Karunadu Studio

ಕರ್ನಾಟಕ

MLA S. N. Subbareddy: ನಾಡಪ್ರಭು ಕೆಂಪೇಗೌಡರು ಆಡಳಿತ ಕೌಶಲ್ಯ, ಸಾಮಾಜಿಕ ಸಾಮರಸ್ಯ , ಭವಿಷ್ಯದ ದೃಷ್ಟಿಕೋನದಲ್ಲಿ ಇಡೀ ಜಗತ್ತಿಗೆ ಮಾದರಿ:-ಶಾಸಕ ಎಸ್. ಎನ್.ಸುಬ್ಬಾರೆಡ್ಡಿ – Kannada News | Nadaprabhu Kempegowda is a role model for the entire world in terms of administrative skills, social harmony and future vision:- MLA S. N. Subbareddy


ಬಾಗೇಪಲ್ಲಿ: ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲಾವರಣದಲ್ಲಿ ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಒಕ್ಕಲಿಗರ ಸಂಘ ನೇತೃತ್ವದಲ್ಲಿ ಆಯೋ ಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ,ದೀಪ  ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ನೆರವೇರಿಸಿ ಬಳಿಕ ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಆಡಳಿತ ಕೌಶಲ್ಯ, ಸಾಮಾಜಿಕ ಸಾಮರಸ್ಯ ಮತ್ತು ಭವಿಷ್ಯದ ದೃಷ್ಟಿ ಕೋನದಲ್ಲಿ ಇಡೀ ಜಗತ್ತಿಗೆ ಮಾದರಿಯಾದ ಮಹಾಪುರುಷರು ಬೆಂಗಳೂರು ನಂತಹ ಮಹಾನಗರ ವನ್ನು ಮುಂದಾಲೋಚನೆಯಿಂದ ತಲತಲಾಂತರಗಳಿಗೂ ಯೋಗ್ಯವಾಗುವ ರೀತಿಯಲ್ಲಿ ವೈಜ್ಞಾನಿಕವಾಗಿ ನಗರ ನಿರ್ಮಾಣವನ್ನು ಮಾಡಿಸಿದರು.

ಇದನ್ನೂ ಓದಿ: Chikkaballapur News: ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಬೃಹತ್ ಜಾಥ

ಜೊತೆಗೆ ರೈತರ ಪಾಲಿಗೆ ನೀರು ಒದಗಿಸಲು 1450 ಕೆರೆಗಳನ್ನು ನಿರ್ಮಾಣ ಮಾಡಿದರು ಹಾಗೂ ನಗರದಲ್ಲಿ ವ್ಯಾಪಾರ ವಹಿವಾಟ ನಡೆಸಲು ಪ್ರತ್ಯೇಕವಾದ ವ್ಯವಸ್ಥೆಯನ್ನು ಕಲ್ಪಿಸಿದರು‌. ಉತ್ತಮ ಜನಪರವಾದ ಆಡಳಿತ ನಡೆಸಿದ ಕೆಂಪೇಗೌಡರು ತಮ್ಮ ದೂರದೃಷ್ಟಿತ್ವದಿಂದಾಗಿ ಕೊಟ್ಯಾಂತರ ಜನರ ನೆಲೆಯಾಗಿ ಬೆಂಗಳೂರು ಮಾರ್ಪಟ್ಟಿದೆ.

ಎಲ್ಲ ಸಮುದಾಯಗಳಿಗೂ ಅನುಕೂಲವಾಗುವ 13 ಪೇಟೆಗಳಾದ ಬಳೇಪೇಟೆ,ತಿಗಳರ ಪೇಟೆ,ಕಾಟನ್ ಪೇಟೆ ಸೇರಿದಂತೆ ವಿವಿಧ ಪೇಟೆಗಳನ್ನು ಸ್ಥಾಪಿಸಿ,ವಾಣಿಜ್ಯ ವಹಿವಾಟುಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಕೆಂಪೇಗೌಡರ 108 ಅಡಿ ಪುತ್ಥಳಿಯನ್ನು ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸುವ ಮೂಲಕ ರಾಜ್ಯ ಸರಕಾರ ವಿಶ್ವಮಾನ್ಯತೆ ನೀಡಿದೆ. ಹಾಗೆಯೇ ನಗರದಲ್ಲಿ ರೈಲ್ವೆ ನಿಲ್ದಾಣ,ಮೆಟ್ರೋ ಸ್ಟೇಷನ್ ಮತ್ತಿತರ ಪ್ರಖ್ಯಾತ ತಾಣಗಳಿಗೆ ಕೆಂಪೇಗೌಡರ ಹೆಸರಿಟ್ಟಿರುವುದು ಸಂತಸ ಎಂದು ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ ದೂರದೃಷ್ಟಿಯ ನಾಯಕರಾಗಿದ್ದು, ಅವರ ಚಿಂತನೆಗಳನ್ನು, ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು.  ಆ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಹನೀಯರ ಜಯಂತಿಗಳ ಸಂದರ್ಭದಲ್ಲಿ ಮಕ್ಕಳಿಗೆ ಅವರ ಬದುಕಿನ ಆದರ್ಶಗಳನ್ನು ತಿಳಿಸಬೇಕೆಂದು ಶಾಸಕರು ಬಿಇಓ ವೆಂಕಟೇಶಪ್ಪರವರಿಗೆ ಸೂಚಿಸಿದರು.

ತಹಶಿಲ್ದಾರ್ ಮನೀಷಾ ಮಹೇಶ್ ಪತ್ರಿ ಪ್ರಾಸ್ತಾವಿಕ ಭಾಷಣ ಮಾಡಿ ಕೆಂಪೇಗೌಡ ಜಯಂತಿ ಶುಭಾಶಯಗಳನ್ನು ತಿಳಿಸಿದರು. ತದನಂತರ ಕೆಂಪೇಗೌಡ ಜಯಂತಿ ಅಂಗವಾಗಿ  ವಿಶೇಷ ಭಾಷಣ ಕಾರ  ಹಾಗೂ ಶಿಕ್ಷಕ ಸುಧಾಕರ ಅವರಿಂದ ಸಮಸ್ತ ಕೆಂಪೇಗೌಡ ಜೀವನ ಚರಿತ್ರೆ
ಬಗ್ಗೆ ಸವಿಸ್ತಾರವಾಗಿ ಹೇಳಿದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಡೊಳ್ಳು ಕುಣಿತ, ನಗಾರಿ ವಿದ್ಯಾ, ತಾಳ ಅರೇವಾದ್ಯ, ಪೂಜಾ ಕುಣಿತ, ಕಹಳೆ ವಾದ್ಯಗಳು ನಾಡಗೌಡ ಕೆಂಪೇಗೌಡ ಸ್ತಬ್ಧ ಚಿತ್ರ ಹಾಗೂ ವೇಷಧಾರಿಗಳ ಅದ್ದೂರಿ ಮೆರವಣಿಗೆ ನೆಡೆಯಿತು.

ಈ ಸಂದರ್ಭದಲ್ಲಿ 2024_25ನೇ ಸಾಲಿನ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಸೇರಿದಂತೆ ವಿವಿಧ ಕೋರ್ಸ್ ಗಳಲ್ಲಿ  ಹೆಚ್ಚು ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಗದು ಬಹುಮಾನ  ಹಾಗೂ ಪ್ರಗತಿಪರ ರೈತರು ಹಾಗೂ ಪ್ರಗತಿಪರ ಮಹಿಳೆಯರನ್ನು ಈ ಸಂದರ್ಭದಲ್ಲಿ ಆತ್ಮೀಯ ವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಮನಿಷಾ ಮಹೇಶ್ ಎನ್ ಪತ್ರಿ,ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ಆರ್ ವರ್ಣಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಗೋವಿಂದರೆಡ್ಡಿ, ಬಿಇಓ ವೆಂಕಟೇಶಪ್ಪ, ತಾಪಂ ಇಓ ರಮೇಶ್,ಶಿಕ್ಷಣ ಸಮನ್ವಯ ಅಧಿಕಾರಿ ಆರ್.ವೆಂಕಟರಾಮ್, ಒಕ್ಕಲಿಗರ ಸಂಘದ ಪದಾಧಿಕಾರಿ ನರಸಿಂಹ ರೆಡ್ಡಿ,ಸೋಮಶೇಖರ್ ರೆಡ್ಡಿ, ಪಿ.ಎಸ್.ಸುಬ್ಬಾರೆಡ್ಡಿ, ವೆಂಕಟರೆಡ್ಡಿ, ಬಯೈರೆಡ್ಡಿ,ಮಂಜುನಾಥ್ ರೆಡ್ಡಿ,ಅಶೋಕ, ಮಂಜುನಾಥ್ ರೆಡ್ಡಿ, ಪ್ರಭಾಕರ್ ರೆಡ್ಡಿ, ನರಸಿಂಹಾರೆಡ್ಡಿ ಮತ್ತಿತರರು ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »