Karunadu Studio

ಕರ್ನಾಟಕ

Electric shock: ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್‌ ತಗುಲಿ ದಂಪತಿ ದಾರುಣ ಸಾವು – Kannada News | A couple died due to electric shock in Soraba


ಶಿವಮೊಗ್ಗ: ವಿದ್ಯುತ್ ತಗುಲಿ ದಂಪತಿ ದುರ್ಮರಣ ಹೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕೃಷ್ಣಪ್ಪ (54) ವಿನೋದಾ (42) ಮೃತ ದಂಪತಿ. ಸಂಜೆ ಮನೆಯ ಹಿಂದಿನ ಕೋಣೆಯಲ್ಲಿ ತಂತಿಯ ಮೇಲೆ ಒಣಗಿಸಿದ್ದ ಬಟ್ಟೆಯನ್ನು ತೆಗೆಯಲು ಹೋದ ಸಮಯದಲ್ಲಿ ವಿನೋದಾ ಅವರಿಗೆ ವಿದ್ಯುತ್‌ ಸ್ಪರ್ಶಿಸಿದೆ. ಈ ವೇಳೆ ಅವರನ್ನು ರಕ್ಷಿಸಲು ಹೋದ ಪತಿ ಕೃಷ್ಣಪ್ಪ ಅವರಿಗೂ ಕೂಡ ವಿದ್ಯುತ್ ಹರಿದು ಅವಘಡ ಸಂಭವಿಸಿದೆ. ‌

ದಂಪತಿಗೆ ವಿದ್ಯುತ್ ತಗುಲಿದ್ದನ್ನು ಗಮನಿಸಿದ ಪಕ್ಕದ ಮನೆ ಮಂಜುನಾಥ್ ರಕ್ಷಿಸಲು ಮುಂದಾದಾಗ ಅವರಿಗೂ ವಿದ್ಯುತ್ ಶಾಕ್ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವಘಡದಲ್ಲಿ ಪತಿ-ಪತ್ನಿ ಇಬ್ಬರೂ ಕೂಡ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದು, ಮೃತ ದಂಪತಿಗೆ ಇಬ್ಬರು ಪುತ್ರಿಯದು, ಒಬ್ಬ ಪುತ್ರ ಇದ್ದಾನೆ. ಈ ಘಟನೆಯಿಂದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Yadgir News: ನೀರು ಕುಡಿಯಲು ಹೋಗಿ ಭೀಮಾ ನದಿಯಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು!

3ನೇ ಹೆಂಡ್ತಿಯನ್ನು ಕೊಂದು ಶವವನ್ನು ಲಗೇಜ್‌ ಎಂದು ಬಸ್‌ನಲ್ಲಿ ಹಾಕಿದ್ದ ಭೂಪ!

ಕೊಪ್ಪಳ: ಮೂರನೇ ಹೆಂಡತಿಯನ್ನು ಕೊಂದು (Murder Case) ತಲೆಮರೆಸಿಕೊಂಡಿದ್ದ ಗಂಡನನ್ನು ಬರೋಬ್ಬರಿ 23 ವರ್ಷಗಳ ಬಳಿಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ನಿಯನ್ನು ಕೊಂದ ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ಹಾಕಿ ಸಾರಿಗೆ ಬಸ್‌ನಲ್ಲಿ ಲಗೇಜ್‌ ಎಂದು ಆರೋಪಿ ಕಳುಹಿಸಿದ್ದ. ಇದೀಗ ಹಂತಕ ಪತಿಯನ್ನು ಗಂಗಾವತಿ ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮದ ಹನುಮಂತ (75) ಬಂಧಿತ ಆರೋಪಿ. ಈತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಮದುವೆಯಾದ ಮೊದಲ ಪತ್ನಿ ಮೃತಪಟ್ಟ ನಂತರ ಎರಡನೇ ಮದುವೆಯಾಗಿದ್ದ. ಆಕೆ ಸಹ ಜಗಳವಾಡಿ ಈತನನ್ನು ಬಿಟ್ಟು ಹೋಗಿದ್ದರು.

ಬಳಿಕ ಸರ್ಕಾರಿ ನೌಕರ ಎಂದು ಪರಿಚಯಿಸಿಕೊಂಡು ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಮಹಿಳೆಯೊಬ್ಬರನ್ನು ಮೂರನೇ ಮದುವೆಯಾಗಿ ಗಂಗಾವತಿ ನಗರದ ಲಕ್ಷ್ಮಿಕ್ಯಾಂಪ್‌ನಲ್ಲಿ ವಾಸವಾಗಿದ್ದ. 2002 ರಲ್ಲಿ ವೈಯಕ್ತಿಕ ಜಗಳಕ್ಕೆ ಆಕೆಯನ್ನು ಕೊಚ್ಚಿ ಕೊಂದಿದ್ದ. ಗೋಣಿ ಚೀಲದಲ್ಲಿ ಶವವನ್ನು ತುಂಬಿ ಲಗೇಜ್‌ ಎಂದು ನಂಬಿಸಿ, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸರ್ಕಾರ ಬಸ್‌ನಲ್ಲಿ ಕಳುಹಿಸಿದ್ದ. ಈ ಚೀಲದ ಬಗ್ಗೆ ಅನುಮಾನಗೊಂಡ ಚಾಲಕ ಹಾಗೂ ನಿರ್ವಾಹಕರು ನೇರವಾಗಿ ಬಸ್‌ ಅನ್ನು ಪೊಲೀಸ್‌ ಠಾಣೆಗೆ ತೆಗೆದುಕೊಂಡು ಹೋಗಿ ದೂರು ನೀಡಿದ್ದರು.

ಈ ಸುದ್ದಿಯನ್ನೂ ಓದಿ | Triple Murder Case: ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಊರುಬಿಟ್ಟು ಪರಾರಿಯಾಗಿದ್ದ. ಅಂದಿನಿಂದ ಅಲೆಮಾರಿ ಜೀವನ ನಡೆಸುತ್ತಿದ್ದ. ಕಳೆದ 7 – 8 ತಿಂಗಳಿಂದ ತನ್ನ ಸ್ವಂತ ಊರು ಹಾಲದಾಳಕ್ಕೆ ಬಂದಿದ್ದ. ಖಚಿತ ಮಾಹಿತಿ ಪಡೆದ ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್‌ ಹಾಗೂ ನಗರ ಠಾಣೆ ಪಿಐ ಪ್ರಕಾಶ್‌ ಮಾಳಿ ನೇತೃತ್ವದ ತಂಡ, ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಎಎಸ್‌ಐ ಅತಿಕ್‌ ಅಹ್ಮದ್‌, ಸಿಎಚ್‌ಸಿ ಸುಭಾಷಚಂದ್ರಗೌಡ ಪಾಟೀಲ್‌, ಪಿಸಿ ಯಮನೂರಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »