Karunadu Studio

ಕರ್ನಾಟಕ

ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲಬೇಕೆಂದರೆ ಕುಲ್ದೀಪ್ ಯಾದವ್ ಆಡಬೇಕೆಂದ ಮೈಕಲ್ ಕ್ಲಾರ್ಕ್! – Kannada News | IND VS ENG: ‘India have to play Kuldeep Yadav to win in England’, says Michael Clarke


ನವದೆಹಲಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿಯ ಇನ್ನುಳಿದ ಪಂದ್ಯಗಳಲ್ಲಿ (IND vs ENG) ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಚೈನಾಮನ್‌ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಅವಕಾಶ ನೀಡಬೇಕೆಂದು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ (Michael Clarke) ಸಲಹೆ ನೀಡಿದ್ದಾರೆ. ವಿಕೆಟ್ ಪಡೆದು ಪಂದ್ಯದ ಫಲಿತಾಂಶ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಬೌಲರ್ ಅನ್ನು ಬೆಂಚ್ ಕಾಯಿಸುವುದು ಬುದ್ಧಿಹೀನ ಕೆಲಸವೆಂದು ಅವರು ಟೀಕಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾ ಒಬ್ಬರೇ ಸ್ಥಾನ ಪಡೆದಿದ್ದರು. ಆದರೆ ಎರಡು ಇನಿಂಗ್ಸ್‌ಗಳಿಂದ ಕೇವಲ ಒಂದು ವಿಕೆಟ್ ಪಡೆದಿದ್ದರು. ಆದ್ದರಿಂದ ಇಂಗ್ಲೆಂಡ್ 371 ರನ್ ಗುರಿಯನ್ನು ಸುಲಭವಾಗಿ ತಲುಪಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.

IND vs ENG 2nd Test: 2ನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ

ಕುಲ್ದೀಪ್ ಯಾದವ್‌ಗೆ ಸ್ಥಾನ ಕಲ್ಪಿಸಿ: ಮೈಕಲ್ ಕ್ಲಾರ್ಕ್

ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಯ ನಿಮಿತ್ತ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಮೈಕಲ್ ಕ್ಲಾರ್ಕ್, ಉಳಿದ ಪಂದ್ಯಗಳಲ್ಲಿ ಕುಲ್ದೀಪ್ ಯಾದವ್‌ಗೆ ಸ್ಥಾನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

“ಪಂದ್ಯದ ಸೋಲಿಗೆ ನಾನು ವೈಯಕ್ತಿಕವಾಗಿ ಯಾವುದೇ ಬೌಲರ್ ಅನ್ನು ಗುರಿ ಮಾಡುವುದಿಲ್ಲ. ಆದರೆ ತಂಡದಲ್ಲಿ ಕುಲ್ದೀಪ್ ಯಾದವ್ ಇರಬೇಕಿತ್ತು ಎಂಬುದು ನನ್ನ ಅನಿಸಿಕೆ. ಆತನನ್ನು ತಂಡದಿಂದ ಹೊರಗಿಡುವುದು ನಿಜಕ್ಕೂ ಬುದ್ಧಿಹೀನ ಸಂಗತಿಯಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲೂ ತಮ್ಮ ಪರಿಣಾಮವಾಗಿ ಬೌಲಿಂಗ್ ಪ್ರದರ್ಶನದಿಂದ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ,” ಎಂದು ವಿಶ್ವಕಪ್ ವಿಜೇತ ನಾಯಕ ತಿಳಿಸಿದ್ದಾರೆ.

IND vs ENG: ರಿಷಭ್‌ ಪಂತ್‌ ತನ್ನ ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸಬೇಕೆಂದ ಆರ್‌ ಅಶ್ವಿನ್‌!

ಹೆಚ್ಚುವರಿ ಸ್ಪಿನ್ನರ್‌ಗೆ ಸ್ಥಾನ ನೀಡಿ

“ಭಾರತ ತಂಡ ಇತ್ತೀಚಿನ ದಿನಗಳಲ್ಲಿ ಹೆಚ್ಚುವರಿ ಬ್ಯಾಟರ್ ಆಯ್ಕೆಗೆ ಒತ್ತು ನೀಡುವ ಮೂಲಕ ಬ್ಯಾಟಿಂಗ್ ಡೆಪ್ತ್ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ. ಆ ಮೂಲಕ ಒಬ್ಬ ಹೆಚ್ಚುವರಿ ಸ್ಪಿನ್ನರ್‌ಗೆ ತಂಡದಲ್ಲಿ ಜಾಗ ನೀಡುವ ಸಮಸ್ಯೆ ತೆಗೆದುಕೊಳ್ಳುತ್ತಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧ ಪಂದ್ಯ ಗೆಲ್ಲಬೇಕೆಂದದರೆ 20 ವಿಕೆಟ್ ಪಡೆಯುವುದು ಮುಖ್ಯವಾಗುತ್ತದೆ,” ಎಂದು ಕ್ಲಾರ್ಕ್ ಹೇಳಿದ್ದಾರೆ.

ಬುಮ್ರಾ ಉತ್ತಮ ಬೌಲರ್: ಕ್ಲಾರ್ಕ್

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ಸಾಧನೆ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ಅವರನ್ನು ಕ್ಲಾರ್ಕ್ ಶ್ಲಾಘಿಸಿದ್ದಾರೆ.

“ಬುಮ್ರಾ ವಿಶ್ವಶ್ರೇಷ್ಠ ಬೌಲರ್ ಆಗಿದ್ದು, ಆತನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವಿದೆ. ಆದರೆ ಅದೇ ಸಮಯದಲ್ಲಿ ತಂಡದಲ್ಲಿರುವ ಇತರ ಮೂವರು ವೇಗಿಗಳಿಂದಲೂ ಉತ್ತಮ ಬೌಲಿಂಗ್ ಪ್ರದರ್ಶನ ಮೂಡಿಬರಬೇಕು. ಉಳಿದ ವೇಗಿಗಳು ಪರಿಣಾಮಕಾರಿ ಬೌಲರ್ ಮಾಡಿದರೂ ವಿಕೆಟ್ ಪಡೆಯುವಲ್ಲಿ ಎಡವಿದ್ದರು. ಹಗಾಗಿ ಅವರು ಇದರ ಕಡೆಗೆ ಹೆಚ್ಚು ಗಮನ ಹರಿಸಬೇಕು”, ಎಂದು ಮೈಕಲ್ ಕ್ಲಾರ್ಕ್ ಸಲಹೆ ನೀಡಿದ್ದಾರೆ.

IND vs ENG: ʻನಿಮಗೆ ಅಪಾಯ ಎದುರಾಗಲಿದೆʼ-ರಿಷಭ್‌ ಪಂತ್‌ ಬ್ಯಾಟಿಂಗ್‌ ಸ್ವಭಾವದ ಬಗ್ಗೆ ಎಬಿಡಿ ಎಚ್ಚರಿಕೆ!

ಜಡೇಜಾ ಪರಿಣಾಮ ಬೌಲಿಂಗ್ ಮಾಡಿಲ್ಲ

“ಮೊದಲ ಟೆಸ್ಟ್ ಪಂದ್ಯದಲ್ಲಿ ಅದರಲ್ಲೂ ಎರಡನೇ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಪರಿಣಾಮಕಾರಿ ಬೌಲ್ ಮಾಡುವಲ್ಲಿ ಎಡವಿದ್ದರು. ಎಡಗೈ ಬ್ಯಾಟರ್‌ಗಳ ಎದುರು ಆಫ್ ಸ್ಟಂಪ್ ಆಚೆ ಬೌಲ್ ಮಾಡುವ ಬದಲು ಸ್ಟಂಪ್ ನೇರವಾಗಿಯೇ ಹೆಚ್ಚಾಗಿ ಬೌಲ್ ಮಾಡುತ್ತಿದ್ದರು,” ಎಂದು ಕ್ಲಾರ್ಕ್ ಹೇಳಿದ್ದಾರೆ.

ಎಜ್‌ಬಾಸ್ಟನ್‌ನಲ್ಲಿ ಜುಲೈ 2 ರಂದು ಇಂಗ್ಲೆಂಡ್ ಹಾಗೂ ಭಾರತ ನಡುವೆ ಎರಡನೇ ಪಂದ್ಯ ನಡೆಯಲಿದೆ. ಈ ಪಂದ್ಯದ ಗೆದ್ದು ಸರಣಿಯಲ್ಲಿ 1-1 ಸಮಬಲ ಸಾಧಿಸಲು ಶುಭಮನ್ ಗಿಲ್ ಪಡೆ ಎದುರು ನೋಡುತ್ತಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »