ್ರೇಮದ ಸಂಬಂಧಗಳ ಕಡೆ ಒಲವು, ಮತ್ತು ಅದರ ಪರಿಣಾಮವಾಗಿ ತಪ್ಪು ನಿರ್ಧಾರಗಳು.
  • ತಂದೆ ತಾಯಿಯಿಂದ ಮಾರ್ಗದರ್ಶನದ ಕೊರತೆ, ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸದೆ ಇರುವುದು.
  • ಬೇರೆಯವರನ್ನು ನೋಡಿ ಅನುಕರಣೆ ಮಾಡುವುದು
  • ನೆರೆಹೊರೆಯವರನ್ನು ನೋಡಿ ಅವರನ್ನು ಅನುಕರಿಸುವುದು. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಅವರಿಂದ ಉಳಿದವರು ಕೂಡ ಪ್ರಭಾವಿತರಾಗುವುದು
  • ಸಿಂಗಲ್ ಫ್ಯಾಮಿಲಿ
  • ಹಿಂದೆ ಇರುತ್ತಿದ್ದ ರೀತಿಯಲ್ಲಿ ಸಂಯುಕ್ತ ಕುಟುಂಬಗಳ ಕೊರತೆಯಿಂದಾಗಿ ನೈತಿಕ ಬೆಂಬಲ ಸಿಗದೆ ತಪ್ಪು ದಾರಿಯಲ್ಲಿ ಹೋಗುವ ಅವಕಾಶ ಹೆಚ್ಚಾಗಿದೆ.
  • ಸಿಂಗಲ್ ಪೇರೆಂಟ್
  • ತಾಯಿ ಅಥವಾ ತಂದೆ ಇಲ್ಲದಿರುವ ಕಾರಣ ಇನ್ನೊಬ್ಬರ ಅಭಾವದಿಂದ ಮಾರ್ಗದರ್ಶನ ಲಭಿಸುತ್ತಿಲ್ಲ.
  • ಭವಿಷ್ಯದ ಜೀವನದ ಬಗ್ಗೆ ಗಂಭೀರತೆಯ ಕೊರತೆ
  • ವೈವಾಹಿಕ ಜೀವನ, ಮಕ್ಕಳ ಬಗ್ಗೆ ಜವಾಬ್ದಾರಿ ಬಗ್ಗೆ ಅರಿವೇ ಇಲ್ಲದಿರುವುದು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »