Karunadu Studio

ಕರ್ನಾಟಕ

Vastu Tips: ತುಳಸಿ, ಅಲೋವೆರಾ ಒಟ್ಟಿಗೆ ನೆಡಬಹುದೇ? ಏನು ಹೇಳುತ್ತದೆ ವಾಸ್ತು ಶಾಸ್ತ್ರ? – Kannada News | Vastu Tips: Can Tulsi and Aloe Vera be planted together? What does Vastu say?


ಬೆಂಗಳೂರು: ಮನೆ, ಕೆಲಸದ ಸ್ಥಳ ಮತ್ತು ಸುತ್ತಮುತ್ತಲಿನ ಪರಿಸರ ನಮ್ಮ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಹೊಂದಿರುತ್ತದೆ. ಶಕ್ತಿಯ ಹರಿವಿನ ಮೇಲೆ ನಿಯಂತ್ರಣ ಸಾಧಿಸಬೇಕಾದರೆ ಇವುಗಳಲ್ಲಿ ಕೆಲವು ನಿಯಮಗಳನ್ನು (Vastu tips) ಪಾಲಿಸುವುದು ಮುಖ್ಯ. ಈ ನಿಯಮಗಳನ್ನೇ ನಾವು ವಾಸ್ತು (vastu for home) ಎನ್ನುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಸಸ್ಯಗಳು (vastu for plant) ನಮ್ಮ ಮನೆಗಳಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಆದರೆ ಇವುಗಳನ್ನು ಸರಿಯಾದ ದಿಕ್ಕು ಮತ್ತು ನಿಯಮಗಳನ್ನು ಪಾಲಿಸಿ ನೆಡುವುದು ಮುಖ್ಯ.

ಮನೆಯ ಸುತ್ತಮುತ್ತ ಕೆಲವೊಂದು ಸಸ್ಯಗಳನ್ನು ನೆಡುವುದರಿಂದ ಪರಿಸರ ಶುದ್ಧವಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಯು ಹರಡುತ್ತದೆ. ಅಂತಹ ಎರಡು ಸಸ್ಯಗಳೆಂದರೆ ತುಳಸಿ ಮತ್ತು ಅಲೋವೆರಾ. ಈ ಸಸ್ಯಗಳಿಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ತುಳಸಿ ಬಹಳ ಪವಿತ್ರವೆಂದು ಪರಿಗಣಿಸಲ್ಪಟ್ಟ ಸಸ್ಯ. ಅಲೋವೆರಾ ಆರೋಗ್ಯ ಮತ್ತು ಚರ್ಮಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ.

ತುಳಸಿ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಸಸ್ಯಗಳನ್ನು ಒಟ್ಟಿಗೆ ನೆಡಬಾರದು. ಯಾಕೆಂದರೆ ಇದು ಆ ಸಸ್ಯಗಳ ಶಕ್ತಿಯನ್ನು ಕ್ಷೀಣಿಸುತ್ತದೆ. ಆದ್ದರಿಂದ ತುಳಸಿ ಮತ್ತು ಅಲೋವೆರಾ ಸಸ್ಯಗಳನ್ನು ಒಟ್ಟಿಗೆ ನೆಡಬಹುದೇ ಎನ್ನುವುದಕ್ಕೆ ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ ಹೇಳುವುದು ಹೀಗೆ…

ತುಳಸಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಪವಿತ್ರ ಸಸ್ಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಸಸ್ಯವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದು ಪೂಜನೀಯ ಸಸ್ಯವಾಗಿದೆ. ಅದಕ್ಕಾಗಿಯೇ ತುಳಸಿ ಸಸ್ಯವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಸೂಕ್ತವೆಂದು ಪರಿಗಣಿಸಲಾಗಿದೆ. ಇದು ಧಾರ್ಮಿಕ ಮಹತ್ವ ಹೊಂದಿರುವ ಸಸ್ಯವಾಗಿರುವುದರಿಂದ ಮನೆಯ ಈಶಾನ್ಯ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ತುಳಸಿ ಸಸ್ಯವಿರುವ ಮನೆಯಲ್ಲಿ ಸಮೃದ್ಧಿ ಸದಾ ಕಾಲ ಇರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಅಲೋವೆರಾದ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ಅಲೋವೆರಾ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಸಸ್ಯ. ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇದನ್ನು ನೆಡುವುದು ಸೂಕ್ತವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಈ ದಿಕ್ಕು ಅಗ್ನಿ ಅಂಶಕ್ಕೆ ಸೇರಿದೆ. ಅಲೋವೆರಾ ಸಸ್ಯವನ್ನು ಅಗ್ನಿ ಅಂಶದ ದಿಕ್ಕಿನಲ್ಲಿ ಇರಿಸಿದರೆ ಮನೆಗೆ ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ.

ತುಳಸಿ ಅಲೋವೆರಾ ಒಟ್ಟಿಗೆ ನೆಡಬಹುದೇ?

ತುಳಸಿ ಮತ್ತು ಅಲೋವೆರಾ ಗಿಡಗಳನ್ನು ಒಟ್ಟಿಗೆ ನೆಡುವುದು ಸೂಕ್ತವಲ್ಲ. ಎರಡೂ ಸಸ್ಯಗಳ ವಾಸ್ತು ದಿಕ್ಕು ವಿಭಿನ್ನವಾಗಿದೆ. ಆದ್ದರಿಂದ ಅವುಗಳನ್ನು ಒಟ್ಟಿಗೆ ಇಡುವುದರಿಂದ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಅಲ್ಲದೇ ಅಲೋವೆರಾ ಎಲೆಗಳಲ್ಲಿರುವ ಮುಳ್ಳುಗಳು ತುಳಸಿ ಎಲೆಗಳಿಗೆ ಹಾನಿ ಮಾಡುತ್ತದೆ.

ಇದನ್ನೂ ಓದಿ :Vastu Tips: ಜೀವನದಲ್ಲಿ ಪ್ರಗತಿಗೆ ಅಡ್ಡಿಯಾಗಬಹುದು ಈ ತಪ್ಪುಗಳು…

ದಿಕ್ಕಿನ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ಸಸ್ಯಕ್ಕೂ ನಿರ್ದಿಷ್ಟ ದಿಕ್ಕು ಬಹಳ ಮುಖ್ಯ. ತುಳಸಿಯನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಾಗೂ ಅಲೋವೆರಾವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡುವುದು ಸೂಕ್ತ. ವಾಸ್ತು ಪ್ರಕಾರ ತುಳಸಿ ಮತ್ತು ಅಲೋವೆರಾ ಗಿಡಗಳನ್ನು ಪ್ರತ್ಯೇಕ ಕುಂಡಗಳಲ್ಲಿ ನೆಡಬೇಕು. ಎರಡೂ ಸಸ್ಯಗಳಿಗೆ ನಿಯಮಿತವಾಗಿ ನೀರು ಹಾಕಿ ಕಾಪಾಡಿಕೊಳ್ಳಿ. ಈ ಎರಡೂ ಸಸ್ಯಗಳಿಗೂ ಬಿಸಿಲು ಮುಖ್ಯವಾಗಿರುತ್ತದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »